3 ಅಬಿಯಾಮನು, ತನ್ನ ಪಿತೃವಾದ ದಾವೀದನ ಹೃದಯದ ಪ್ರಕಾರ, ಅವನ ಹೃದಯವು ತನ್ನ ದೇವರಾದ ಯೆಹೋವ ದೇವರ ಮುಂದೆ ಪೂರ್ಣವಾಗಿರದೆ, ತನಗೆ ಮುಂಚೆ ಇದ್ದ ತನ್ನ ತಂದೆ ಮಾಡಿದ ಸಮಸ್ತ ಪಾಪಗಳಲ್ಲಿ ನಡೆದನು. 4 ಅವನ ತರುವಾಯ ಅವನ ಮಗನನ್ನು ನೇಮಿಸುವುದಕ್ಕೂ, ಯೆರೂಸಲೇಮನ್ನು ಸ್ಥಿರಪಡಿಸುವುದಕ್ಕೂ, ತನ್ನ ದೇವರಾದ ಯೆಹೋವ ದೇವರು ದಾವೀದನ ನಿಮಿತ್ತ ಯೆರೂಸಲೇಮಿನಲ್ಲಿ ಅವನಿಗೆ ದೀಪವನ್ನು ಉಳಿಸಿದರು. 5 ಏಕೆಂದರೆ ದಾವೀದನು ಹಿತ್ತಿಯನಾದ ಊರೀಯನ ವಿಷಯವೊಂದನ್ನು ಬಿಟ್ಟು, ತನ್ನ ಜೀವಿತದ ಸಮಸ್ತ ದಿವಸಗಳಲ್ಲಿ ಯೆಹೋವ ದೇವರು ತನಗೆ ಆಜ್ಞಾಪಿಸಿದ ಎಲ್ಲಾದಕ್ಕೆ ತೊಲಗದೆ, ಅವರ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡಿದನು.
6 ಆದರೆ ರೆಹಬ್ಬಾಮನಿಗೂ, ಯಾರೊಬ್ಬಾಮನಿಗೂ ಅವರ ಜೀವಾಂತ್ಯದವರೆಗೆ ಯುದ್ಧ ಉಂಟಾಗಿತ್ತು. 7 ಅಬಿಯಾಮನ ಮಿಕ್ಕಾದ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ, ಯೆಹೂದದ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. ಇವನಿಗೂ ಯಾರೊಬ್ಬಾಮನಿಗೂ ಯುದ್ಧ ನಡೆಯುತ್ತಿತ್ತು. 8 ಅಬಿಯಾಮನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು, ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಆಸನು ಅವನಿಗೆ ಬದಲಾಗಿ ಅರಸನಾದನು.
11 ಆಸನು ತನ್ನ ತಂದೆಯಾದ ದಾವೀದನ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದನ್ನು ಮಾಡಿದನು. 12 ಅವನು ಪೂಜಾ ಸ್ಥಳದ ಪುರುಷಗಾಮಿಗಳನ್ನು ದೇಶದಲ್ಲಿಂದ ಹೊರಡಿಸಿ, ತನ್ನ ಪಿತೃಗಳು ಮಾಡಿದ ಸಮಸ್ತ ವಿಗ್ರಹಗಳನ್ನು ತೆಗೆದುಹಾಕಿದನು. 13 ಇದಲ್ಲದೆ, ಆಸನು ತನ್ನ ಅಜ್ಜಿ ಮಾಕ ಎಂಬವಳು ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ, ಅವಳನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಿದನು. ಆ ಮೂರ್ತಿಯನ್ನು ಕಡಿದುಹಾಕಿ ಕಿದ್ರೋನ್ ಹಳ್ಳದ ಹತ್ತಿರ ಸುಟ್ಟುಬಿಟ್ಟನು. 14 ಅವನು ಪೂಜಾಸ್ಥಳಗಳನ್ನು ತೆಗೆದು ಹಾಕದಿದ್ದರೂ ಆಸನ ಹೃದಯವು ತನ್ನ ಜೀವಮಾನದಲ್ಲೆಲ್ಲಾ ಯೆಹೋವ ದೇವರ ದೃಷ್ಟಿಯಲ್ಲಿ ದೋಷವಿಲ್ಲದ್ದಾಗಿತ್ತು. 15 ತಾನು ಮತ್ತು ತನ್ನ ತಂದೆಯೂ ಪ್ರತಿಷ್ಠಿಸಿದ ಬೆಳ್ಳಿಬಂಗಾರವನ್ನೂ ಸಲಕರಣೆಗಳನ್ನೂ ಯೆಹೋವ ದೇವರ ಆಲಯಕ್ಕೆ ತಂದನು.
16 ಇದಲ್ಲದೆ ಆಸನಿಗೂ ಇಸ್ರಾಯೇಲಿನ ಅರಸನಾದ ಬಾಷನಿಗೂ, ಅವರ ಜೀವಾಂತ್ಯದವರೆಗೂ ಯುದ್ಧ ನಡೆಯುತ್ತಿತ್ತು. 17 ಆಗ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಬಂದು ಯೆಹೂದದ ಅರಸನಾದ ಆಸನ ಬಳಿಗೆ ಒಳಗಾಗಲೀ, ಹೊರಗಾಗಲೀ ಯಾರೂ ಹೋಗದ ಹಾಗೆ ಸುತ್ತಲೂ ರಾಮ ಎಂಬ ಕೋಟೆಯನ್ನು ಕಟ್ಟಿಸಿದನು.
18 ಆಸನು ಯೆಹೋವ ದೇವರ ಆಲಯದ ಮತ್ತು ತನ್ನ ಅರಮನೆಯ ಬೊಕ್ಕಸಗಳಿಂದ ಮಿಕ್ಕ ಸಮಸ್ತ ಬೆಳ್ಳಿಬಂಗಾರವನ್ನು ತೆಗೆದು, ತನ್ನ ಸೇವಕರ ಕೈಯಲ್ಲಿ ಒಪ್ಪಿಸಿ, ದಮಸ್ಕದಲ್ಲಿ ವಾಸವಾಗಿರುವ ಹೆಜ್ಯೋನನ ಮಗನೂ, ಟಬ್ರಿಮ್ಮೋನನ ಮಗನೂ ಆದ ಅರಾಮಿನ ಅರಸನಾದ ಬೆನ್ಹದದನಿಗೆ ಅವುಗಳನ್ನು ಕಳುಹಿಸಿದನು. 19 ಅಲ್ಲದೆ ಅವನಿಗೆ, “ನನ್ನ ತಂದೆ ಮತ್ತು ನಿನ್ನ ತಂದೆಯ ನಡುವೆ ಇದ್ದಂತೆ ನನ್ನ ಮತ್ತು ನಿನ್ನ ನಡುವೆ ಒಡಂಬಡಿಕೆ ಉಂಟು. ಇಗೋ ನಾನು ಬೆಳ್ಳಿಬಂಗಾರವನ್ನು ದಾನವಾಗಿ ನಿನಗೆ ಕಳುಹಿಸಿದ್ದೇನೆ. ಇಸ್ರಾಯೇಲಿನ ಅರಸನಾದ ಬಾಷನು ನನ್ನನ್ನು ಬಿಟ್ಟುಹೋಗುವಂತೆ, ನೀನು ಅವನ ಸಂಗಡ ಮಾಡಿದ ಒಡಂಬಡಿಕೆಯನ್ನು ಮುರಿಯಬೇಕು,” ಎಂದನು.
20 ಹಾಗೆಯೇ ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ, ಇಸ್ರಾಯೇಲಿನ ಪಟ್ಟಣಗಳಿಗೆ ವಿರೋಧವಾಗಿ ತನ್ನ ಸೈನ್ಯಾಧಿಪತಿಗಳನ್ನು ಕಳುಹಿಸಿದನು. ಇಯ್ಯೋನ್, ದಾನ್, ಆಬೇಲ್ ಬೇತ್ ಮಾಕಾ ಹಾಗೂ ಸಮಸ್ತ ಕಿನ್ನೆರೆತ್, ಸಮಸ್ತ ನಫ್ತಾಲಿ ಪ್ರಾಂತ ಇವುಗಳನ್ನು ಹಾಳುಮಾಡಿದರು. 21 ಬಾಷನು ಇದನ್ನು ಕೇಳಿದಾಗ ರಾಮಕೋಟೆ ಕಟ್ಟಿಸುವುದನ್ನು ಬಿಟ್ಟು, ತಿರ್ಚಕ್ಕೆ ಹೋಗಿ ವಾಸಿಸಿದನು. 22 ಆಗ ಅರಸನಾದ ಆಸನು ಯೆಹೂದರಲ್ಲಿ ಒಬ್ಬನನ್ನೂ ಬಿಡದೆ ಎಲ್ಲರನ್ನೂ ಕರೆಯಿಸಿ, ಬಾಷನು ಕಟ್ಟಿಸುತ್ತಾ ಇದ್ದ ರಾಮ ಪಟ್ಟಣದ ಕಲ್ಲುಗಳನ್ನೂ, ಅದರ ತೊಲೆಗಳನ್ನೂ ತೆಗೆದುಕೊಂಡುಹೋಗಿ ಅವುಗಳಿಂದ ಬೆನ್ಯಾಮೀನನ ಗಿಬೆಯ ಮತ್ತು ಮಿಚ್ಪೆ ಎಂಬ ನಗರಗಳನ್ನು ಕಟ್ಟಿಸಿದನು.
23 ಆಸನ ಉಳಿದ ಎಲ್ಲಾ ಕಾರ್ಯಗಳೂ, ಅವನ ಸಮಸ್ತ ಪರಾಕ್ರಮವೂ, ಅವನು ಮಾಡಿದ್ದೆಲ್ಲವೂ, ಅವನು ಕಟ್ಟಿಸಿದ ಪಟ್ಟಣಗಳೂ, ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. ಆದರೆ ತನ್ನ ವೃದ್ಧಾಪ್ಯದಲ್ಲಿ ಅವನ ಕಾಲುಗಳಿಗೆ ರೋಗ ತಗುಲಿತು. 24 ಆಸನು ಮೃತನಾಗಿ ತನ್ನ ಪಿತೃಗಳ ಬಳಿ ಸೇರಿದನು. ತನ್ನ ತಂದೆ ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸಮಾಧಿ ಬಳಿ ಅವನನ್ನು ಹೂಳಿಟ್ಟರು. ಅವನಿಗೆ ಬದಲಾಗಿ ಅವನ ಮಗ ಯೆಹೋಷಾಫಾಟನು ಅರಸನಾದನು.
27 ನಾದಾಬನೂ, ಸಮಸ್ತ ಇಸ್ರಾಯೇಲರೂ ಫಿಲಿಷ್ಟಿಯರ ಪಟ್ಟಣವಾದ ಗಿಬ್ಬೆತೋನಿಗೆ ಮುತ್ತಿಗೆ ಹಾಕುತ್ತಾ ಇದ್ದರು. ಆದುದರಿಂದ ಇಸ್ಸಾಕಾರನ ಗೋತ್ರದ ಅಹೀಯನ ಮಗ ಬಾಷನು ನಾದಾಬನಿಗೆ ವಿರೋಧವಾಗಿ ಒಳಸಂಚುಮಾಡಿ, ನಾದಾಬನನ್ನು ಕೊಂದುಬಿಟ್ಟನು. 28 ಯೆಹೂದದ ಅರಸನಾದ ಆಸನ ಮೂರನೆಯ ವರುಷದಲ್ಲಿ ಬಾಷನು ನಾದಾಬನನ್ನು ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು.
29 ಅವನು ಆಳುತ್ತಿರುವಾಗ, ಯಾರೊಬ್ಬಾಮನ ಮನೆಯವರನ್ನೆಲ್ಲಾ ಸಂಹರಿಸಿಬಿಟ್ಟನು. ಯಾರೊಬ್ಬಾಮನು ಪಾಪಮಾಡಿ, ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನಿಮಿತ್ತವಾಗಿಯೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಿದ ನಿಮಿತ್ತವಾಗಿಯೂ, ಯೆಹೋವ ದೇವರು ಶೀಲೋವಿನವನಾಗಿರುವ ತನ್ನ ಸೇವಕನಾದ ಅಹೀಯನ ಮುಖಾಂತರ ಹೇಳಿದ ಮಾತಿನ ಪ್ರಕಾರವೇ ನೆರವೇರಿತು. 30 ಯಾರೊಬ್ಬಾಮನು ತಾನು ಪಾಪಮಾಡಿದ್ದಲ್ಲದೆ ಇಸ್ರಾಯೇಲರನ್ನೂ ಪಾಪಕ್ಕೆ ಪ್ರೇರೇಪಿಸಿ, ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಕೋಪವನ್ನು ಪ್ರಚೋದಿಸಿದ ಕಾರಣ ಇದು ಸಂಭವಿಸಿತು.
31 ನಾದಾಬನ ಮಿಕ್ಕಾದ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ, ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 32 ಇದಲ್ಲದೆ ಆಸನಿಗೂ, ಇಸ್ರಾಯೇಲಿನ ಅರಸನಾದ ಬಾಷನಿಗೂ ಅವರ ಜೀವಾಂತ್ಯದವರೆಗೂ ಯುದ್ಧ ನಡೆಯುತ್ತಿತ್ತು.
- a ಅಬ್ಷಾಲೋಮ ಅಥವಾ ಅಬೀಷಾಲೋಮ