1 ರೆಹಬ್ಬಾಮನು ಯೆರೂಸಲೇಮಿಗೆ ಬಂದ ತರುವಾಯ, ರಾಜ್ಯವನ್ನು ತಿರುಗಿ ಪಡೆಯುವ ಹಾಗೆ ಇಸ್ರಾಯೇಲಿಗೆ ವಿರೋಧವಾಗಿ ಯುದ್ಧಮಾಡಲು, ಯೆಹೂದ ಮತ್ತು ಬೆನ್ಯಾಮೀನವರ ಕುಟುಂಬಗಳಿಂದ 1,80,000 ಸಮರ್ಥ ಸೈನಿಕರನ್ನು ಆಯ್ದುಕೊಂಡು ಒಟ್ಟುಗೂಡಿಸಿದನು.
2 ಆದರೆ ಯೆಹೋವ ದೇವರ ವಾಕ್ಯವು ದೇವರ ಮನುಷ್ಯನಾಗಿರುವ ಶೆಮಾಯನಿಗೆ ಉಂಟಾಗಿ, 3 “ನೀನು ಯೆಹೂದದ ಅರಸನಾದ ಸೊಲೊಮೋನನ ಮಗನಾಗಿರುವ ರೆಹಬ್ಬಾಮನಿಗೂ, ಯೆಹೂದ ಬೆನ್ಯಾಮೀನರಲ್ಲಿರುವ ಸಮಸ್ತ ಇಸ್ರಾಯೇಲರಿಗೂ ಹೇಳಬೇಕಾದದ್ದೇನೆಂದರೆ, 4 ‘ನೀವು ನಿಮ್ಮ ಸಹೋದರರಿಗೆ ವಿರೋಧವಾಗಿ ಯುದ್ಧಮಾಡಲು ಹೋಗಬೇಡಿರಿ. ಪ್ರತಿ ಮನುಷ್ಯನು ತನ್ನ ಮನೆಗೆ ಹಿಂದಿರುಗಲಿ. ಏಕೆಂದರೆ ಈ ಕಾರ್ಯವು ತಮ್ಮಿಂದ ಉಂಟಾಯಿತೆಂದು ಯೆಹೋವ ದೇವರು ಹೇಳುತ್ತಾರೆ,’ ” ಎಂದನು. ಆದ್ದರಿಂದ ಅವರು ಯೆಹೋವ ದೇವರ ವಾಕ್ಯವನ್ನು ಕೇಳಿ, ಯಾರೊಬ್ಬಾಮನ ಮೇಲೆ ಹೋಗದೆ ಹಿಂದಿರುಗಿ ಹೋದರು.
13 ಸಮಸ್ತ ಇಸ್ರಾಯೇಲಿನಲ್ಲಿದ್ದ ಯಾಜಕರೂ, ಲೇವಿಯರೂ ತಮ್ಮ ಸಮಸ್ತ ಪ್ರಾಂತಗಳಿಂದ ಅವನ ಬಳಿಗೆ ಪುನಃ ಬಂದರು. 14 ಲೇವಿಯರು ತಮ್ಮ ಹುಲ್ಲುಗಾವಲು ಮತ್ತು ಆಸ್ತಿಯನ್ನು ತ್ಯಜಿಸಿ ಯೆಹೂದ ಮತ್ತು ಯೆರೂಸಲೇಮಿಗೆ ಬಂದರು, ಏಕೆಂದರೆ ಯಾರೊಬ್ಬಾಮನೂ ಅವನ ಮಕ್ಕಳು ಯೆಹೋವ ದೇವರಿಗೆ ಯಾಜಕ ಸೇವೆ ಮಾಡದ ಹಾಗೆ ತಿರಸ್ಕರಿಸಿದನು. 15 ಉನ್ನತ ಸ್ಥಳಗಳಿಗೋಸ್ಕರವೂ ದೆವ್ವಗಳಿಗೋಸ್ಕರವೂ, ಯಾರೊಬ್ಬಾಮನು ಮಾಡಿದ ಕರುಗಳ ಮೂರ್ತಿಪೂಜೆಗಾಗಿ ತಾನೇ ಯಾಜಕರನ್ನು ನೇಮಿಸಿದ್ದರಿಂದ, 16 ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಹುಡುಕುವ ಮನಸ್ಸು ಮಾಡಿದ ಇಸ್ರಾಯೇಲಿನ ಪ್ರತಿಯೊಂದು ಕುಲಗಳಿಂದ ಕೆಲವರು ತಮ್ಮ ಪೂರ್ವಜರ ದೇವರಾದ ಯೆಹೋವ ದೇವರಿಗೆ ಯಜ್ಞಗಳನ್ನು ಅರ್ಪಿಸಲು ಲೇವಿಯರನ್ನು ಹಿಂಬಾಲಿಸಿ ಯೆರೂಸಲೇಮಿಗೆ ಬಂದರು. 17 ಹೀಗೆ ಅವರು ಯೆಹೂದ ರಾಜ್ಯವನ್ನು ದೃಢಪಡಿಸಿ, ಸೊಲೊಮೋನನ ಮಗ ರೆಹಬ್ಬಾಮನನ್ನು ಮೂರು ವರ್ಷಗಳವರೆಗೂ ಬಲಪಡಿಸಿದರು. ಅವರು ಮೂರು ವರ್ಷಗಳವರೆಗೂ ದಾವೀದನ, ಸೊಲೊಮೋನನ ಮಾರ್ಗದಲ್ಲಿ ನಡೆದರು.
22 ರೆಹಬ್ಬಾಮನು ಮಾಕ ಎಂಬವಳ ಮಗನಾದ ಅಬೀಯನನ್ನು ಅವನ ಸಹೋದರರಲ್ಲಿ ಯುವರಾಜನನ್ನಾಗಿ ಮಾಡಿದನು. ಏಕೆಂದರೆ ಅವನನ್ನು ಅರಸನಾಗಿ ಮಾಡಲು ಮನಸ್ಸುಳ್ಳವನಾಗಿದ್ದನು. 23 ಇದಲ್ಲದೆ ಅವನು ವಿವೇಕವಾಗಿ ನಡೆದು ತನ್ನ ಎಲ್ಲಾ ಮಕ್ಕಳನ್ನು ಯೆಹೂದ ಬೆನ್ಯಾಮೀನಿನ ದೇಶಗಳಲ್ಲಿ ಇರುವ ಎಲ್ಲಾ ಬಲವಾದ ಪಟ್ಟಣಗಳಲ್ಲಿ ಚದರಿಸಿ, ಅವರಿಗೆ ಬಹಳ ದವಸಧಾನ್ಯಗಳನ್ನು ಕೊಟ್ಟನು. ಅವರಿಗೆ ಅನೇಕ ಹೆಂಡತಿಯರನ್ನು ಕೊಟ್ಟನು.
<- 2 ಪೂರ್ವಕಾಲ ವೃತ್ತಾಂತ 102 ಪೂರ್ವಕಾಲ ವೃತ್ತಾಂತ 12 ->