Link to home pageLanguagesLink to all Bible versions on this site
15
ಅಂತಿಮ ಉಪದ್ರವಗಳು
1 ಪರಲೋಕದಲ್ಲಿ ಆಶ್ಚರ್ಯಕರವಾದ *ಪ್ರಕ 12:1, 3:ಮತ್ತೊಂದು ಮಹಾ ಚಿಹ್ನೆಯನ್ನು ನಾನು ನೋಡಿದೆನು. ಪ್ರಕ 16:1; 17:1; 21:9:ಏಳು ಮಂದಿ ದೇವದೂತರ ಕೈಯಲ್ಲಿ ಏಳು ಉಪದ್ರವಗಳಿದ್ದವು, ಇವು ಕಡೇ ಉಪದ್ರವಗಳು. ಇವುಗಳೊಂದಿಗೆ ದೇವರ ರೌದ್ರವು ಸಂಪೂರ್ಣವಾಗುವುದು.

2 ನಾನು ನೋಡಲಾಗಿ ಪ್ರಕ 4:6:ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಏನೋ ಒಂದು ನನಗೆ ಕಾಣಿಸಿತು. ಆಗ ಮೃಗಕ್ಕೆ ಮತ್ತು ಅದರ ವಿಗ್ರಹಕ್ಕೆ ಆರಾಧಿಸದೆಯೂ §ಪ್ರಕ 13:17:ಅದರ ಹೆಸರನ್ನು ಪ್ರತಿನಿಧಿಸುವ ಸಂಖ್ಯೆಯ *ಪ್ರಕ 12:11:ಮುದ್ರೆಯನ್ನು ಹಾಕಿಸಿಕೊಳ್ಳದೆ ಜಯ ಹೊಂದಿದವರು ಪ್ರಕ 5:8; 14:2:ದೇವರಿಂದ ಕೊಡಲ್ಪಟ್ಟ ವೀಣೆಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ಗಾಜಿನ ಸಮುದ್ರದ ಅಥವಾ ಮೇಲೆ. ಬಳಿಯಲ್ಲಿ ನಿಂತಿದ್ದರು. 3 ಅವರು §ಇಬ್ರಿ. 3:5:ದೇವರ ದಾಸನಾದ *ವಿಮೋ 15:1; ಧರ್ಮೋ 31:30. ಮೋಶೆಯ ಹಾಡನ್ನೂ, ಯಜ್ಞದ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ,

ಧರ್ಮೋ 32:3, 4; ಯೋಬ. 37:5; ಕೀರ್ತ 111:2; 139:14; 145:17:“ಕರ್ತನಾದ ದೇವರೇ ಸರ್ವಶಕ್ತನೇ,
ನಿನ್ನ ಕೃತ್ಯಗಳು ಮಹತ್ತಾದವುಗಳೂ, ಆಶ್ಚರ್ಯಕರವಾದವುಗಳೂ ಆಗಿವೆ.
ಕೆಲವು ಪ್ರತಿಗಳಲ್ಲಿ, ಸರ್ವಯುಗಗಳ ಎಂದು ಬರೆದದೆ. ಸರ್ವಜನಾಂಗಗಳ ಅರಸನೇ.
§ಪ್ರಕ 16:7; ಹೋಶೇ. 14:9:ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
4 ಕರ್ತನೇ, *ಪ್ರಕ 14:7; ಮಲಾ. 2:2:ನಿನಗೆ ಭಯಪಡದವರು
ಮತ್ತು ನಿನ್ನ ನಾಮವನ್ನು ಮಹಿಮೆ ಪಡಿಸದವರು ಯಾರಾದರು ಇದ್ದಾರೆಯೇ?
ಪ್ರಕ 16:5:ನೀನೊಬ್ಬನೇ ಪರಿಶುದ್ಧನು.
ನಿನ್ನ ನೀತಿಯುಳ್ಳ ನ್ಯಾಯತೀರ್ಪು ಬೆಳಕಿಗೆ ಬಂದುದರಿಂದ
ಕೀರ್ತ 86:9:ಸರ್ವಜನಾಂಗಗಳು ನಿನ್ನ ಸನ್ನಿಧಾನಕ್ಕೆ ಬಂದು
ನಿನ್ನನ್ನು ಆರಾಧಿಸುವರು.”

5 ಇದಾದ ನಂತರ ನಾನು ನೋಡಿದಾಗ §ವಿಮೋ 38:21; ಅರಣ್ಯ 1:5 0; ಅ. ಕೃ. 7:44; ಪ್ರಕ 11:19:ಪರಲೋಕದಲ್ಲಿರುವ ದೇವದರ್ಶನ ಗುಡಾರದ ಪವಿತ್ರ ಸ್ಥಾನವು ತೆರೆಯಲ್ಪಟ್ಟಿತು. 6 ಆ ಆಲಯದೊಳಗಿಂದ ಏಳು *ಅಂಟು ರೋಗ ಅಥವಾ ಮಾರಿಪ್ಲೇಗು ಪಿಡುಗು. ಉಪದ್ರವಗಳನ್ನು ಕೈಯಲ್ಲಿ ಹಿಡಿದಿರುವ ಆ ಏಳು ಮಂದಿ ದೇವದೂತರು ಬಂದರು. ಅವರು ಶುಭ್ರವೂ, ಪ್ರಕಾಶವೂ ಆದ ನಾರುಮಡಿಯನ್ನು ಧರಿಸಿಕೊಂಡಿದ್ದರು. ಮತ್ತು ಪ್ರಕ 1:13:ತಮ್ಮ ಎದೆಗಳ ಮೇಲೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು. 7 ಪ್ರಕ 4:6:ನಾಲ್ಕು ಜೀವಿಗಳಲ್ಲಿ ಒಂದು ಆ ಏಳು ಮಂದಿ ದೇವದೂತರಿಗೆ §ಪ್ರಕ 1:18; 4:9; 5:13:ಯುಗಯುಗಾಂತರಗಳಲ್ಲಿಯೂ ಜೀವಿಸುವಾತನಾದ ದೇವರ ರೌದ್ರದಿಂದ ತುಂಬಿದ್ದ *ಪ್ರಕ 5:8:ಏಳು ಚಿನ್ನದ ಬಟ್ಟಲುಗಳನ್ನು ಕೊಟ್ಟಿತು. 8 ವಿಮೋ 40. 34; ಯೆಶಾ 6:4; ಹಗ್ಗಾ. 2:7; 1 ಅರಸು. 8:10; 2 ಪೂರ್ವ 5:13, 14:ದೇವರ ಮಹಿಮೆಯಿಂದಲೂ, ಆತನ ಶಕ್ತಿಯಿಂದಲೂ ಉಂಟಾದ ಹೊಗೆಯಿಂದ ಆ ಆಲಯ ತುಂಬಿತ್ತು. ಆ ಏಳು ಮಂದಿ ದೇವದೂತರ ಕೈಯಲ್ಲಿದ್ದ ಏಳು ಉಪದ್ರವಗಳು ತೀರುವ ತನಕ ವಿಮೋ 40. 35; 1 ಅರಸು. 8:11:ಆ ಆಲಯವನ್ನು ಪ್ರವೇಶಿಸುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ.

<- ಪ್ರಕಟಣೆ 14ಪ್ರಕಟಣೆ 16 ->