12 ಹೀಗಿರಲಾಗಿ ಸಹೋದರರೇ, ನಾವು ಹಂಗಿನಲ್ಲಿದ್ದೇವೆ; ಆದರೆ ಪವಿತ್ರಾತ್ಮನ್ನನುಸರಿಸಿ ನಡೆಯುವ ಹಂಗಿನಲ್ಲಿದ್ದೇವೆಯೇ ಹೊರತು [r]ಶರೀರಭಾವವನ್ನು ಅನುಸರಿಸಿ ಬದುಕಬೇಕೆಂಬ ಹಂಗಿನಲಿಲ್ಲ. 13 ನೀವು ಶರೀರಭಾವವನ್ನು ಅನುಸರಿಸಿ ಬದುಕಿದರೆ ಸಾಯುವುದು ನಿಶ್ಚಯ; ನೀವು ಪವಿತ್ರಾತ್ಮನಿಂದ [s]ದೇಹದ ದುರಭ್ಯಾಸಗಳನ್ನು ನಾಶ ಮಾಡುವುದಾದರೆ ಜೀವಿಸುವಿರಿ. 14 ಯಾರು [t]ದೇವರ ಆತ್ಮಾನುಸಾರವಾಗಿ ನಡೆದುಕೊಳ್ಳುತ್ತಾರೋ, ಅವರು [u]ದೇವರ ಮಕ್ಕಳಾಗಿದ್ದಾರೆ. 15 ನೀವು ತಿರುಗಿ ಭಯದಲ್ಲಿ ಬೀಳುವ ಹಾಗೆ [v]ದಾಸತ್ವದ ಆತ್ಮನನ್ನು ಹೊಂದಿದವರಲ್ಲ. ಅದರ ಬದಲಾಗಿ, ನಿಮ್ಮವು [w] ದೇವರನ್ನು, [x]“ಅಪ್ಪಾ, ತಂದೆಯೇ,” ಎಂದು ಕರೆಯುವ ಮಕ್ಕಳ ಆತ್ಮವನ್ನು ಹೊಂದಿದ್ದೀರಿ. 16 ನಾವು ದೇವರ ಮಕ್ಕಳಾಗಿದ್ದೇವೆಂಬುದಕ್ಕೆ [y]ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿ ಹೇಳುತ್ತಾನೆ. 17 ಮಕ್ಕಳಾಗಿದ್ದರೆ [z]ಬಾಧ್ಯಸ್ಥರೂ ಆಗಿದ್ದೇವೆ; ದೇವರಿಗೆ ಬಾಧ್ಯಸ್ಥರೂ ಹಾಗೂ ಕ್ರಿಸ್ತನೊಂದಿಗೆ ಸಹಾ ಬಾಧ್ಯರು ಆಗಿದ್ದೇವೆ. ಹೇಗೆಂದರೆ [aa]ಕ್ರಿಸ್ತನ ಕಷ್ಟಗಳಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.
22 ಸೃಷ್ಟಿಯೆಲ್ಲಾ ಇಂದಿನವರೆಗೂ ನರಳುತ್ತಾ, ಪ್ರಸವ ವೇದನೆಪಡುತ್ತಾ ಇದೆಯೆಂದು ನಾವು ಬಲ್ಲೆವು. ಇದು ಮಾತ್ರವಲ್ಲದೆ 23 [hh]ಪ್ರಥಮ ಫಲವಾಗಿರುವ ಹಾಗೂ ಪವಿತ್ರಾತ್ಮವರವನ್ನು ಹೊಂದಿದ ನಾವೂ ಸಹ [ii]ದೇವರ ಮಕ್ಕಳ ಪದವಿಯನ್ನು ಅಂದರೆ [jj]ದೇಹಕ್ಕೆ ಬರಬೇಕಾದ ವಿಮೋಚನೆಯನ್ನು ಎದುರುನೋಡುತ್ತಾ ನಮ್ಮೊಳಗೆ ನರಳುತ್ತಿದ್ದೇ. 24 ಆ ನಿರೀಕ್ಷೆಯಿಂದಲೇ ನಾವು ರಕ್ಷಣೆಯನ್ನು ಹೊಂದಿದವರಾಗಿದ್ದೇವೆ. ನಾವು ನಿರೀಕ್ಷಿಸುವುದು ಪ್ರತ್ಯಕ್ಷವಾಗಿದ್ದರೆ ಅದನ್ನು ನಿರೀಕ್ಷೆ ಎನ್ನುವುದಿಲ್ಲ; ಪ್ರತ್ಯಕ್ಷವಾಗಿರುವುದನ್ನು ಯಾರಾದರೂ ನಿರೀಕ್ಷಿಸುವುದುಂಟೇ? 25 ಆದರೆ ಕಾಣದಿರುವುದನ್ನು ನಾವು ಎದುರುನೋಡುವವರಾಗಿರುವುದರಿಂದ [kk]ತಾಳ್ಮೆಯಿಂದ ಕಾದುಕೊಂಡಿದ್ದೇವೆ. 26 ಹಾಗೆ ಪವಿತ್ರಾತ್ಮನು ಸಹ ನಮ್ಮ ಬಲಹೀನತೆಯನ್ನು ನೋಡಿ ನಮಗೆ ಸಹಾಯಮಾಡುತ್ತಾನೆ. ಹೇಗೆಂದರೆ [ll]ನಾವು ಯಾವಾಗ ಏನು ಬೇಡಿಕೊಳ್ಳಬೇಕೋ ಎನ್ನುವುದು ನಮಗೆ ತಿಳಿದಿಲ್ಲದ್ದರಿಂದ [mm]ಪವಿತ್ರಾತ್ಮನು ತಾನೇ ಮಾತಿಲ್ಲದ ನರಳಾಟದಿಂದ ನಮಗೋಸ್ಕರ ದೇವರನ್ನು ಬೇಡಿಕೊಳ್ಳುತ್ತಾನೆ. 27 ಆದರೆ [nn]ಹೃದಯಗಳನ್ನು ಪರಿಶೋಧಿಸಿ ನೋಡುವಾತನಿಗೆ ಪವಿತ್ರಾತ್ಮನ ಮನೋಭಾವವು ಏನೆಂದು ತಿಳಿದಿದೆ; [oo]ಆ ಆತ್ಮನು [pp]ದೇವರ ಚಿತ್ತಾನುಸಾರವಾಗಿ ದೇವಜನರಿಗೋಸ್ಕರ ಬೇಡಿಕೊಳ್ಳುವನೆಂದು ಆತನು ಬಲ್ಲನು.
28 ಇದಲ್ಲದೆ ದೇವರ ಸಂಕಲ್ಪದ ಮೇರೆಗೆ [qq]ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ [rr]ಎಲ್ಲಾ ಕಾರ್ಯಗಳು ಒಳ್ಳೆಯದಕ್ಕಾಗಿಯೇ ಆಗುವುದೆಂದು ನಮಗೆ ತಿಳಿದಿದೆ. 29 ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡನೋ ಅವರನ್ನು ತನ್ನ ಮಗನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದನು. 30 ಮತ್ತು ಯಾರನ್ನು ಮೊದಲು ನೇಮಿಸಿದನೋ ಅವರನ್ನು ಕರೆದನು. ಯಾರನ್ನು ಕರೆದನೋ [ss]ಅವರನ್ನು ನೀತಿವಂತರೆಂದು ನಿರ್ಣಯಿಸಿದನು. ಯಾರನ್ನು ನೀತಿವಂತರೆಂದು ನಿರ್ಣಯಿಸಿದನೋ ಅವರನ್ನು ಮಹಿಮಾಪದವಿಗೆ ಸೇರಿಸಿದನು.
- a 1 ಕೊರಿ 15:45; 2 ಕೊರಿ 3:6
- b ನನ್ನನ್ನು ಎಂದು ಬರೆದಿದೆ
- c ರೋಮಾ. 8:12; 6:14,18; 7:4
- d ಗಲಾ. 9; ಇಬ್ರಿ. 7:18
- e ಯಾಜ 16:5; ಇಬ್ರಿ. 10:6,8; 13:11
- f ಫಿಲಿ. 2:7; ಯೋಹಾ 1:14
- g ಗಲಾ. 5:16,25
- h ಗಲಾ. 6:8
- i ಗಲಾ. 5:19-21
- j ಗಲಾ. 5:22,23,25
- k ರೋಮಾ. 6:21; 8:13
- l ಯಾಕೋಬ 4:4
- m 1 ಕೊರಿ 2:14
- n ರೋಮಾ. 8:11; ಕೊರಿ 3:16; 6:19; 2 ಕೊರಿ 6:16; ತಿಮೊ. 1:14
- o ಯೂದ 19
- p ಅ. ಕೃ. 16:7
- q ಅ. ಕೃ. 2:24
- r ರೋಮಾ. 8:2
- s ಕೊಲೊ 3:5
- t ಗಲಾ. 5:18
- u ರೋಮಾ. 8:16,19; 9:8,26; ಯೋಹಾ 1:12; 1 ಯೋಹಾ 3:1
- v 2 ತಿಮೊ. 1:7; 1 ಯೋಹಾ 4:18
- w ರೋಮಾ. 8:23; ಗಲಾ. 4:5
- x ಗಲಾ. 4:6; ಮಾರ್ಕ 14:36
- y 2 ಕೊರಿ 1:22; 5:5; ಎಫೆ 1:13,14; 1 ಯೋಹಾ 3:24
- z ಗಲಾ. 3:29; 4:7; ತೀತ 3:7
- aa 2 ಕೊರಿ 1:7; 2 ತಿಮೊ. 2:12; ಅ. ಕೃ. 14:22
- bb 1 ಪೇತ್ರ. 4:13; 5:1; 1 ಯೋಹಾ 3:2
- cc 2 ಕೊರಿ 4:17
- dd 1 ಪೇತ್ರ. 4:13; 5:1; 1 ಯೋಹಾ 3:2
- ee ಆದಿ 3:18,19; ಪ್ರಸಂಗಿ 1:2
- ff ಆದಿ 3:17
- gg ಅ. ಕೃ. 3:21
- hh 2 ಕೊರಿ 5:5
- ii ರೋಮಾ. 8:19,25
- jj ರೋಮಾ. 7:24; ಫಿಲಿ. 3:20,21
- kk 1 ಥೆಸ. 1:3; 5:8
- ll ಯಾಕೋಬ 4:3
- mm ಜೆಕ. 12:10; ಎಫೆ 6:18
- nn 1 ಸಮು 16:7; 1ಪೂರ್ವ 28:9; ಜ್ಞಾ. 15:11; 17:3; ಯೆರೆ 11:20, 17:10; ಲೂಕ 16:15; 1 ಥೆಸ. 2:4; ಪ್ರಕ 2:23
- oo ರೋಮಾ. 8:34
- pp 1 ಯೋಹಾ 5:14
- qq ರೋಮಾ. 9:24; 1 ಕೊರಿ 1:9; ಗಲಾ. 1:15; ಎಫೆ 4:1-4; 2 ತಿಮೊ. 1:9; ಇಬ್ರಿ. 9:15
- rr ಎಜ್ರ 8:22
- ss 1 ಕೊರಿ 6:11
- tt 2 ಅರಸು. 16; ಕೀರ್ತ 118:6; 1 ಯೋಹಾ 4:4
- uu ಯೋಹಾ 3:16
- vv ರೋಮಾ. 4:25
- ww ಯೆಶಾ 50:8,9
- xx ಇಬ್ರಿ. 7:5; 1 ಯೋಹಾ 2:1
- yy ಕೀರ್ತ 44:22
- zz ಗಲಾ. 2:20; ಎಫೆ 5:2; ಪ್ರಕ 1:5; 3:9
- 1 ಕೊರಿ 15:57; ಯೋಹಾ 16:33