4 ಪರಲೋಕದಿಂದ ಹೇಳುವ ಮತ್ತೊಂದು ಧ್ವನಿಯನ್ನು ಕೇಳಿದೆನು,
9-10 “[t]ಅವಳೊಂದಿಗೆ ಜಾರತ್ವಮಾಡಿ ಭೋಗಿಗಳಾದ ಭೂರಾಜರು ಅವಳ [u]ದಹನದಿಂದೇರುವ ಹೊಗೆಯನ್ನು ನೋಡಿ ಭಯಪಟ್ಟು ಅವಳಿಗಾಗಿ [v]ದೂರದಲ್ಲಿ ನಿಂತು ಅಳುತ್ತಾ [w]ಗೋಳಾಡುತ್ತಾ, ‘ಅಯ್ಯೋ ಅಯ್ಯೋ [x]ಮಹಾ ನಗರವಾದ ಬಾಬೆಲ್ ಪಟ್ಟಣವೇ, ಬಲಿಷ್ಠವಾದ ಬಾಬೆಲ್ ನಗರಿಯೇ ನಿನಗೆ ವಿಧಿಸಲ್ಪಟ್ಟ ದಂಡನೆಯು [y]ಒಂದೇ ತಾಸಿನಲ್ಲಿ ಬಂದಿತಲ್ಲಾ’ ಎಂದು ಶೋಕಿಸುವರು.
11 “ಇದಲ್ಲದೆ [z]ಭೂಮಿಯ ವರ್ತಕರು ಅವಳಿಗಾಗಿ ದುಃಖಿಸಿ ಗೋಳಾಡುತ್ತಾ, 12 ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ, ಧೂಮ್ರವರ್ಣದ ವಸ್ತ್ರ, ರೇಷ್ಮೆ, ಕಡುಗೆಂಪು ಉಡುಪು ಸಕಲ ವಿಧವಾದ ಮರಮುಟ್ಟು ಮತ್ತು ದಂತದ ಸಾಮಾನುಗಳು, ಬೆಲೆಬಾಳುವ ಮರ, ತಾಮ್ರ, ಕಬ್ಬಿಣ, ಚಂದ್ರಕಾಂತ ಶಿಲೆ. ಸುಗಂಧ ಸರಕುಗಳಾದ 13 ಲವಂಗ, ಚಕ್ಕೆ, ಧೂಪ, ರಕ್ತಬೋಳ, ಸುಗಂಧತೈಲ, ದ್ರಾಕ್ಷಾರಸ, ಎಣ್ಣೆ, ನಯವಾದ ಹಿಟ್ಟು, ಗೋದಿ, ದನ, ಕುರಿ, ಕುದುರೆ, ರಥ, ಗುಲಾಮರು, ಮನುಷ್ಯಪ್ರಾಣಗಳು ಇವೇ ಮೊದಲಾದ ನಮ್ಮ ಸರಕುಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ಗೋಳಾಡುವರು. 14 ‘ನೀನು ಬಯಸಿದ ನಿನ್ನ ಫಲಗಳು ನಿನ್ನನ್ನು ಬಿಟ್ಟು ಹೋದವು. ನಿನ್ನ ಎಲ್ಲಾ ವೈಭವವು ಹಾಗೂ ಶೋಭಾಯಮಾನವಾದ ಸೊಗಸುಗಳೆಲ್ಲ ನಿನ್ನಿಂದ ನಾಶವಾದವು. ಅವು ಇನ್ನು ಮೇಲೆ ನಿನಗೆ ಸಿಕ್ಕುವುದೇ ಇಲ್ಲ.’ 15 [aa]ಆ ಸರಕುಗಳನ್ನು ಮಾರಿ ಅವಳಿಂದ ಐಶ್ವರ್ಯವಂತರಾದ ವರ್ತಕರು [bb]ದೂರದಲ್ಲಿ ನಿಂತು ಅವಳ ಯಾತನೆಯ ದೆಸೆಯಿಂದ ಭಯಪಟ್ಟು ದುಃಖಿಸಿ ಗೋಳಾಡುತ್ತಾ, 16 ‘ಅಯ್ಯೋ ಅಯ್ಯೋ ನಯವಾದ ನಾರುಮಡಿಯನ್ನೂ, ಧೂಮ್ರವರ್ಣದ ವಸ್ತ್ರಗಳನ್ನೂ, ಕಡುಗೆಂಪು ಉಡುಪನ್ನೂ ಧರಿಸಿಕೊಂಡು, ಚಿನ್ನ, ರತ್ನ, ಮುತ್ತು [cc]ಇವುಗಳಿಂದ ತನ್ನನ್ನು ಅಲಂಕರಿಸಿಕೊಂಡಿದ್ದ ಈ ಮಹಾಪಟ್ಟಣಕ್ಕೆ ಎಂಥ ದುರ್ಗತಿ ಸಂಭವಿಸಿತು.’ 17 ಅಷ್ಟು ಐಶ್ವರ್ಯವು [dd]ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ ಎಂದು ಪರಿತಪಿಸುವರು. ಇದಲ್ಲದೆ [ee]ಹಡಗುಗಳ ಯಜಮಾನರೂ, ಪಯಣಿಗರೂ, ನಾವಿಕರೂ ಸಮುದ್ರದಿಂದ ತಮ್ಮ ಜೀವನವನ್ನುಮಾಡುತ್ತಿದ್ದವರೆಲ್ಲರೂ ದೂರದಲ್ಲಿ ನಿಂತು, 18 [ff]ಅವಳ ದಹನದ ಹೊಗೆಯನ್ನು ನೋಡಿ [gg]‘ಈ ಮಹಾ ಪಟ್ಟಣಕ್ಕೆ ಸಮಾನವಾದದ್ದು ಯಾವುದು?’ ಎಂದು ಮೊರೆಯಿಡುವರು. 19 ಅನಂತರ ಅವರು [hh]ತಮ್ಮ ತಲೆಗಳ ಮೇಲೆ ಮಣ್ಣನ್ನು ಸುರಿದುಕೊಂಡು, ‘ಅಯ್ಯೋ ಅಯ್ಯೋ ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದವರೆಲ್ಲರೂ [ii]ಅವಳ ಅಮೂಲ್ಯ ದ್ರವ್ಯಗಳಿಂದಲೇ ಐಶ್ವರ್ಯವಂತರಾದರಲ್ಲಾ, [jj]ಇವಳು ಒಂದೇ ಗಳಿಗೆಯಲ್ಲಿ ಹಾಳಾದಳಲ್ಲಾ’ ” ಎಂದು ಗೋಳಾಡುತ್ತಾ ದುಃಖಿಸುವರು. 20 [kk]ಪರಲೋಕವೇ, ದೇವಜನರೇ, ಅಪೊಸ್ತಲರೇ, [ll]ಪ್ರವಾದಿಗಳೇ ಅವಳ ನಿಮಿತ್ತ ಜಯಘೋಷಮಾಡಿರಿ. ಏಕೆಂದರೆ [mm]ಇವಳು ನಿಮಗೆ ಮಾಡಿದ ಅನ್ಯಾಯಕ್ಕೆ ಸರಿಯಾಗಿ ದೇವರು ಇವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.
21 ಆಗ [nn]ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ [oo]ಒಂದು ಕಲ್ಲನ್ನು ತೆಗೆದುಕೊಂಡು ಸಮುದ್ರದೊಳಗೆ ಬಿಸಾಡಿ, [pp]“ಮಹಾಪಟ್ಟಣವಾದ ಬಾಬೆಲನ್ನು ಹೀಗೆ ಹಿಂಸಾಚಾರದಿಂದ ಬಿಸಾಡುವನು. ಅದು ಇನ್ನೆಂದಿಗೂ ಕಾಣಿಸುವುದಿಲ್ಲ. 22 ಬಾಬೆಲೇ ನಿನ್ನಲ್ಲಿ [qq]ವೀಣೆಗಾರರೂ, ವಾದ್ಯಗಾರರೂ, ಕೊಳಲು ಊದುವವರೂ, ತುತ್ತೂರಿಯವರೂ ಮೊದಲಾದವರ ಧ್ವನಿಯೂ ಇನ್ನೆಂದಿಗೂ ಕೇಳಿಸುವುದಿಲ್ಲ. ಯಾವುದೇ ವಿಧವಾದ ಕಸಬುಗಾರನೂ ನಿನ್ನಲ್ಲಿ ಇನ್ನೆಂದಿಗೂ ಕಾಣ ಸಿಕ್ಕುವುದಿಲ್ಲ. [rr]ಬೀಸುವ ಕಲ್ಲಿನ ಶಬ್ದವು ನಿನ್ನಲ್ಲಿ ಇನ್ನೆಂದಿಗೂ ಕೇಳಿಸದು. 23 ದೀಪದ ಬೆಳಕು ನಿನ್ನಲ್ಲಿ ಇನ್ನೆಂದಿಗೂ ಪ್ರಕಾಶಿಸದು. [ss]ವಧೂವರರ ಸ್ವರವು ನಿನ್ನಲ್ಲಿ ಇನ್ನೆಂದಿಗೂ ಕೇಳಿಬರದು. [tt]ನಿನ್ನ ವರ್ತಕರು ಭೂಮಿಯ ಮೇಲೆ ಪ್ರಭುಗಳಾಗಿದ್ದರಲ್ಲವೇ. [uu]ನಿನ್ನ ಮಾಟದ ಶಕ್ತಿಯಿಂದ ಎಲ್ಲಾ ದೇಶದವರು ವಂಚಿಸಲ್ಪಟ್ಟರು.
24 “[vv]ಪ್ರವಾದಿಗಳ, ದೇವಜನರ ರಕ್ತವು ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ [ww]ಅವಳಲ್ಲಿಯೇ ಸಿಕ್ಕಿತಲ್ಲಾ” ಎಂದು ಹೇಳಿದನು.
<- ಪ್ರಕಟಣೆ 17ಪ್ರಕಟಣೆ 19 ->- a ಪ್ರಕ 17 1, 7:
- b ಯೆಹೆ. 43:2:
- c ಯೆಶಾ 21:9; ಪ್ರಕ 14:8:
- d ಯೆರೆ 50:39; 51:37; ಚೆಫ. 2:14,15:
- e ಯೆಶಾ 14:23:
- f ಪ್ರಕ 14:8:
- g ಅಥವಾ, ಅವಳ ದುಷ್ಕರ್ಮವನ್ನು ನೋಡಿರಿ. ಪ್ರಕ 17:2:
- h ಪ್ರಕ 18:11, 15:
- i ಯೆಶಾ 48:20; ಯೆರೆ 51:6, 45; 2 ಕೊರಿ 6:17:
- j ಎಜ್ರ. 9:6; ಯೋನ. 1:2:
- k ಪ್ರಕ 16:19:
- l ಕೀರ್ತ 48:20; ಯೆರೆ 51:6, 45; 2 ಕೊರಿ 6 17:
- m ಯೆರೆ 16:18:
- n ಪ್ರಕ 14:10; 16:19; 17:4:
- o ಯೆಹೆ. 28:2-8:
- p ಯೆಶಾ 47:7, 8; ಚೆಫ. 2:15:
- q ಯೆಶಾ 47 9; ಪ್ರಕ 18:10:
- r ಯೆರೆ 50. 34:
- s ಪ್ರಕ 17:16:
- t ಪ್ರಕ 17:2; 18:3:
- u ಪ್ರಕ 18:18; 19:3; ಆದಿ 19:28:
- v ಪ್ರಕ 18:15, 17:
- w ಯೆರೆ 50. 46:
- x ಪ್ರಕ 14:8:
- y ಪ್ರಕ 18:17, 19; ವ. 8:
- z ಪ್ರಕ 18:3, 15; ಯೆಹೆ. 27:36:
- aa ಪ್ರಕ 18:3, 11:
- bb ವ. 10:
- cc ಪ್ರಕ 17:4:
- dd ಪ್ರಕ 18:10, 19:
- ee ಯೆಹೆ. 27:28, 29:
- ff ವ. 9:
- gg ಯೆಹೆ. 27:30, 32; ಪ್ರಕ 13:4:
- hh ಯೆಹೋ. 7:6; ಯೋಬ. 2:12:
- ii ಪ್ರಕ 18:3, 15:
- jj ಪ್ರಕ 18:10, 17:
- kk ಧರ್ಮೋ 32:43; ಯೆರೆ 51:48; ಪ್ರಕ 12:12:
- ll ಲೂಕ 11:49, 50.
- mm ಪ್ರಕ 19:2:
- nn ಪ್ರಕ 5:2; 10:1:
- oo ಯೆರೆ 51:63, 64:
- pp ವ. 10:
- qq ಯೆಶಾ 14:11; 24:8; ಯೆಹೆ. 26:13:
- rr ಪ್ರಸಂಗಿ. 12:4; ಯೆರೆ 25:10:
- ss ಯೆರೆ 7:34; 16:9; 33:11:
- tt ಯೆಶಾ 23:8:
- uu ನಹೂ. 3:4:
- vv ಪ್ರಕ 17:6; ಮತ್ತಾ 23:35, 36:
- ww ಮೂಲ: ಅವಳಲ್ಲಿ.