7 ಪರಲೋಕದಲ್ಲಿ ಯುದ್ಧ ನಡೆಯಿತು. [l]ಮೀಕಾಯೇಲನೂ ಅವನ ದೂತರೂ ಘಟಸರ್ಪದ ವಿರುದ್ಧ ಯುದ್ಧ ಮಾಡಿದರು. ಘಟಸರ್ಪವೂ [m]ಅವನ ದೂತರೂ ಯುದ್ಧ ಮಾಡಿ ಕಾದಾಡಿದರು. 8 ಆದರೆ ಘಟಸರ್ಪಕ್ಕೆ ಸಾಕಷ್ಟು ಸಾಮರ್ಥ್ಯವಿಲ್ಲದ್ದರಿಂದ ಅದು ಸೋಲನ್ನಪ್ಪಿತು. ಹೀಗೆ ಪರಲೋಕದಲ್ಲಿ ಅವರಿಗೂ ಸ್ಥಳವಿಲ್ಲದಂತಾಯಿತು. 9 [n]ಭೂಲೋಕದವರನ್ನೆಲ್ಲಾ ಮರುಳುಗೊಳಿಸಿ ಪಾಪ ಮಾಡಿಸುತ್ತಿದ್ದ ಆ ಮಹಾ ಘಟಸರ್ಪವು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಆ [o]ಪುರಾತನ ಸರ್ಪವನ್ನು [p]ಭೂಮಿಗೆ ತಳ್ಳಲಾಯಿತು. ಅವನ ದೂತರು ಅವನೊಂದಿಗೆ ದೊಬ್ಬಲ್ಪಟ್ಟರು.
10 ಆಗ ಪರಲೋಕದಲ್ಲಿ ಮಹಾಶಬ್ದವನ್ನು ಕೇಳಿದೆನು. ಅದು, “ಈಗ ನಮ್ಮ ದೇವರ [q]ರಕ್ಷಣೆಯೂ, ಶಕ್ತಿಯೂ, ರಾಜ್ಯವೂ, ಆತನ ಕ್ರಿಸ್ತನ ಅಧಿಪತ್ಯ ಆರಂಭವಾಗಿದೆ. ಹಗಲಿರುಳು ನಮ್ಮ ಸಹೋದರರನ್ನು ಕುರಿತು ನಮ್ಮ ದೇವರ ಮುಂದೆ ಸದಾ [r]ದೂರು ಹೇಳುತ್ತಿದ್ದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ. 11 ಅವರು [s]ಮರಣದವರೆಗೆ ತಮ್ಮ [t]ಪ್ರಾಣವನ್ನು ಪ್ರೀತಿಸದೆ, ಯಜ್ಞದ ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ [u]ಅವನನ್ನು ಜಯಿಸಿದರು. 12 ಆದ್ದರಿಂದ [v]ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಆದರೆ [w]ಭೂಮಿ, ಸಮುದ್ರಗಳೇ ನಿಮ್ಮ ದುರ್ಗತಿಯನ್ನು ಏನೆಂದು ಹೇಳಲಿ ಏಕೆಂದರೆ ಸೈತಾನನು [x]ತನಗಿರುವ ಕಾಲವು ಇನ್ನು ಸ್ವಲ್ಪಮಾತ್ರವೆಂದು ತಿಳಿದು ಮಹಾ ರೋಷವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ” ಎಂಬುದಾಗಿ ಹೇಳಿತು.
13 ಘಟಸರ್ಪನು ತಾನು ದೊಬ್ಬಲ್ಪಟ್ಟು ಭೂಮಿಗೆ ಬಿದ್ದಿರುವುದನ್ನು ಗ್ರಹಿಸಿಕೊಂಡು, [y]ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಹಿಂಸಿಸುವುದಕ್ಕೆ ಅಟ್ಟಿಸಿಕೊಂಡು ಹೋಯಿತು. 14 ಆದರೆ ಆ ಸ್ತ್ರೀಯು [z]ಮರುಭೂಮಿಯಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವುದಕ್ಕಾಗಿ [aa]ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲ್ಪಟ್ಟವು. ಅಲ್ಲಿ ಆಕೆಯು ಒಂದು ಕಾಲ, ಎರಡು ಕಾಲ, ಅರ್ಧ ಕಾಲ ಸರ್ಪನಿಗೆ ಸಿಗದಂತೆ ಪೋಷಣೆ ಹೊಂದಿದಳು. 15 ಆ ಸರ್ಪನು ಪ್ರವಾಹದಿಂದ ಸ್ತ್ರೀಯನ್ನು ಸೆಳೆದುಕೊಂಡು ಹೋಗಬೇಕೆಂದು ಆಕೆಯ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಸುರಿಸಿದನು. 16 ಆದರೆ ಭೂಮಿಯು ಆ ಸ್ತ್ರೀಗೆ ಸಹಾಯಮಾಡಿತು. ಅದು ತನ್ನ ಬಾಯಿ ತೆರೆದು ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ನದಿಯನ್ನು ನುಂಗಿಬಿಟ್ಟಿತ್ತು. 17 ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹು ಕೋಪಗೊಂಡು, [bb]ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ, [cc]ದೇವರ ಆಜ್ಞೆಗಳನ್ನು ಕೈಗೊಂಡು ನಡೆದು [dd]ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿದವರ ಮೇಲೆ [ee]ಯುದ್ಧಮಾಡುವುದಕ್ಕೆ ಹೊರಟು, 18 ಸಮುದ್ರ ತೀರದ ಮರಳಿನ ಮೇಲೆ ನಿಂತನು.
<- ಪ್ರಕಟಣೆ 11ಪ್ರಕಟಣೆ 13 ->- a ಕೀರ್ತ 104:2; ಪರಮ. 6:10:
- b ಯೆಶಾ 66:7-10; ಮೀಕ. 4:10; ಮತ್ತಾ 24:8; ಯೋಹಾ 16:21:
- c ಯೆಶಾ 27:1; ಪ್ರಕ 17:3:
- d ಪ್ರಕ 13:1; 17:9, 12:
- e ದಾನಿ. 7:7:
- f ಪ್ರಕ 19:12:
- g ಪ್ರಕ 8:7:
- h ದಾನಿ. 8:10:
- i ಮತ್ತಾ 2:16:
- j ಮತ್ತಾ 2:6; ಪ್ರಕ 2:27:
- k ಪ್ರಕ 11:2, 3; 13:5:
- l ಯೂದ. 9:
- m ಮತ್ತಾ 25:41; 2 ಪೇತ್ರ. 2:4; ಯೂದ 6:
- n ಪ್ರಕ 20:3, 10; 13:14; ಯೋಹಾ 8:44:
- o ಆದಿ 3:1; ಪ್ರಕ 20:2:
- p ಲೂಕ 10:18; ಯೊಹಾ. 12:31:
- q ಅಥವಾ ಜಯವೂ. ಪ್ರಕ 7:10; 19:1:
- r ಯೋಬ. 1:9; 2:5; ಜೆಕ. 3:1:
- s ಪ್ರಕ 2:10:
- t ಲೂಕ 14:26; ಯೋಹಾ 12:25:
- u ಪ್ರಕ 15:2; ಯೋಹಾ 16:33; ರೋಮಾ. 8:37; 16:20:
- v ಕೀರ್ತ 96:11; ಯೆಶಾ 44:23; 49:13; ಪ್ರಕ 18:20:
- w ಪ್ರಕ 8:13:
- x ಮತ್ತಾ 8:29; ಪ್ರಕ 10:6:
- y ವ. 5:
- z ವ. 6:
- aa ವಿಮೋ 19:4:
- bb ಆದಿ 3:15:
- cc ಪ್ರಕ 14:12; 1 ಯೋಹಾ 2:3:
- dd ಪ್ರಕ 1:2; 6:9; 19:10:
- ee ಪ್ರಕ 11:7; 13:7: