3 ಅವನು ಅದನ್ನು ಕೇಳಿ ಎದ್ದು, ತನ್ನ ಪ್ರಾಣಕ್ಕೋಸ್ಕರ ಯೆಹೂದಕ್ಕೆ ಸೇರಿದ ಬೇರ್ಷೆಬಕ್ಕೆ ಹೊರಟುಹೋಗಿ, ಅಲ್ಲಿ ತನ್ನ ಸೇವಕನನ್ನು ಕಳುಹಿಸಿಬಿಟ್ಟನು. 4 ಆದರೆ ಅವನು ಮರುಭೂಮಿಯಲ್ಲಿ ಒಂದು ದಿವಸದ ಪ್ರಯಾಣದಷ್ಟು ಹೋಗಿ, ಒಂದು ಜಾಲೀಗಿಡದ ಕೆಳಗೆ ಕುಳಿತು, ತಾನು ಸಾಯಬೇಕೆಂದು ಅಪೇಕ್ಷಿಸಿ, “ಯೆಹೋವ ದೇವರೇ, ನನಗೆ ಸಾಕಾಯಿತು, ನನ್ನ ಪ್ರಾಣವನ್ನು ತೆಗೆದುಕೋ. ಏಕೆಂದರೆ ನನ್ನ ಪಿತೃಗಳಿಗಿಂತ ನಾನು ಉತ್ತಮನಲ್ಲ,” ಎಂದನು. 5 ಅವನು ಜಾಲೀಗಿಡದ ಕೆಳಗೆ ಮಲಗಿಕೊಂಡು ನಿದ್ರೆಮಾಡಿದನು.
7 ತಿರುಗಿ ಎರಡನೆಯ ಸಾರಿ ಯೆಹೋವ ದೇವರ ದೂತನು ಬಂದು, ಅವನನ್ನು ತಟ್ಟಿ ಅವನಿಗೆ, “ನೀನೆದ್ದು ತಿನ್ನು, ಏಕೆಂದರೆ ನೀನು ಬಹುದೂರ ಪ್ರಯಾಣ ಮಾಡಬೇಕಾಗಿದೆ,” ಎಂದನು. 8 ಆಗ ಅವನೆದ್ದು ತಿಂದು, ಕುಡಿದು ಆ ಭೋಜನದ ಶಕ್ತಿಯಿಂದ ರಾತ್ರಿ ಹಗಲು ನಾಲ್ವತ್ತು ದಿವಸ ಹೋರೇಬ್ ಎಂಬ ದೇವರ ಬೆಟ್ಟದವರೆಗೂ ನಡೆದನು. 9 ಅವನು ಅಲ್ಲಿರುವ ಒಂದು ಗವಿಗೆ ಬಂದು ಅಲ್ಲಿ ವಾಸಿಸಿದನು.
10 ಅದಕ್ಕೆ ಅವನು, “ಸರ್ವಶಕ್ತ ದೇವರಾದ ಯೆಹೋವ ದೇವರೇ, ಇಸ್ರಾಯೇಲರಿಗೋಸ್ಕರ ನಾನು ಬಹು ರೋಷವುಳ್ಳವನಾಗಿದ್ದೇನೆ. ಏಕೆಂದರೆ ಇಸ್ರಾಯೇಲರು ನಿಮ್ಮ ಒಡಂಬಡಿಕೆಯನ್ನು ಬಿಟ್ಟು, ನಿಮ್ಮ ಬಲಿಪೀಠಗಳನ್ನು ಕೆಡವಿ, ನಿಮ್ಮ ಪ್ರವಾದಿಗಳನ್ನು ಖಡ್ಗದಿಂದ ಕೊಂದುಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಲು ಹುಡುಕುತ್ತಿದ್ದಾರೆ,” ಎಂದನು.
11 ಆಗ ಯೆಹೋವ ದೇವರು, “ನೀನು ಹೊರಗೆ ಬಂದು ಬೆಟ್ಟದ ಮೇಲೆ ನನ್ನ ಮುಂದೆ ನಿಲ್ಲು. ಏಕೆಂದರೆ ನಾನು ನಿನ್ನ ಮುಂದೆ ಹಾದು ಹೋಗುತ್ತಿದ್ದೇನೆ,” ಎಂದನು.
14 ಅದಕ್ಕೆ ಅವನು, “ಸರ್ವಶಕ್ತ ದೇವರಾದ ಯೆಹೋವ ದೇವರೇ, ಇಸ್ರಾಯೇಲರಿಗೋಸ್ಕರ ನಾನು ಬಹು ರೋಷವುಳ್ಳವನಾಗಿದ್ದೇನೆ. ಏಕೆಂದರೆ ಇಸ್ರಾಯೇಲರು ನಿಮ್ಮ ಒಡಂಬಡಿಕೆಯನ್ನು ಬಿಟ್ಟು, ನಿಮ್ಮ ಬಲಿಪೀಠಗಳನ್ನು ಕೆಡವಿ, ನಿಮ್ಮ ಪ್ರವಾದಿಗಳನ್ನು ಖಡ್ಗದಿಂದ ಕೊಂದುಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಲು ಹುಡುಕುತ್ತಿದ್ದಾರೆ,” ಎಂದನು.
15 ಆಗ ಯೆಹೋವ ದೇವರು ಅವನಿಗೆ, “ನೀನು ಬಂದ ಮಾರ್ಗದಲ್ಲಿ ದಮಸ್ಕದ ಮರುಭೂಮಿಗೆ ತಿರುಗಿಕೊಂಡು ಹೋಗಿ, ಅಲ್ಲಿ ತಲುಪಿದಾಗ, ಹಜಾಯೇಲನನ್ನು ಅರಾಮಿನ ಮೇಲೆ ಅರಸನಾಗಿರಲು ಅಭಿಷೇಕಿಸು. 16 ಇದಲ್ಲದೆ ನಿಂಷಿಯ ಮಗನಾದ ಯೇಹುವನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕಿಸಿ, ಆಬೇಲ್ ಮೆಹೋಲ ಊರಿನವನಾದ ಶಾಫಾಟನ ಮಗನಾಗಿರುವ ಎಲೀಷನನ್ನು ನಿನಗೆ ಪ್ರತಿಯಾಗಿ ಪ್ರವಾದಿಯಾಗಿರಲು ಅಭಿಷೇಕಿಸು. 17 ಹಜಾಯೇಲನ ಖಡ್ಗಕ್ಕೆ ತಪ್ಪಿಸಿಕೊಂಡವರನ್ನು ಯೇಹುವು ಕೊಲ್ಲುವನು; ಯೇಹುವಿನ ಖಡ್ಗಕ್ಕೆ ತಪ್ಪಿಸಿಕೊಂಡವರನ್ನು ಎಲೀಷನು ಕೊಂದುಹಾಕುವನು. 18 ಆದರೆ ಬಾಳನ ವಿಗ್ರಹಕ್ಕೆ ಅಡ್ಡಬೀಳದೆಯೂ ಅದನ್ನು ಮುದ್ದಿಡದೆಯೂ ಇರುವ ಏಳು ಸಾವಿರ ಮಂದಿಯನ್ನು ಇಸ್ರಾಯೇಲಿನಲ್ಲಿ ನನಗೋಸ್ಕರ ಉಳಿಸುವೆನು,” ಎಂದರು.
21 ಆಗ ಎಲೀಷನು ಅವನನ್ನು ಬಿಟ್ಟು ತಿರುಗಿಕೊಂಡು ಒಂದು ಜೋಡು ಎತ್ತುಗಳನ್ನು ತೆಗೆದುಕೊಂಡು ಅವುಗಳನ್ನು ವಧಿಸಿ, ನೊಗದ ಕಟ್ಟಿಗೆಯಿಂದ ಅವುಗಳ ಮಾಂಸವನ್ನು ಬೇಯಿಸಿ ಜನರಿಗೆ ಕೊಟ್ಟನು. ಅವರು ತಿಂದ ತರುವಾಯ ಅವನು ಎದ್ದು ಎಲೀಯನನ್ನು ಹಿಂಬಾಲಿಸಿ ಅವನ ಸೇವಕನಾದನು.
<- 1 ಅರಸುಗಳು 181 ಅರಸುಗಳು 20 ->