Link to home pageLanguagesLink to all Bible versions on this site
10
ಜನಾಂಗಗಳ ಪಟ್ಟಿ
1 ನೋಹನ ಪುತ್ರರಾದ ಶೇಮ್, ಹಾಮ್, ಯೆಫೆತರಿಗೆ ಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು. ಅವರ ವಂಶಾವಳಿ ಇದು:
ಯೆಫೆತನ ವಂಶಜರು
2 ಯೆಫೆತನ ಪುತ್ರರು:
ಗೋಮೆರ್, ಮಾಗೋಗ್, ಮಾದಯ್, ಯಾವಾನ್ ತೂಬಲ್, ಮೆಷೆಕ್ ಮತ್ತು ತೀರಾಸ್.
3 ಗೋಮೆರನ ಪುತ್ರರು:
ಅಷ್ಕೆನಜ್, ರೀಫತ್, ತೋಗರ್ಮ.
4 ಯಾವಾನನ ಮಕ್ಕಳು:
ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾನೀಮ್.[a] 5 ಇವರಿಂದ ಕಡಲತೀರದ ಹಾಗೂ ದ್ವೀಪಗಳ ನಿವಾಸಿಯರು ತಮ್ಮ ಸ್ವಂತ ದೇಶ, ಭಾಷೆ, ಕುಲ ಜನಾಂಗಗಳ ಪ್ರಕಾರ ಹರಡುತ್ತಿದ್ದರು.
ಹಾಮನ ವಂಶಜರು
6 ಹಾಮನ ಪುತ್ರರು:
ಕೂಷ್, ಈಜಿಪ್ಟ್, ಪೂಟ್, ಕಾನಾನ್.
7 ಕೂಷನ ಪುತ್ರರು:
ಸೆಬ, ಹವೀಲ, ಸಬ್ತಾ, ರಾಮ, ಸಬ್ತೆಕ.
ರಾಮನ ಪುತ್ರರು:
ಶೆಬಾ ಮತ್ತು ದೆದಾನ್.
8 ಕೂಷನು ನಿಮ್ರೋದನ ತಂದೆಯಾಗಿದ್ದನು, ಇವನು ಭೂಮಿಯ ಮೇಲೆ ಬಲಿಷ್ಠ ಯುದ್ಧವೀರನಾದನು. 9 ಅವನು ಯೆಹೋವ ದೇವರ ಮುಂದೆ ಬಲಿಷ್ಠ ಬೇಟೆಗಾರನಾದನು. ಆದ್ದರಿಂದ, “ನಿಮ್ರೋದನಂತೆ ಯೆಹೋವ ದೇವರ ಮುಂದೆ ಬಲಿಷ್ಠ ಬೇಟೆಗಾರ” ಎಂಬ ಹೇಳಿಕೆ ಇಂದಿಗೂ ಇದೆ. 10 ಶಿನಾರ್ ದೇಶದಲ್ಲಿರುವ ಬಾಬಿಲೋನ್, ಯೆರೆಕ್, ಅಕ್ಕದ್, ಕಲ್ನೇ ಎಂಬವು ಅವನ ರಾಜ್ಯದ ಪ್ರಾರಂಭದ ಕೇಂದ್ರಗಳು. 11 ಆ ದೇಶದಿಂದ ಅವನು ಅಸ್ಸೀರಿಯಕ್ಕೆ ಹೋಗಿ ನಿನೆವೆ, ರೆಹೋಬೋತೀರ್, ಕೆಲಹ ಪಟ್ಟಣಗಳನ್ನೂ 12 ಮತ್ತು ನಿನೆವೆ ಹಾಗೂ ಕೆಲಹ ಮಧ್ಯದಲ್ಲಿರುವ ರೆಸೆನ್ ಮಹಾಪಟ್ಟಣವನ್ನು ಕಟ್ಟಿಸಿದನು.
13 ಈಜಿಪ್ಟನವರಿಂದ
ಲೂದ್ಯರು, ಅನಾಮ್ಯರು, ಲೆಹಾಬ್ಯರು, ನಫ್ತುಹ್ಯರು 14 ಪತ್ರುಸ್ಯರು, ಕಸ್ಲುಹ್ಯರು, ಕಫ್ತೋರ್ಯರು ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದವರು,
15 ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್;
ಆಮೇಲೆ ಹೇತನು ಹುಟ್ಟಿದನು. 16 ಯೆಬೂಸಿಯರು, ಅಮೋರಿಯರು, ಗಿರ್ಗಾಷಿಯರು 17 ಹಿವ್ವಿಯರು, ಅರ್ಕಿಯರು, ಸೀನಿಯರು, 18 ಅರ್ವಾದಿಯರು, ಚೆಮಾರಿಯರು, ಹಮಾತಿಯರು, ಕಾನಾನನಿಂದ ಹುಟ್ಟಿದರು.
ತರುವಾಯ ಕಾನಾನ್ ಕುಟುಂಬಗಳು ವಿಸ್ತಾರವಾಗಿ ಹರಡಿದವು. 19 ಕಾನಾನ್ಯರ ಮೇರೆಯು ಸೀದೋನ್ ಪಟ್ಟಣದಿಂದ ಗೆರಾರಿನ ಮಾರ್ಗವಾಗಿ ಗಾಜಾ ಪಟ್ಟಣದವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳ ಮಾರ್ಗವಾಗಿ ಲೆಷಾ ಊರಿನವರೆಗೂ ಇರುತ್ತದೆ.
20 ಇವರು ತಮ್ಮ ಕುಟುಂಬಗಳ ಮತ್ತು ತಮ್ಮ ಭಾಷೆಗಳ ಪ್ರಕಾರ, ತಮ್ಮ ಸೀಮೆ ಹಾಗು ದೇಶಗಳಲ್ಲಿಯೂ ಇರುವ ಹಾಮನ ಪುತ್ರರು.
ಶೇಮನ ವಂಶಜರು
21 ಯೆಫೆತನ ಹಿರಿಯ ಸಹೋದರನೂ ಏಬೆರನ ಮಕ್ಕಳ ಮೂಲಪುರುಷನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು.
22 ಶೇಮನ ಪುತ್ರರು:
ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್, ಅರಾಮ್.
23 ಅರಾಮನ ಪುತ್ರರು:
ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್.[b]
24 ಅರ್ಪಕ್ಷದ್ ಶೆಲಹನ ತಂದೆ;
ಶೆಲಹ ಏಬೆರನ ತಂದೆ,
25 ಏಬೆರನಿಗೆ ಇಬ್ಬರು ಪುತ್ರರು ಹುಟ್ಟಿದರು.
ಒಬ್ಬನಿಗೆ ಪೆಲೆಗ್ ಎಂದು ಹೆಸರಿಡಲಾಯಿತು, ಅವನ ಕಾಲದಲ್ಲಿ ಲೋಕದಲ್ಲಿಯ ಜನರು ವಿಭಾಗವಾದದ್ದರಿಂದ ಈ ಹೆಸರು ಅವನಿಗೆ ಬಂದಿತು. ಅವನ ತಮ್ಮನ ಹೆಸರು ಯೊಕ್ತಾನ್.
26 ಯೊಕ್ತಾನನ ಸಂತಾನದವರು:
ಅಲ್ಮೋದಾದ್, ಶೆಲೆಪ್, ಹಜರ್ಮಾವೆತ್, ಯೆರಹ, 27 ಹದೋರಾಮ್, ಊಜಾಲ್, ದಿಕ್ಲಾ, 28 ಓಬಾಲ್, ಅಬೀಮಯೇಲ್, ಶೆಬಾ, 29 ಓಫೀರ್, ಹವೀಲಾ ಹಾಗೂ ಯೋಬಾಬ್ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಪುತ್ರರು.
30 ಅವರ ನಿವಾಸವು ಮೇಶಾ ನಾಡು ಮೊದಲುಗೊಂಡು ಪೂರ್ವದಿಕ್ಕಿನ ಸೆಫಾರ್ ಎಂಬ ಬೆಟ್ಟದವರೆಗೂ ಹರಡಿತ್ತು.
31 ಇವರೇ ತಮ್ಮ ಕುಟುಂಬಗಳ, ತಮ್ಮ ಭಾಷೆಗಳ ಪ್ರಕಾರ, ತಮ್ಮ ದೇಶಗಳಲ್ಲಿ, ತಮ್ಮ ಜನಾಂಗಗಳ ಪ್ರಕಾರ ಶೇಮನ ಪುತ್ರರು.
 
32 ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರವಾಗಿ ನೋಹನ ಪುತ್ರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ಹರಡಿಕೊಂಡವು.

<- ಆದಿಕಾಂಡ 9ಆದಿಕಾಂಡ 11 ->