11 ಯೆಹೋವ ದೇವರು ಇಸ್ರಾಯೇಲರಿಗೆ, “ನಾನು ನಿಮ್ಮನ್ನು ಈಜಿಪ್ಟ್, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ, 12 ಸೀದೋನ್ಯ, ಅಮಾಲೇಕ್ಯ, ಮಾವೋನ್ಯ ಈ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವುಗಳಿಂದ ನಿಮ್ಮನ್ನು ತಪ್ಪಿಸಿಬಿಡಲಿಲ್ಲವೋ? 13 ಆದರೂ ನೀವು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸುತ್ತಾ ಬಂದಿರಿ; ಆದ್ದರಿಂದ ಇನ್ನು ನಾನು ನಿಮ್ಮನ್ನು ರಕ್ಷಿಸುವುದಿಲ್ಲ. 14 ನೀವು ಹೋಗಿ ನಿಮಗೆ ನೀವೇ ಆಯ್ದುಕೊಂಡ ದೇವರುಗಳಿಗೆ ಕೂಗಿರಿ, ಅವರು ನಿಮ್ಮ ಸಂಕಟದ ಕಾಲದಲ್ಲಿ ನಿಮ್ಮನ್ನು ರಕ್ಷಿಸಲಿ,” ಎಂದರು.
15 ಇಸ್ರಾಯೇಲರು ಯೆಹೋವ ದೇವರಿಗೆ, “ನಾವು ಪಾಪಮಾಡಿದೆವು. ನೀವು ನಿಮಗೆ ಒಳ್ಳೆಯದಾಗಿ ತೋರುವುದನ್ನೆಲ್ಲಾ ನಮಗೆ ಮಾಡಿರಿ. ಆದರೆ ಈ ಹೊತ್ತು ನಮ್ಮನ್ನು ರಕ್ಷಿಸಿರಿ,” ಎಂದು ಬೇಡಿಕೊಂಡರು. 16 ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು, ಯೆಹೋವ ದೇವರನ್ನು ಸೇವಿಸಿದರು. ಆಗ ಯೆಹೋವ ದೇವರು ಇಸ್ರಾಯೇಲಿನ ಕಷ್ಟಕ್ಕೋಸ್ಕರ ಮನಸ್ಸಿನಲ್ಲಿ ಬಹಳ ನೊಂದುಕೊಂಡರು.
17 ಅಮ್ಮೋನಿಯರು ಏಕವಾಗಿ ಕೂಡಿಕೊಂಡು, ಗಿಲ್ಯಾದಿನಲ್ಲಿ ಪಾಳೆಯಮಾಡಿಕೊಂಡರು. ಆದರೆ ಇಸ್ರಾಯೇಲರು ಏಕವಾಗಿ ಕೂಡಿ, ಮಿಚ್ಪೆಯಲ್ಲಿ ಪಾಳೆಯಮಾಡಿಕೊಂಡರು. 18 ಆಗ ಗಿಲ್ಯಾದಿನ ಜನರೂ, ಪ್ರಧಾನರೂ ಒಬ್ಬರಿಗೊಬ್ಬರು, “ಯಾವನು ಅಮ್ಮೋನಿಯರ ಮೇಲೆ ಯುದ್ಧಮಾಡಲಾರಂಭಿಸುವನೋ, ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ತಲೆಯಾಗಿರುವನು,” ಎಂದು ಮಾತನಾಡಿಕೊಂಡರು.
<- ನ್ಯಾಯಸ್ಥಾಪಕರು 9ನ್ಯಾಯಸ್ಥಾಪಕರು 11 ->