1 ಪ್ರಿಯರೇ, ಇಂಥಾ ವಾಗ್ದಾನಗಳು ನಮಗಿರುವುದರಿಂದ ನಮ್ಮ ದೇಹಾತ್ಮಗಳನ್ನು ಮಲಿನಗೊಳಿಸುವ ಎಲ್ಲಾ ವಿಷಯಗಳಿಂದ ನಮ್ಮನ್ನು ಶುದ್ಧಮಾಡಿ, ದೇವರ ಮೇಲಿನ ಭಯಭಕ್ತಿಯಿಂದ ನಮ್ಮ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.
5 ನಾವು ಮಕೆದೋನ್ಯಕ್ಕೆ ಬಂದಿದ್ದಾಗ ನಮ್ಮ ದೇಹಕ್ಕೆ ವಿಶ್ರಾಂತಿ ದೊರೆಯಲಿಲ್ಲ. ಎಲ್ಲಾ ವಿಧದಲ್ಲಿಯೂ ಒತ್ತಡಗಳು: ಹೊರಗೆ ಹೋರಾಟ, ಒಳಗೆ ಅಂಜಿಕೆ. 6 ಆದರೆ ಮನಗುಂದಿದವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದರು. 7 ತೀತನು ಬರುವುದರಿಂದ ಮಾತ್ರವಲ್ಲ, ನೀವು ಅವನನ್ನು ಸ್ವೀಕರಿಸಿ, ಆದರಣೆಗಳಿಂದ ಸತ್ಕರಿಸಿದ್ದನ್ನು ಕೇಳಿ ನಮಗೆ ಸಂತೋಷವಾಯಿತು. ನೀವು ನನಗಾಗಿ ಹಂಬಲಿಸುತ್ತಿರುವುದನ್ನೂ, ಚಿಂತಿಸುವುದನ್ನೂ, ನನ್ನ ಮೇಲೆ ನಿಮಗಿರುವ ಆಳವಾದ ಅನುಕಂಪವನ್ನೂ ನಾವು ತೀತನಿಂದ ಕೇಳಿದಾಗ, ನಾನು ಇನ್ನೂ ಅಧಿಕ ಆನಂದಪಟ್ಟೆನು.
8 ನಾನು ಬರೆದಿದ್ದ ಪತ್ರದಿಂದ ನಿಮಗೆ ದುಃಖವಾಗಿದ್ದಲ್ಲಿ, ನಾನು ಅದಕ್ಕೆ ಬೇಸರಪಡುವುದಿಲ್ಲ. ನನ್ನ ಪತ್ರದಿಂದ ನಿಮಗೆ ದುಃಖವಾಯಿತಲ್ಲಾ ಎಂದು ಸ್ವಲ್ಪಕಾಲ ನಾನು ನೊಂದುಕೊಂಡಿದ್ದರೂ, 9 ಈಗ ಸಂತೋಷಪಡುತ್ತೇನೆ. ನಿಮಗೆ ದುಃಖವಾಯಿತೆಂಬ ಕಾರಣಕ್ಕಾಗಿ ಅಲ್ಲ. ಆ ದುಃಖವು ನಿಮ್ಮನ್ನು ಪಶ್ಚಾತ್ತಾಪಕ್ಕೆ ನಡೆಸಿ, ನಿಮಗಾದ ದುಃಖವು ದೇವರ ಚಿತ್ತದಿಂದ ಆಗಿದ್ದರಿಂದ ನಮ್ಮಿಂದ ನಿಮಗೆ ನಷ್ಟವಾಗಲಿಲ್ಲ ಎಂಬುದಕ್ಕಾಗಿಯೂ ಈಗ ಸಂತೋಷಪಡುತ್ತೇನೆ. 10 ದೈವಿಕ ದುಃಖವು ಪಶ್ಚಾತ್ತಾಪವನ್ನು ತಂದು ರಕ್ಷಣೆಗೆ ನಡೆಸುತ್ತದೆ. ಆ ಪಶ್ಚಾತ್ತಾಪದಲ್ಲಿ ವಿಷಾಧವಿರುವುದಿಲ್ಲ. ಆದರೆ ಪ್ರಾಪಂಚಿಕ ದುಃಖವು ಮರಣಕ್ಕೆ ನಡೆಸುತ್ತದೆ. 11 ಈ ದೈವಿಕ ದುಃಖವು ನಿಮ್ಮಲ್ಲಿ ಏನು ಉಂಟುಮಾಡಿದೆ ಗಮನಿಸಿರಿ: ನಿಮ್ಮಲ್ಲಿ ಎಂಥಾ ಉತ್ಸಾಹ, ನಿರಪರಾಧಕ್ಕಾಗಿ ಎಂಥಾ ಪ್ರಯಾಸ, ಎಷ್ಟು ರೋಷ, ಎಷ್ಟು ಭಯ, ಎಷ್ಟು ಹಂಬಲ, ಎಷ್ಟು ಆಸಕ್ತಿ, ನ್ಯಾಯಕ್ಕಾಗಿ ಎಷ್ಟು ಆತುರ. ಪ್ರತಿಯೊಂದು ವಿಷಯದಲ್ಲಿಯೂ ನೀವು ನಿರ್ದೋಷಿಗಳೆಂದು ರುಜುಪಡಿಸುತ್ತೀರಿ. 12 ನಾನು ಆ ಪತ್ರ ನಿಮಗೆ ಬರೆದದ್ದು, ತಪ್ಪು ಮಾಡಿದವನಿಗೋಸ್ಕರವಾಗಿ ಅಲ್ಲ ಮತ್ತು ಆ ತಪ್ಪಿನಿಂದ ಹಾನಿಯಾದವರಿಗೋಸ್ಕರವಾಗಿಯೂ ಅಲ್ಲ, ನೀವು ನಮಗೆ ಎಷ್ಟು ನಿಷ್ಠೆಯುಳ್ಳವರು ಎಂದು ದೇವರ ಸನ್ನಿಧಿಯಲ್ಲಿ ನಿಮಗೆ ನೀವೇ ನೋಡುವಂತೆ ಬರೆದೆನು. 13 ಆದಕಾರಣ ಇವೆಲ್ಲವುಗಳಿಂದ ನಮಗೆ ಉತ್ತೇಜನವಾಯಿತು.