6 ಅಲ್ಲಿದ್ದ ಸಭೆಯ ನಾಯಕರೂ ಸಹ ನನ್ನ ಸಂದೇಶದ ಬಗ್ಗೆ ನನಗೆ ಏನೂ ಹೇಳಲಿಲ್ಲ. ಅವರು ಎಂಥವರು ಎಂಬುದು ನನಗೆ ಮುಖ್ಯವಲ್ಲ; ಏಕೆಂದರೆ, ದೇವರು ಪಕ್ಷಪಾತಿಯಲ್ಲ. 7 ಅದಕ್ಕೆ ಬದಲಾಗಿ, ಯೆಹೂದ್ಯರಿಗೆ ಸುವಾರ್ತೆ ಸಾರುವುದು ಪೇತ್ರನಿಗೆ ಒಪ್ಪಿಸಿಕೊಟ್ಟಂತೆಯೇ, ಯೆಹೂದ್ಯರಲ್ಲದವರಿಗೆ ಸುವಾರ್ತೆ ಸಾರುವುದು ನನಗೆ ಒಪ್ಪಿಸಲಾಯಿತು ಎಂಬುದನ್ನು ಸಭೆಯ ನಾಯಕರು ಸಹ ಗ್ರಹಿಸಿಕೊಂಡರು. 8 ಏಕೆಂದರೆ, ಯೆಹೂದ್ಯರಿಗೆ ಅಪೊಸ್ತಲನಾಗಿರುವ ಪೇತ್ರನಲ್ಲಿ ಕಾರ್ಯಮಾಡಿದ ದೇವರೇ, ಯೆಹೂದ್ಯರಲ್ಲದವರಿಗೆ ನಾನು ಅಪೊಸ್ತಲನಾಗಿರಲು ನನ್ನಲ್ಲಿ ಕಾರ್ಯಮಾಡಿದರು. 9 ಸಭೆಯ ಸ್ತಂಭಗಳಂತಿರುವ ನಾಯಕರಾದ ಯಾಕೋಬ, ಪೇತ್ರ[a] ಹಾಗೂ ಯೋಹಾನರು ನನಗೆ ಕೊಡಲಾದ ಕೃಪೆಯನ್ನು ಗ್ರಹಿಸಿಕೊಂಡರು. ಆಗ ಅವರು, ನನಗೂ ಬಾರ್ನಬನಿಗೂ ಅನ್ಯೋನ್ಯತೆಯ ಬಲಗೈಯನ್ನು ಕೊಟ್ಟರು. ಹೀಗೆ ನಾವು ಯೆಹೂದ್ಯರಲ್ಲದವರ ಬಳಿಗೂ ಅವರು ಯೆಹೂದ್ಯರ ಬಳಿಗೂ ಹೋಗುವಂತೆ ತೀರ್ಮಾನವಾಯಿತು. 10 ಅವರು ನಾವು ಬಡವರನ್ನು ಜ್ಞಾಪಕಮಾಡಿಕೊಳ್ಳಬೇಕೆಂಬ ಒಂದು ವಿಷಯವನ್ನು ಮಾತ್ರ ಕೇಳಿಕೊಂಡರು. ನಾನು ಇದನ್ನು ಮಾಡುವುದರಲ್ಲಿ ಆಸಕ್ತನಾಗಿದ್ದೆನು.
14 ಆದರೆ ಅವರು ಸುವಾರ್ತೆಯ ಸತ್ಯದ ಪ್ರಕಾರ ನೆಟ್ಟಗೆ ನಡೆಯಲಿಲ್ಲವೆಂದು ನಾನು ಕಂಡಾಗ ಎಲ್ಲರ ಮುಂದೆ ಪೇತ್ರನಿಗೆ, “ನೀನು ಯೆಹೂದ್ಯನಾಗಿದ್ದು, ಯೆಹೂದ್ಯರಂತೆ ಜೀವಿಸದೆ ಯೆಹೂದ್ಯರಲ್ಲದವರಂತೆ ಜೀವಿಸಿ, ಯೆಹೂದ್ಯರಲ್ಲದವರು ಯೆಹೂದ್ಯರಂತೆ ಜೀವಿಸಬೇಕೆಂದು ನೀನು ಒತ್ತಾಯ ಮಾಡುವುದು ಹೇಗೆ?” ಎಂದು ಕೇಳಿದೆ.
15 “ನಾವಂತೂ ಹುಟ್ಟು ಯೆಹೂದ್ಯರು, ಪಾಪಿಗಳೆಂದು ಕರೆಯಲಾಗುವ ಯೆಹೂದ್ಯರಲ್ಲದವರಲ್ಲ. 16 ಒಬ್ಬ ವ್ಯಕ್ತಿ ಮೋಶೆಯ ನಿಯಮದ ಕ್ರಿಯೆಗಳಿಂದ ನೀತಿವಂತನಾಗುವುದಿಲ್ಲ. ಆದರೆ ಕ್ರಿಸ್ತ ಯೇಸುವನ್ನು ನಂಬುವುದರಿಂದಲೇ ನೀತಿವಂತನಾಗುತ್ತಾನೆ ಎಂದು ನಮಗೆ ತಿಳಿದಿದೆ. ನಾವು ಸಹ ಮೋಶೆಯ ನಿಯಮದ ಕ್ರಿಯೆಗಳಿಂದಲ್ಲ, ಕ್ರಿಸ್ತ ಯೇಸುವಿನ ನಂಬಿಕೆಯ ಮೂಲಕ ನೀತಿವಂತರಾವುದಕ್ಕಾಗಿ ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ಇಟ್ಟೆವು. ಏಕೆಂದರೆ, ಮೋಶೆಯ ನಿಯಮದ ಕ್ರಿಯೆಗಳಿಂದ ಯಾರೂ ನೀತಿವಂತರಾಗುವುದಿಲ್ಲ.
17 “ಆದರೆ, ನಾವು ಕ್ರಿಸ್ತ ಯೇಸುವಿನಲ್ಲಿ ನೀತಿವಂತರಾಗಲು ಪ್ರಯತ್ನಿಸುವ ನಾವೂ ಪಾಪಿಗಳಾಗಿ ಇರುವುದಾದರೆ, ಕ್ರಿಸ್ತ ಯೇಸು ಪಾಪಕ್ಕೆ ಪ್ರೋತ್ಸಾಹ ನೀಡಿದ ಹಾಗಾಗುವುದೋ? ಎಂದಿಗೂ ಇಲ್ಲ. 18 ನಾನು ಕೆಡವಿದ್ದನ್ನೇ ಪುನಃ ನಾನೇ ಕಟ್ಟಿದರೆ, ನನ್ನನ್ನು ನಿಯಮ ಉಲ್ಲಂಘಿಸಿದವನು ಎಂದು ರುಜುಪಡಿಸಿಕೊಳ್ಳುತ್ತೇನಲ್ಲಾ?
19 “ನಾನಾದರೋ ದೇವರಿಗಾಗಿ ಜೀವಿಸುವುದಕ್ಕೋಸ್ಕರ, ನಿಯಮದ ಮೂಲಕ, ನಿಯಮದ ಪಾಲಿಗೆ ಸತ್ತವನಾಗಿದ್ದೇನೆ. 20 ಕ್ರಿಸ್ತ ಯೇಸುವಿನೊಂದಿಗೆ ನಾನೂ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ. ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತ ಯೇಸುವೇ ನನ್ನಲ್ಲಿ ಜೀವಿಸುತ್ತಾರೆ. ನನ್ನನ್ನು ಪ್ರೀತಿಸಿ ನನಗೋಸ್ಕರ ತಮ್ಮನ್ನೇ ಒಪ್ಪಿಸಿಕೊಟ್ಟ ದೇವಪುತ್ರ ಆಗಿರುವವರ ನಂಬಿಕೆಯಲ್ಲಿಯೇ ಈಗ ನಾನು ಈ ಶರೀರದಲ್ಲಿ ಜೀವಿಸುತ್ತಿದ್ದೇನೆ. 21 ನಾನು ದೇವರ ಕೃಪೆಯನ್ನು ತಿರಸ್ಕರಿಸುವುದಿಲ್ಲ. ಏಕೆಂದರೆ ನಿಯಮದ ಮೂಲಕ ನೀತಿಯು ಬರುವುದಾದರೆ, ಕ್ರಿಸ್ತ ಯೇಸು ಕಾರಣವಿಲ್ಲದೆ ಸತ್ತಂತಾಯಿತು!”
<- ಗಲಾತ್ಯದವರಿಗೆ 1ಗಲಾತ್ಯದವರಿಗೆ 3 ->