ಅಪೊಸ್ತಲರ ಕೃತ್ಯಗಳು
6 ಶಿಷ್ಯರು ಯೇಸುವಿನ ಸಂಗಡ ಇದ್ದಾಗ, “ಸ್ವಾಮೀ, ಇಸ್ರಾಯೇಲರ ರಾಜ್ಯವನ್ನು ಈ ಕಾಲದಲ್ಲಿ ಪುನಃ ಸ್ಥಾಪಿಸುವಿಯೋ?” ಎಂದು ಪ್ರಶ್ನೆ ಮಾಡಿದರು.
7 ಅದಕ್ಕೆ ಯೇಸು: “ತಂದೆ ತಮ್ಮ ಸ್ವಂತ ಅಧಿಕಾರದಿಂದ ನೇಮಿಸಿದ ಸಮಯವನ್ನಾಗಲಿ, ಕಾಲವನ್ನಾಗಲಿ, ತಿಳಿಯುವುದು ನಿಮ್ಮ ಕೆಲಸವಲ್ಲ. 8 ಆದರೆ ಪವಿತ್ರಾತ್ಮ ದೇವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯನ್ನು ಪಡೆಯುವಿರಿ. ಆಗ ನೀವು ಯೆರೂಸಲೇಮಿನಲ್ಲಿ, ಯೂದಾಯ ಪ್ರಾಂತ ಮತ್ತು ಸಮಾರ್ಯ ಪ್ರಾಂತದ ಎಲ್ಲಾ ಕಡೆಗಳಲ್ಲಿಯೂ ಹಾಗೂ ಭೂಲೋಕದ ಕೊನೆಯ ಮೇರೆಗಳವರೆಗೂ ನನಗೆ ಸಾಕ್ಷಿಗಳಾಗುವಿರಿ,” ಎಂದರು.
9 ಇದನ್ನು ಹೇಳಿದ ತರುವಾಯ, ಯೇಸು ಅವರ ಕಣ್ಣೆದುರಿನಲ್ಲಿಯೇ ಸ್ವರ್ಗಕ್ಕೆ ಏರಿಹೋದರು. ಮೋಡವು ಯೇಸುವನ್ನು ಅವರ ಕಣ್ಣಿಗೆ ಮರೆಮಾಡಿತು.
10 ಯೇಸು ಮೇಲಕ್ಕೆ ಹೋಗುತ್ತಿರಲು ಶಿಷ್ಯರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಿರುವಾಗ, ಬಿಳಿವಸ್ತ್ರ ಧರಿಸಿದ್ದ ಇಬ್ಬರು ಪುರುಷರು ಅವರ ಪಕ್ಕದಲ್ಲಿ ನಿಂತುಕೊಂಡು, 11 “ಗಲಿಲಾಯದವರೇ, ಆಕಾಶವನ್ನೇ ನೋಡುತ್ತಾ ಇಲ್ಲಿ ಏಕೆ ನಿಂತಿರುವಿರಿ? ನಿಮ್ಮ ಬಳಿಯಿಂದ ಪರಲೋಕಕ್ಕೆ ಏರಿಹೋದ ಈ ಯೇಸುವು ಪರಲೋಕಕ್ಕೆ ಹೋಗುವುದನ್ನು ನೀವು ನೋಡಿದ ರೀತಿಯಲ್ಲಿಯೇ ಹಿಂದಿರುಗಿ ಬರುವರು,” ಎಂದು ಹೇಳಿದರು.
15 ಆ ದಿನಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ವಿಶ್ವಾಸಿಗಳು ಸೇರಿದ್ದರು. ಅವರ ನಡುವೆ ಪೇತ್ರನು ಎದ್ದು ನಿಂತು, ಹೀಗೆಂದನು: 16 “ಸಹೋದರ ಸಹೋದರಿಯರೇ, ಬಹಳ ದಿನಗಳ ಹಿಂದೆ ದಾವೀದನ ಮುಖಾಂತರ ಪವಿತ್ರಾತ್ಮರು ಮುಂತಿಳಿಸಿದ ದೇವರ ವಾಕ್ಯ ಯೂದನ ವಿಷಯವಾಗಿ ನೆರವೇರಬೇಕಾಗಿತ್ತು. ಯೂದನು ಯೇಸುವನ್ನು ಬಂಧಿಸಿದವರಿಗೆ ಮಾರ್ಗದರ್ಶಕನಾಗಿದ್ದನು. 17 ಈ ಯೂದನು ನಮ್ಮಲ್ಲಿ ಒಬ್ಬನಾಗಿದ್ದು ಈ ಸೇವೆಯಲ್ಲಿ ಪಾಲುಗಾರನಾಗಿದ್ದನು.”
18 ಯೂದನು, ದ್ರೋಹ ಕೃತ್ಯದಿಂದ ಪಡೆದ ಹಣದಿಂದ ಒಂದು ಹೊಲವನ್ನು ಕೊಂಡುಕೊಂಡನು; ಅಲ್ಲಿಯೇ ಅವನು ತಲೆಕೆಳಗಾಗಿ ಬಿದ್ದು, ಹೊಟ್ಟೆ ಬಿರಿದು, ಕರುಳೆಲ್ಲಾ ಹೊರಬಂದು ಸತ್ತನು. 19 ಯೆರೂಸಲೇಮಿನಲ್ಲಿದ್ದ ಪ್ರತಿಯೊಬ್ಬರಿಗೂ ಈ ವಿಷಯ ತಿಳಿಯಿತು, ಹೀಗೆ ಆ ಹೊಲವನ್ನು ಅವರು ತಮ್ಮ ಭಾಷೆಯಲ್ಲಿ “ಅಕೆಲ್ದಮಾ” ಎಂದು ಕರೆದರು. “ರಕ್ತದ ಹೊಲ” ಎಂದು ಅದರ ಅರ್ಥ.
20 ಕೀರ್ತನೆಗಳ ಗ್ರಂಥದಲ್ಲಿ ಹೀಗೆ ಬರೆಯಲಾಗಿದೆ:
23 ಆಗ ಅವರು ಇಬ್ಬರು ಪುರುಷರ ಹೆಸರುಗಳನ್ನು ಸೂಚಿಸಿದರು: ಬಾರ್ಸಬ ಎಂಬ ಹೆಸರಿನ ಯೋಸೇಫ, ಇವನನ್ನು ಯೂಸ್ತ ಎಂಬುದಾಗಿಯೂ ಕರೆಯುತ್ತಿದ್ದರು ಮತ್ತು ಇನ್ನೊಬ್ಬನು ಮತ್ತೀಯ ಎಂಬುವನು. 24 ಆಮೇಲೆ ಅವರು, “ಕರ್ತ ಯೇಸುವೇ, ಪ್ರತಿಯೊಬ್ಬರ ಹೃದಯವನ್ನು ನೀವು ತಿಳಿದವರು. ಈ ಸೇವೆಯಿಂದ ಯೂದನು ಭ್ರಷ್ಟನಾಗಿ ತನಗೆ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ, 25 ಈ ಅಪೊಸ್ತಲರ ಸೇವೆಯನ್ನು ವಹಿಸಿಕೊಳ್ಳುವುದಕ್ಕಾಗಿ, ನೀವು ಈ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಂಡಿರುವಿರಿ ಎಂಬುದನ್ನು ನಮಗೆ ತೋರಿಸಿರಿ,” ಎಂದು ಪ್ರಾರ್ಥನೆ ಮಾಡಿದರು. 26 ಅನಂತರ ಅವರು ಚೀಟು ಹಾಕಲು, ಅದು ಮತ್ತೀಯನ ಪಾಲಿಗೆ ಬಂದಿತು; ಆದ್ದರಿಂದ ಅವನು ಹನ್ನೊಂದು ಜನ ಅಪೊಸ್ತಲರೊಂದಿಗೆ ಸೇರಿದನು.
ಅಪೊಸ್ತಲರ ಕೃತ್ಯಗಳು 2 ->