ಕೀರ್ತನೆ 120
ಯಾತ್ರಾ ಗೀತೆ.
1 ನನ್ನ ಇಕ್ಕಟ್ಟಿನಲ್ಲಿ ನಾನು ಯೆಹೋವ ದೇವರಿಗೆ ಕೂಗಿದೆನು;
ಅವರು ನನಗೆ ಉತ್ತರಕೊಟ್ಟರು.
2 ಯೆಹೋವ ದೇವರೇ, ನನ್ನ ಪ್ರಾಣವನ್ನು
ಸುಳ್ಳು ತುಟಿಯಿಂದಲೂ,
ಮೋಸದ ನಾಲಿಗೆಯಿಂದಲೂ ಬಿಡಿಸಿರಿ.
3 ಮೋಸದ ನಾಲಿಗೆಯೇ,
ದೇವರು ನಿನಗೆ ಏನು ಕೊಡಬೇಕು?
ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು?
4 ಪರಾಕ್ರಮಶಾಲಿಯ ಹದವಾದ ಬಾಣಗಳು
ಮತ್ತು ಜಾಲಿ ಮರದ ಕೆಂಡಗಳಿಂದ ನಿನಗೆ ಶಿಕ್ಷೆಯಾಗುವುದು.
5 ಅಯ್ಯೋ, ನಾನು ಮೆಷೆಕಿನಲ್ಲಿ ತಂಗಬೇಕಲ್ಲಾ!
ಕೇದಾರಿನ ಗುಡಾರಗಳ ಬಳಿ ವಾಸಮಾಡುತ್ತೇನೆ.
6 ನಾನು ಸಮಾಧಾನವನ್ನು ವಿರೋಧಿಸುವವರ
ಮಧ್ಯದಲ್ಲಿ ಬಹುಕಾಲ ಜೀವಿಸಬೇಕಾಯಿತು.
7 ನಾನು ಶಾಂತಿ ಪ್ರಿಯನು;