4 ಪ್ರತಿಯೊಂದು ಪಟ್ಟಣದಿಂದ ಬಹುಜನರು ಅವರ ಬಳಿಗೆ ಒಟ್ಟಾಗಿ ಸೇರಿ ಬರಲು ಯೇಸು ಒಂದು ಸಾಮ್ಯವನ್ನು ಅವರಿಗೆ ಹೇಳಿದರು. 5 “ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುತ್ತಿರುವಾಗ, ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು; ಅವು ಕಾಲ್ತುಳಿತಕ್ಕೆ ಒಳಗಾದವು, ಆಕಾಶದ ಪಕ್ಷಿಗಳು ಅವುಗಳನ್ನು ಹೆಕ್ಕಿ ತಿಂದವು. 6 ಇದಲ್ಲದೆ ಕೆಲವು ಬೀಜಗಳು ಕಲ್ಲುಭೂಮಿಯ ಮೇಲೆ ಬಿದ್ದವು, ಅವು ಮೊಳೆತ ಕೂಡಲೇ ತೇವ ಇಲ್ಲದಿರುವ ಕಾರಣ ಒಣಗಿಹೋದವು. 7 ಇನ್ನು ಕೆಲವು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು, ಆಗ ಮುಳ್ಳುಗಿಡಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು. 8 ಉಳಿದ ಬೀಜಗಳು ಒಳ್ಳೆಯ ನೆಲದ ಮೇಲೆ ಬಿದ್ದವು. ಆಗ ಅವು ಬೆಳೆದು ನೂರರಷ್ಟು ಫಲಕೊಟ್ಟವು.”
9 ಯೇಸುವಿನ ಶಿಷ್ಯರು ಅವರನ್ನು ಈ ಸಾಮ್ಯದ ಅರ್ಥ ಏನಾಗಿರಬಹುದು? ಎಂದು ಕೇಳಿದರು. 10 ಅದಕ್ಕೆ ಯೇಸು, “ದೇವರ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವುದಕ್ಕೆ ನಿಮಗೆ ಅನುಮತಿಸಲಾಗಿದೆ, ಆದರೆ ಉಳಿದವರಿಗೆ,
11 “ಆ ಸಾಮ್ಯದ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ. 12 ವಾಕ್ಯವನ್ನು ಕೇಳಿದವರು ನಂಬಿ ರಕ್ಷಣೆ ಹೊಂದಿಕೊಳ್ಳದಂತೆ, ಪಿಶಾಚನು ಬಂದು ಅವರ ಹೃದಯದೊಳಗಿಂದ, ಆ ವಾಕ್ಯವನ್ನು ತೆಗೆದುಬಿಡುತ್ತಾನೆ, ಇವರೇ ಆ ಬೀಜಗಳು ಬಿದ್ದ ಪಕ್ಕದ ದಾರಿಯಾಗಿದ್ದಾರೆ. 13 ಬೀಜ ಬಿದ್ದ ಕಲ್ಲುಭೂಮಿಯು ಯಾರೆಂದರೆ ವಾಕ್ಯವನ್ನು ಕೇಳಿದಾಗ ಸಂತೋಷದಿಂದ ಸ್ವೀಕರಿಸುವವರು, ಆದರೆ ಇವರು ಬೇರಿಲ್ಲದಿರುವುದರಿಂದ, ಸ್ವಲ್ಪಕಾಲ ನಂಬಿ, ಶೋಧನೆ ಬಂದಾಗ ಬಿದ್ದುಹೋಗುವವರು. 14 ಬೀಜ ಬಿದ್ದ ಮುಳ್ಳುನೆಲವು ಯಾರೆಂದರೆ ವಾಕ್ಯವನ್ನು ಕೇಳಿದ ಮೇಲೆ ಮುಂದುವರಿದು, ಈ ಜೀವನದ ಚಿಂತೆಗಳಿಂದಲೂ ಐಶ್ವರ್ಯಗಳಿಂದಲೂ ಮತ್ತು ಭೋಗಗಳಿಂದಲೂ ಅದುಮಿಬಿಟ್ಟು, ಪರಿಪಕ್ವತೆಗೆ ಫಲಕೊಡದಿದ್ದವರು. 15 ಆದರೆ ಬೀಜ ಬಿದ್ದ ಒಳ್ಳೆಯ ಭೂಮಿಯವರು ಯಾರೆಂದರೆ ಯಥಾರ್ಥವಾದ ಒಳ್ಳೆಯ ಹೃದಯದಿಂದ, ವಾಕ್ಯವನ್ನು ಕೇಳಿ ಅದನ್ನು ಕೈಕೊಂಡು, ತಾಳ್ಮೆಯಿಂದ ಫಲಿಸುವವರೇ,” ಎಂದು ಹೇಳಿದರು.
21 ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನ್ನ ತಾಯಿ ಮತ್ತು ನನ್ನ ಸಹೋದರರು ಆಗಿದ್ದಾರೆ,” ಎಂದು ಹೇಳಿದರು.
24 ಆಗ ಶಿಷ್ಯರು ಯೇಸುವಿನ ಬಳಿ ಬಂದು ಅವರನ್ನು ಎಬ್ಬಿಸಿ, “ಗುರುವೇ, ಗುರುವೇ, ನಾವು ಮುಳುಗುತ್ತಿದ್ದೇವೆ!” ಎಂದರು.
30 ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದರು.
32 ಆಗ ಅಲ್ಲಿ ಬೆಟ್ಟದ ಮೇಲೆ ಹಂದಿಗಳ ಹಿಂಡು ಮೇಯುತ್ತಿದ್ದರಿಂದ ಅವುಗಳೊಳಗೆ ತಾವು ಸೇರಿಕೊಳ್ಳಲು ಅಪ್ಪಣೆ ಕೊಡಬೇಕೆಂದು ಯೇಸುವನ್ನು ಬೇಡಿಕೊಂಡವು, ಅವರು ಅವುಗಳಿಗೆ ಅನುಮತಿ ಕೊಟ್ಟರು. 33 ಆಗ ಆ ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು, ಹಂದಿಗಳೊಳಗೆ ಸೇರಿದವು. ಆ ಗುಂಪು ಚುರುಕಾಗಿ ಓಡಿ, ಕಡಿದಾದ ಬದಿಯಿಂದ ಸರೋವರಕ್ಕೆ ಬಿದ್ದು ಮುಳುಗಿಹೋಯಿತು.
34 ಹಂದಿಗಳನ್ನು ಮೇಯಿಸುತ್ತಿದ್ದವರು ನಡೆದದ್ದನ್ನು ಕಂಡು, ಓಡಿಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ಅದನ್ನು ತಿಳಿಯಪಡಿಸಿದರು, 35 ಆಗ ಜನರು ನಡೆದ ಸಂಗತಿ ಏನೆಂದು ಕಾಣುವುದಕ್ಕಾಗಿ ಹೊರಟು ಯೇಸುವಿನ ಬಳಿಗೆ ಬಂದರು. ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯುಳ್ಳವನಾಗಿ, ಯೇಸುವಿನ ಪಾದಗಳ, ಬಳಿಯಲ್ಲಿ ಕುಳಿತಿರುವುದನ್ನು ಕಂಡು ಭಯಪಟ್ಟರು. 36 ನಡೆದದ್ದನ್ನು ಕಂಡವರು, ಯಾವ ರೀತಿಯಲ್ಲಿ ದೆವ್ವಪೀಡಿತನಾಗಿದ್ದವನು ಮತ್ತೆ ಸ್ವಸ್ಥನಾದನೆಂದು ಅವರಿಗೆ ತಿಳಿಯಪಡಿಸಿದರು. 37 ಆಗ ಗೆರಸೇನರ ಸೀಮೆಯ ಸುತ್ತಮುತ್ತಲಿನ ಜನಸಮೂಹವೆಲ್ಲವು, ಬಹಳ ಭಯಹಿಡಿದವರಾದುದರಿಂದ ಅವರು ತಮ್ಮ ಬಳಿಯಿಂದ ಹೊರಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು. ಯೇಸು ದೋಣಿಯನ್ನು ಹತ್ತಿ ಹಿಂದಿರುಗಿದರು.
38 ಆಗ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ತಾನೂ ಅವರ ಜೊತೆಯಲ್ಲಿ ಬರುವೆನೆಂದು, ಯೇಸುವನ್ನು ಬೇಡಿಕೊಂಡನು, ಆದರೆ ಯೇಸು ಅವನಿಗೆ, 39 “ನೀನು ನಿನ್ನ ಮನೆಗೆ ಹಿಂದಿರುಗಿ ಹೋಗಿ ದೇವರು ನಿನಗೆ ಎಂಥಾ ಮಹಾಕಾರ್ಯಗಳನ್ನು ಮಾಡಿದ್ದಾರೆಂಬುದನ್ನು ಹೇಳು,” ಎಂದು ಅವನನ್ನು ಕಳುಹಿಸಿಬಿಟ್ಟರು. ಅವನು ತನ್ನ ಮಾರ್ಗವಾಗಿ ಹೊರಟುಹೋಗಿ ಯೇಸು ತನಗೆ ಮಾಡಿದ ಮಹಾಕಾರ್ಯಗಳನ್ನು ಊರೆಲ್ಲಾ ಸಾರಿದನು.
45 ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದರು.
46 ಆದರೆ ಯೇಸು, “ಯಾರೋ ಒಬ್ಬರು ನನ್ನನ್ನು ಮುಟ್ಟಿದ್ದಾರೆ; ನನ್ನಿಂದ ಗುಣಪಡಿಸುವ ಶಕ್ತಿಯು ಹೊರಟಿತೆಂದು ನನಗೆ ತಿಳಿಯಿತು,” ಎಂದರು.
47 ಆ ಸ್ತ್ರೀಯು, ತಾನು ಇನ್ನು ಮರೆಮಾಡಲು ಸಾಧ್ಯವಿಲ್ಲವೆಂದು ತಿಳಿದು, ನಡುಗುತ್ತಾ ಬಂದು ಯೇಸುವಿನ ಮುಂದೆ ಅಡ್ಡಬಿದ್ದು, ಯಾವ ಕಾರಣದಿಂದ ಆಕೆಯು ಯೇಸುವನ್ನು ಮುಟ್ಟಿದಳೆಂದೂ ಹೇಗೆ ತಾನು ಕೂಡಲೇ ಸ್ವಸ್ಥಳಾದಳೆಂದೂ ಎಲ್ಲಾ ಜನರ ಮುಂದೆ ಅವರಿಗೆ ತಿಳಿಯಪಡಿಸಿದಳು. 48 ಆಗ ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ. ಸಮಾಧಾನದಿಂದ ಹೋಗು,” ಎಂದರು.
49 ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಸಭಾಮಂದಿರದ ಅಧಿಕಾರಿಯಾದ ಯಾಯೀರನ ಮನೆಯಿಂದ ಒಬ್ಬನು ಬಂದು ಅಧಿಕಾರಿಗೆ, “ನಿನ್ನ ಮಗಳು ತೀರಿಹೋದಳು, ಇನ್ನೂ ಗುರುವಿಗೆ ತೊಂದರೆಪಡಿಸುವುದೇಕೆ?” ಎಂದನು.
50 ಯೇಸು ಅದನ್ನು ಕೇಳಿ, ಆ ಅಧಿಕಾರಿಗೆ, “ಭಯಪಡಬೇಡ; ನಂಬಿಕೆ ಮಾತ್ರ ಇರಲಿ, ಅವಳು ಬದುಕುವಳು,” ಎಂದು ಹೇಳಿದರು.
51 ಯೇಸು ಯಾಯೀರನ ಮನೆಯೊಳಕ್ಕೆ ಬಂದಾಗ ಪೇತ್ರ, ಯಾಕೋಬ ಯೋಹಾನ ಮತ್ತು ಹುಡುಗಿಯ ತಂದೆತಾಯಿಗಳ ಹೊರತು ಯಾರನ್ನೂ ಒಳಗೆ ಬರಗೊಡಲಿಲ್ಲ. 52 ಎಲ್ಲರೂ ಅಳುತ್ತಾ ಹುಡುಗಿಗಾಗಿ ಗೋಳಾಡುತ್ತಿದ್ದರು. ಯೇಸು, “ಅಳಬೇಡಿರಿ, ಆಕೆಯು ಸತ್ತಿಲ್ಲ, ನಿದ್ರೆ ಮಾಡುತ್ತಾಳೆ,” ಎಂದರು.
53 ಆಕೆಯು ಸತ್ತಿದ್ದಾಳೆಂದು ತಿಳಿದು ಅಳುತ್ತಿದ್ದವರು ಯೇಸುವನ್ನು ಹಾಸ್ಯಮಾಡಿದರು. 54 ಆದರೆ ಯೇಸು ಆಕೆಯ ಕೈಹಿಡಿದು, “ಮಗಳೇ, ಎದ್ದೇಳು!” ಎಂದು ಕರೆದರು. 55 ಆಗ ಆಕೆಯ ಪ್ರಾಣವು ಹಿಂದಿರುಗಿ ಬಂತು. ಕೂಡಲೇ ಆಕೆಯು ಎದ್ದಳು. ಆಕೆಗೆ ತಿನ್ನಲು ಏನಾದರೂ ಕೊಡುವಂತೆ ಯೇಸು ಅಪ್ಪಣೆಕೊಟ್ಟರು. 56 ಆಕೆಯ ತಂದೆತಾಯಿಗಳು ಬೆರಗಾದರು, ಆಗ ನಡೆದದ್ದನ್ನು ಅವರು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದರು.
<- ಲೂಕ 7ಲೂಕ 9 ->