1 ಏಳನೆಯ ವರ್ಷದಲ್ಲಿ ಯೆಹೋಯಾದಾವನು ತನ್ನನ್ನು ಬಲಪಡಿಸಿಕೊಂಡು ಶತಾಧಿಪತಿಗಳಾಗಿರುವ ಯೆರೋಹಾಮನ ಮಗ ಅಜರ್ಯನನ್ನೂ, ಯೆಹೋಹಾನಾನನ ಮಗ ಇಷ್ಮಾಯೇಲನನ್ನೂ, ಓಬೇದನ ಮಗ ಅಜರ್ಯನನ್ನೂ, ಅದಾಯನ ಮಗ ಮಾಸೇಯನನ್ನೂ, ಜಿಕ್ರಿಯ ಮಗ ಎಲಿಷಾಫಾಟನನ್ನೂ ಕರೆದುಕೊಂಡು, ಅವರ ಸಂಗಡ ಒಡಂಬಡಿಕೆಯನ್ನು ಮಾಡಿದನು. 2 ಇವರು ಯೆಹೂದವನ್ನು ಸಂಚರಿಸಿ ಯೆಹೂದದ ಸಮಸ್ತ ಪಟ್ಟಣಗಳಿಂದ ಲೇವಿಯರನ್ನೂ, ಇಸ್ರಾಯೇಲಿನ ಕುಟುಂಬದಲ್ಲಿ ಮುಖ್ಯಸ್ಥರನ್ನೂ ಕೂಡಿಸಿಕೊಂಡು, ಯೆರೂಸಲೇಮಿಗೆ ಬಂದರು. 3 ಆಗ ಸಭೆಯವರೆಲ್ಲರು ದೇವರ ಆಲಯದಲ್ಲಿ ಅರಸನ ಸಂಗಡ ಒಡಂಬಡಿಕೆಯನ್ನು ಮಾಡಿದರು.
8 ಹೀಗೆಯೇ ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಪ್ರಕಾರ ಲೇವಿಯರೂ ಸಮಸ್ತ ಯೆಹೂದದವರೂ ಮಾಡಿದರು. ಪ್ರತಿ ಮನುಷ್ಯನು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಬರತಕ್ಕ ಸಿಪಾಯಿಗಳನ್ನು ಕೂಡಿಸಿಕೊಂಡನು. ಏಕೆಂದರೆ ಯಾಜಕನಾದ ಯೆಹೋಯಾದನು ಸೇವಾವಿಮುಕ್ತರಾದ ವರ್ಗದವರನ್ನು ಕಳುಹಿಸಿಬಿಡಲಿಲ್ಲ. 9 ಇದಲ್ಲದೆ ಯಾಜಕನಾದ ಯೆಹೋಯಾದನು ದೇವರ ಆಲಯದಲ್ಲಿದ್ದ ಅರಸನಾದ ದಾವೀದನ ಈಟಿಗಳನ್ನೂ, ದೊಡ್ಡ ಮತ್ತು ಸಣ್ಣ ಗುರಾಣಿಗಳನ್ನೂ ಶತಾಧಿಪತಿಗಳಾದವರಿಗೆ ಕೊಟ್ಟು, 10 ಆಯುಧಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಸಮಸ್ತ ಜನರನ್ನೂ ಬಲಿಪೀಠದ ಬಳಿಯಲ್ಲಿಯೂ, ಆಲಯದ ಬಳಿಯಲ್ಲಿಯೂ, ಆಲಯದ ಬಲಗಡೆಯ ಮೊದಲುಗೊಂಡು ಆಲಯದ ಎಡಗಡೆಯವರೆಗೂ ಅರಸನ ಸುತ್ತಲೂ ಇರಿಸಿದನು.
11 ಆಗ ಯೆಹೋಯಾದಾವನು ಅವನ ಮಕ್ಕಳೂ ರಾಜಪುತ್ರನನ್ನು ಹೊರಗೆ ಕರೆತಂದು, ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ದೇವರ ನಿಯಮ ಗ್ರಂಥವನ್ನು ಕೊಟ್ಟು, ಅವನನ್ನು ಅರಸನನ್ನಾಗಿ ಘೋಷಿಸಿ, ಅವನನ್ನು ಅಭಿಷೇಕಿಸಿದರು. ಕೂಡಲೆ ಜನರು, “ಅರಸನು ಚಿರಂಜೀವಿಯಾಗಿರಲಿ!” ಎಂದು ಹರಸಿದರು.
12 ಆದರೆ ಅರಸನನ್ನು ಹರಸುತ್ತಾ, ಓಡುತ್ತಾ ಇದ್ದ ಜನರ ಶಬ್ದವನ್ನು ಅತಲ್ಯಳು ಕೇಳಿದಾಗ, ಅವಳು ಯೆಹೋವ ದೇವರ ಆಲಯದಲ್ಲಿ ಜನರ ಬಳಿಗೆ ಬಂದಳು. 13 ಅರಸನು ಪ್ರವೇಶಿಸುವ ಸ್ಥಳದಲ್ಲಿ ತನ್ನ ಸ್ತಂಭದ ಬಳಿಯಲ್ಲಿ ನಿಂತಿದ್ದನು. ಪ್ರಧಾನರೂ, ತುತೂರಿ ಊದುವವರೂ, ಅರಸನ ಬಳಿಯಲ್ಲಿ ನಿಂತಿದ್ದರು. ಇದಲ್ಲದೆ ದೇಶದ ಜನರೆಲ್ಲರೂ ಸಂತೋಷಪಟ್ಟು ತುತೂರಿಗಳನ್ನು ಊದುತ್ತಿದ್ದರು. ಹಾಗೆಯೇ ಹಾಡುಗಾರರು ಗೀತವಾದ್ಯಗಳನ್ನು ಹಿಡಿದು ಸ್ತುತಿಸುವವರೂ ಬೋಧಿಸುವವರೂ ಇದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದುಕೊಂಡು, “ದ್ರೋಹ, ದ್ರೋಹ,” ಎಂದು ಕೂಗಿದಳು.
14 ಆಗ ಯಾಜಕನಾದ ಯೆಹೋಯಾದಾವನು ಸೈನ್ಯದ ಮೇಲೆ ಇರುವ ಶತಾಧಿಪತಿಗಳನ್ನು ಹೊರಗೆ ಕರೆತಂದು ಅವರಿಗೆ, “ಅವಳನ್ನು ಯೆಹೋವ ದೇವರ ಆಲಯದಲ್ಲಿ ಕೊಲ್ಲಬೇಡಿರಿ, ಎರಡು ಸಾಲು ಸಿಪಾಯಿಗಳು ಅವಳನ್ನು ನಡುವೆ ಸಾಗಿಸಿಕೊಂಡು ಹೋಗಿ ಹೊರಗೆ ತಳ್ಳಲಿ ಮತ್ತು ಅವಳನ್ನು ಹಿಂಬಾಲಿಸುವಂಥವರನ್ನು ಖಡ್ಗದಿಂದ ಕೊಂದುಹಾಕಿರಿ,” ಎಂದು ಆಜ್ಞಾಪಿಸಿದನು. 15 ಆಗ ಅವರು ಅವಳನ್ನು ಅಧೀನಕ್ಕೆ ತೆಗೆದುಕೊಂಡು, ಅರಮನೆಯ ಬಳಿಯಲ್ಲಿ ಕುದುರೆ ಬಾಗಿಲಿನ ಪ್ರವೇಶದಲ್ಲಿ ಬಂದಾಗ ಅಲ್ಲಿ ಅವಳನ್ನು ಕೊಂದುಹಾಕಿದರು.
16 ಅನಂತರ ಯೆಹೋವ ದೇವರ ಜನರಾಗಿರುವಂತೆ ಯೆಹೋಯಾದಾವನು ತನಗೂ, ಸಮಸ್ತ ಜನರಿಗೂ, ಅರಸನಿಗೂ ಒಡಂಬಡಿಕೆ ಮಾಡಿಸಿದನು. 17 ಸಮಸ್ತ ಜನರು ಬಾಳನ ದೇವಸ್ಥಾನಕ್ಕೆ ಹೋಗಿ ಅದನ್ನು ಕೆಡವಿಹಾಕಿ, ಅದರ ಬಲಿಪೀಠಗಳನ್ನೂ ವಿಗ್ರಹಗಳನ್ನೂ ಒಡೆದುಬಿಟ್ಟು, ಬಲಿಪೀಠಗಳ ಮುಂದೆ ಬಾಳನ ಯಾಜಕನಾದ ಮತ್ತಾನನನ್ನು ಕೊಂದುಹಾಕಿದರು.
18 ಆಗ ಯೆಹೋಯಾದಾವನು ಲೇವಿಯರಾದ ಯಾಜಕರ ಕೈಕೆಳಗೆ ಯೆಹೋವ ದೇವರ ಆಲಯದ ಪರಿಚಾರಕರನ್ನು ನೇಮಿಸಿದನು. ದಾವೀದನು ಆ ಯಾಜಕರನ್ನು ಯೆಹೋವ ದೇವರ ಆಲಯದ ಸೇವೆಗಾಗಿ ವರ್ಗವರ್ಗಗಳಾಗಿ ಬೇರ್ಪಡಿಸಿದ್ದನು. ದಾವೀದನಿಂದ ನೇಮಕವಾದ ಪ್ರಕಾರ ಸಂತೋಷದಿಂದ ಹಾಡುತ್ತಾ ಮೋಶೆಯ ನಿಯಮದಲ್ಲಿ ಬರೆದಿರುವಂತೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸುವುದು ಅವರ ಕರ್ತವ್ಯವಾಗಿತ್ತು. 19 ಯೆಹೋವ ದೇವರ ಆಲಯದಲ್ಲಿ ಯಾವ ಅಪವಿತ್ರವಾದದ್ದೂ ಒಳಗೆ ಪ್ರವೇಶಿಸದ ಹಾಗೆ ಬಾಗಿಲುಗಳ ಬಳಿಯಲ್ಲಿ ದ್ವಾರಪಾಲಕರನ್ನು ಇರಿಸಿದನು.
20 ಅವನು ಶತಾಧಿಪತಿಗಳನ್ನೂ, ಗೌರವಸ್ಥರನ್ನೂ, ಜನರ ಅಧಿಪತಿಗಳನ್ನೂ, ದೇಶದ ಜನರೆಲ್ಲರನ್ನೂ ಕರೆದುಕೊಂಡು ಹೋಗಿ, ಅರಸನನ್ನು ಯೆಹೋವ ದೇವರ ಆಲಯದಿಂದ ಕರೆತಂದನು. ಅವರು ಹೆಬ್ಬಾಗಿಲಿನಿಂದ ಅರಮನೆಗೆ ಬಂದು, ಅರಸನನ್ನು ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದರು. 21 ಅತಲ್ಯಳನ್ನು ಖಡ್ಗದಿಂದ ಕೊಂದುಹಾಕಿದ್ದರಿಂದ ದೇಶದ ಜನರೆಲ್ಲರೂ ಸಂತೋಷಪಟ್ಟರು, ಪಟ್ಟಣವು ಶಾಂತವಾಯಿತು.
<- 2 ಪೂರ್ವಕಾಲ ವೃತ್ತಾಂತ 222 ಪೂರ್ವಕಾಲ ವೃತ್ತಾಂತ 24 ->- a ಸಬ್ಬತ್ ಅಂದರೆ ವಿಶ್ರಾಂತಿ ದಿನ