5 ಆದರೆ ಯೆಹೂದ್ಯರು ಮತ್ಸರದಿಂದ ಕೂಡಿ, ಬೀದಿಗಳಲ್ಲಿ ತಿರುಗಾಡುವ ಕೆಲವು ದುಷ್ಟವ್ಯಕ್ತಿಗಳನ್ನು ಕೂಡಿಸಿ ಪಟ್ಟಣದಲ್ಲಿ ಗಲಭೆ ಎಬ್ಬಿಸಿದರು. ಜನಸಮೂಹದ ಮುಂದೆ ಪೌಲ, ಸೀಲರನ್ನು ಎಳೆದು ತರುವಂತೆ ಅವರನ್ನು ಹುಡುಕುತ್ತಾ ಯಾಸೋನ ಎಂಬುವನ ಮನೆಯನ್ನು ಮುತ್ತಿದರು. 6 ಆದರೆ ಅಲ್ಲಿ ಅವರಿಲ್ಲದಿರುವುದನ್ನು ಕಂಡು ಅವರು ಯಾಸೋನನನ್ನೂ ಕೆಲವು ಸಹೋದರರನ್ನೂ ಎಳೆದುಕೊಂಡು ಬಂದು ಪಟ್ಟಣದ ಅಧಿಕಾರಿಗಳ ಮುಂದೆ ನಿಲ್ಲಿಸಿ, “ಲೋಕವನ್ನು ತಲೆಕೆಳಗೆ ಮಾಡಿರುವ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ. 7 ಯಾಸೋನನು ಅವರನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡಿದ್ದಾನೆ. ಅವರು ಯೇಸು ಎಂಬ ಬೇರೊಬ್ಬ ಅರಸನಿದ್ದಾನೆ ಎಂದು ಹೇಳುತ್ತಾ ಕೈಸರನ ವಿರುದ್ಧವಾಗಿ ನಡೆಯುತ್ತಾರೆ,” ಎಂದು ಗಟ್ಟಿಯಾಗಿ ಕೂಗಿದರು. 8 ಇದನ್ನು ಕೇಳಿದ ಜನರೂ ಪಟ್ಟಣದ ಅಧಿಕಾರಿಗಳೂ ಕಳವಳಗೊಂಡರು. 9 ಆಮೇಲೆ ಯಾಸೋನನಿಂದಲೂ ಮತ್ತಿತರರಿಂದಲೂ ಜಾಮೀನು ಪಡೆದು ಅವರನ್ನು ಬಿಡುಗಡೆ ಮಾಡಿದರು.
13 ಆದರೆ ಪೌಲನು ದೇವರ ವಾಕ್ಯವನ್ನು ಬೆರೋಯದಲ್ಲಿ ಬೋಧಿಸುತ್ತಿದ್ದಾನೆಂಬುದು ಥೆಸಲೋನಿಕದಲ್ಲಿದ್ದ ಯೆಹೂದ್ಯರಿಗೆ ತಿಳಿದುಬಂದಾಗ ಅವರು ಅಲ್ಲಿಗೂ ಬಂದು, ಜನಸಮೂಹವನ್ನು ಪ್ರಚೋದಿಸಿ ಗಲಭೆ ಎಬ್ಬಿಸಿದರು. 14 ಆದ್ದರಿಂದ ಸಹೋದರರು ಕೂಡಲೇ ಪೌಲನನ್ನು ಸಮುದ್ರ ತೀರಕ್ಕೆ ಕಳುಹಿಸಿಬಿಟ್ಟರು. ಆದರೆ ಸೀಲ ಮತ್ತು ತಿಮೊಥೆ ಬೆರೋಯದಲ್ಲಿಯೇ ಉಳಿದುಕೊಂಡರು. 15 ಪೌಲನನ್ನು ಬಿಟ್ಟು ಬರಲು ಹೋದವರು ಅವನ ಜೊತೆ ಅಥೇನೆ ಪಟ್ಟಣದವರೆಗೆ ಹೋದರು. ಸೀಲ ಮತ್ತು ತಿಮೊಥೆಯರು ಸಾಧ್ಯವಾದಷ್ಟು ಬೇಗನೇ ತನ್ನ ಬಳಿ ಬರಬೇಕೆಂಬ ಅಪ್ಪಣೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂತಿರುಗಿ ಹೋದರು.
22 ಅರಿಯೊಪಾಗದ ಗುಂಪಿನ ಮುಂದೆ ನಿಂತು ಪೌಲನು ಹೀಗೆಂದನು: “ಅಥೇನೆಯ ಜನರೇ! ನೀವು ಪ್ರತಿಯೊಂದರಲ್ಲಿಯೂ ಹೇಗೆ ಬಹು ಧಾರ್ಮಿಕರಾಗಿದ್ದೀರಿ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. 23 ನಾನು ಸುತ್ತಮುತ್ತಲೂ ತಿರುಗಾಡುತ್ತಾ, ನಿಮ್ಮ ಆರಾಧನಾ ವಿಗ್ರಹಗಳನ್ನು ಲಕ್ಷ್ಯವಿಟ್ಟು ಗಮನಿಸಿದಾಗ,
24 “ಜಗತ್ತನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ದೇವರು ಇಹಪರಲೋಕಗಳ ಅಧಿಪತಿಯಾಗಿದ್ದಾರೆ. ಅವರು ಕೈಗಳಿಂದ ಕಟ್ಟಿದ ದೇವಾಲಯಗಳಲ್ಲಿ ವಾಸಿಸುವವರಲ್ಲ. 25 ದೇವರಿಗೆ ಏನಾದರೂ ಅವಶ್ಯಕತೆಯಿರುವಂತೆ ಮಾನವ ಹಸ್ತಗಳ ಸೇವೆಯು ಅಗತ್ಯವಿರುವುದಿಲ್ಲ. ದೇವರೇ ಎಲ್ಲರಿಗೂ ಜೀವವನ್ನೂ ಉಸಿರನ್ನೂ ಪ್ರತಿಯೊಂದನ್ನೂ ದಯಪಾಲಿಸಿರುವುದರಿಂದ, 26 ದೇವರು ಒಬ್ಬ ಮನುಷ್ಯನಿಂದ ಎಲ್ಲಾ ದೇಶಗಳನ್ನು ಸೃಷ್ಟಿಸಿ, ಜನರು ಇಡೀ ಭೂಲೋಕವನ್ನು ತುಂಬಿಕೊಳ್ಳುವಂತೆ ಮಾಡಿದರು; ಅವರವರು ಇರತಕ್ಕ ಕಾಲಾವಧಿಯನ್ನೂ ವಾಸಿಸಲು ನಿರ್ದಿಷ್ಟ ಸ್ಥಳಗಳನ್ನೂ ನೇಮಿಸಿದ್ದಾರೆ. 27 ದೇವರು ನಮ್ಮಲ್ಲಿ ಯಾರಿಂದಲೂ ದೂರವಾಗಿಲ್ಲವಾದರೂ ದೇವರನ್ನು ನಾವು ಅಪೇಕ್ಷಿಸುವಂತೆ ನಾವು ದೇವರನ್ನು ಹುಡುಕಿ ಕಂಡುಕೊಳ್ಳುವಂತೆ ಹೀಗೆ ಮಾಡಿದರು. 28 ಏಕೆಂದರೆ, ‘ನಾವು ಜೀವಿಸುವುದೂ ಚಲಿಸುವುದೂ ಇರುವುದೂ ದೇವರಲ್ಲಿಯೇ.’ ನಿಮ್ಮ ಕವಿಗಳಲ್ಲಿ ಕೆಲವರು ಹೇಳಿರುವಂತೆ, ‘ನಾವು ನಿಜಕ್ಕೂ ದೇವರ ಮಕ್ಕಳೇ ಆಗಿದ್ದೇವೆ.’
29 “ನಾವು ದೇವರ ಮಕ್ಕಳಾಗಿರುವುದರಿಂದ, ಮಾನವ ಕಲ್ಪನೆ, ಕುಶಲತೆಯಿಂದ ರೂಪಿಸಿದ ಬೆಳ್ಳಿ, ಬಂಗಾರ, ಶಿಲೆಯ ಮೂರ್ತಿಯಂತೆ ದೇವರು ಇದ್ದಾರೆಂದು ನಾವು ಭಾವಿಸಬಾರದು. 30 ಇಂಥಾ ಅಜ್ಞಾನ ಕಾಲವನ್ನು ಹಿಂದಿನ ಕಾಲದಲ್ಲಿ ದೇವರು ತಮ್ಮ ಗಮನಕ್ಕೆ ತಂದುಕೊಳ್ಳಲಿಲ್ಲ. ಆದರೆ ಈಗ ಎಲ್ಲಾ ಕಡೆಗಳಲ್ಲಿರುವ ಸರ್ವಮಾನವರೂ ಪಶ್ಚಾತ್ತಾಪ ಪಡಬೇಕೆಂದು ದೇವರು ಆಜ್ಞಾಪಿಸುತ್ತಾರೆ. 31 ಏಕೆಂದರೆ ದೇವರು ನೇಮಿಸಿದ ಒಬ್ಬರ ಮುಖಾಂತರ ಇಡೀ ಜಗತ್ತಿಗೆ ನೀತಿಗನುಸಾರವಾಗಿ ನ್ಯಾಯತೀರ್ಪು ಮಾಡುವ ಒಂದು ದಿನವನ್ನು ನೇಮಕ ಮಾಡಿದ್ದಾರೆ. ಇದನ್ನು ಎಲ್ಲರಿಗೂ ಖಚಿತ ಪಡಿಸಲೆಂದೇ ಆ ಒಬ್ಬರನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾರೆ.”
32 ಸತ್ತವರ ಪುನರುತ್ಥಾನದ ವಿಷಯವನ್ನು ಕೇಳಿದಾಗ, ಅವರಲ್ಲಿ ಕೆಲವರು ಪರಿಹಾಸ್ಯ ಮಾಡಿದರು. ಇತರರು, “ನಾವು ಇನ್ನೊಮ್ಮೆ ಈ ವಿಷಯದ ಮೇಲೆ ನೀನು ಮಾತನಾಡುವುದನ್ನು ಕೇಳುತ್ತೇವೆ,” ಎಂದರು. 33 ಹೀಗಿರಲು ಪೌಲನು ಅವರ ಮಧ್ಯದಿಂದ ಹೊರಟುಹೋದನು. 34 ಆದರೆ ಕೆಲವರು ಪೌಲನನ್ನು ಅಂಟಿಕೊಂಡು ದೇವರಲ್ಲಿ ವಿಶ್ವಾಸವನ್ನಿಟ್ಟರು. ಅವರಲ್ಲಿ ಅರಿಯೊಪಾಗದ ದಿಯೊನುಸ್ಯನು ಮತ್ತು ದಾಮರಿ ಎಂಬ ಹೆಸರಿನ ಒಬ್ಬ ಮಹಿಳೆ ಹಾಗೂ ಇನ್ನಿತರರೂ ಇದ್ದರು.
<- ಅಪೊಸ್ತಲರ ಕೃತ್ಯಗಳು 16ಅಪೊಸ್ತಲರ ಕೃತ್ಯಗಳು 18 ->