2 ಆಗ ದೂತನು ನನಗೆ, “ಏನು ನೋಡುತ್ತೀ?” ಎಂದಾಗ,
3 ಆಗ ದೂತನು ನನಗೆ, “ಭೂಮಿಯ ಮೇಲೆಲ್ಲಾ ಹರಡುವ ಶಾಪವು ಇದೇ. ಈ ದಿಕ್ಕಿನಲ್ಲಿ ಬರೆದಿರುವ ಪ್ರಕಾರ ಕಳ್ಳತನ ಮಾಡುವವರೆಲ್ಲರನ್ನು ತೆಗೆದುಹಾಕಲಾಗುವುದು. ಸುಳ್ಳಾಣೆ ಇಡುವವರೆಲ್ಲರನ್ನು ಆ ಕಡೆಯಲ್ಲಿ ಬರೆದಿರುವ ಪ್ರಕಾರ ತೆಗೆದುಹಾಕಲಾಗುವುದು. 4 ‘ನಾನು ಶಾಪವನ್ನು ಕಳುಹಿಸುತ್ತೇನೆ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಅದು ಕಳ್ಳನ ಮನೆಯಲ್ಲಿಯೂ, ನನ್ನ ಹೆಸರಿನಿಂದ ಸುಳ್ಳಾಗಿ ಆಣೆ ಇಡುವವನ ಮನೆಯಲ್ಲಿಯೂ ಪ್ರವೇಶಿಸಿ, ಅವನ ಮನೆಯಲ್ಲಿ ನಿಂತು, ಅದನ್ನೂ, ಅದರ ಮರಗಳನ್ನೂ, ಅದರ ಕಲ್ಲುಗಳನ್ನೂ ನಾಶಮಾಡುವುದು.’ ”
6 ನಾನು, “ಇದೇನು?” ಎಂದು ಕೇಳಿದಾಗ,
7 ಸೀಸದ ಮುಚ್ಚಳವು ತೆಗೆಯಲಾಯಿತು. ಆ ಬುಟ್ಟಿಯಲ್ಲಿ ಒಬ್ಬ ಸ್ತ್ರೀ ಕುಳಿತುಕೊಂಡಿದ್ದಳು. 8 ಆತನು, “ಇದು ದುಷ್ಟತ್ವವು,” ಎಂದು ಹೇಳಿ ಆಕೆಯನ್ನು ಬುಟ್ಟಿಯಲ್ಲಿ ಪುನಃ ಅದುಮಿ, ಆ ಬುಟ್ಟಿಯ ಮುಚ್ಚಳವನ್ನು ಮುಚ್ಚಿದನು.
9 ಆಗ ನಾನು ಕಣ್ಣೆತ್ತಿ ನೋಡಿದಾಗ, ಇಬ್ಬರು ಸ್ತ್ರೀಯರು ಇದ್ದರು. ಅವರ ರೆಕ್ಕೆಗಳು ರಭಸವಾಗಿದ್ದವು. ಅವರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳ ಹಾಗಿದ್ದವು. ಅವರು ಆಕಾಶ ಮತ್ತು ಭೂಮಿಯ ನಡುವೆ ಬುಟ್ಟಿಯನ್ನು ಎತ್ತಿದರು.
10 ಆಗ ನಾನು ನನ್ನ ಸಂಗಡ ಮಾತನಾಡಿದ ದೂತನಿಗೆ, “ಇವರು ಅಳತೆಯ ಬುಟ್ಟಿಯನ್ನು ಎಲ್ಲಿಗೆ ಹೊತ್ತುಕೊಂಡು ಹೋಗುತ್ತಾರೆ?” ಎಂದೆನು.
11 ದೂತನು ನನಗೆ, “ಶಿನಾರ್ ದೇಶದಲ್ಲಿ ಅದಕ್ಕೆ ಮನೆ ಕಟ್ಟುವುದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಅದು ಸ್ಥಾಪಿತವಾಗಿ, ತನ್ನ ಸ್ಥಾನದಲ್ಲಿ ಇರಿಸಲಾಗುವುದು,” ಎಂದನು.
<- ಜೆಕರ್ಯ 4ಜೆಕರ್ಯ 6 ->