Link to home pageLanguagesLink to all Bible versions on this site
95
ದೇವರನ್ನು ವಿಶ್ವಾಸದಿಂದ ಆರಾಧಿಸುವುದು
ಕೀರ್ತ 81; 96-100
1 ಬನ್ನಿರಿ, ಯೆಹೋವನಿಗೆ ಉತ್ಸಾಹದಿಂದ ಹಾಡೋಣ;
ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ.
2 ಕೃತಜ್ಞತಾಸ್ತುತಿಯೊಡನೆ ಆತನ ಸನ್ನಿಧಿಗೆ ಸೇರೋಣ;
ಕೀರ್ತನೆಗಳಿಂದ ಆತನಿಗೆ ಜಯಘೋಷ ಮಾಡೋಣ.
3 ಯೆಹೋವನು ಮಹಾದೇವರೂ,
ಎಲ್ಲಾ ದೇವರುಗಳಲ್ಲಿ ಮಹಾರಾಜನೂ ಆಗಿದ್ದಾನೆ.
4 ಭೂಮಿಯ ಅಗಾಧವು ಆತನ ಕೈಯಲ್ಲಿರುತ್ತದೆ;
ಪರ್ವತಶಿಖರಗಳು ಆತನವೇ.
5 ಆತನೇ ಸಮುದ್ರವನ್ನು ನಿರ್ಮಿಸಿದವನು;
ಅದು ಆತನದೇ, ಒಣನೆಲವು ಆತನ ಕೈಕೆಲಸವೇ.
6 ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ
ಸಾಷ್ಟಾಂಗವೆರಗಿ ಆರಾಧಿಸೋಣ.
7 ಆತನು ನಮ್ಮ ದೇವರು;
ನಾವೋ ಆತನು ಪಾಲಿಸುವ ಪ್ರಜೆಯೂ,
ಆತನ ಕೈಕೆಳಗಿರುವ ಹಿಂಡೂ ಆಗಿದ್ದೇವೆ.
ನೀವು ಈ ಹೊತ್ತು ಆತನ ಶಬ್ದಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೇಯದು.
8 ನಿಮ್ಮ ಹಿರಿಯರು ಅರಣ್ಯದಲ್ಲಿರುವ ಮೆರೀಬದಲ್ಲಿ*ಮೆರೀಬ ಅಂದರೆ ವಾಗ್ವಾದ.,
ಮಸ್ಸಾದಲ್ಲಿಮಸ್ಸಾದಲ್ಲಿ ಅಂದರೆ ಪರೀಕ್ಷೆ, ವಿಮೋ 17:1-17, ಅರಣ್ಯ 20:1-13, ಧರ್ಮೋ 6:16, 33:8. ಮಾಡಿದ ದಿನದಂತೆ,
ನೀವು ನಿಮ್ಮ ಹೃದಯವನ್ನು ಕಠಿಣಮಾಡಿಕೊಳ್ಳಬೇಡಿರಿ.
9 ಅಲ್ಲಿ ಅವರು ನನ್ನನ್ನು ಪರೀಕ್ಷಿಸಿದರು;
ನನ್ನ ಮಹತ್ಕಾರ್ಯಗಳನ್ನು ನೋಡಿದರೂ ನನ್ನನ್ನು ಪರಿಶೋಧಿಸಿದರು.
10 ನಾನು ನಲ್ವತ್ತು ವರ್ಷ ಆ ಸಂತತಿಯವರ ವಿಷಯದಲ್ಲಿ ಬೇಸರಗೊಂಡೆನು;
“ಈ ಜನರು ಹೃದಯದಲ್ಲಿ ತಪ್ಪಿಹೋಗುವವರು,
ನನ್ನ ಆಜ್ಞೆಗಳಿಗೆ ವಿಧೇಯರಾಗದವರುನನ್ನ ಆಜ್ಞೆಗಳಿಗೆ ವಿಧೇಯರಾಗದವರು ಅಥವಾ ನನ್ನ ಮಾರ್ಗವನ್ನು ತಿಳಿಯದವರು.” ಎಂದು ಹೇಳಿದೆನು.
11 ಆದುದರಿಂದ ಇವರು, “ನನ್ನ ವಿಶ್ರಾಂತಿಯಲ್ಲಿ ಸೇರಬಾರದು” ಎಂದು
ಕೋಪಗೊಂಡು ಪ್ರಮಾಣಮಾಡಿದೆನು.

<- ಕೀರ್ತನೆಗಳು 94ಕೀರ್ತನೆಗಳು 96 ->