Link to home pageLanguagesLink to all Bible versions on this site
3
ನಿಜವಾದ ನೀತಿ
1 ಕಡೆಯದಾಗಿ ನನ್ನ ಸಹೋದರರೇ, *ಫಿಲಿ. 4:4, ಥೆಸ. 5:16ಕರ್ತನಲ್ಲಿ ಸಂತೋಷಪಡಿರಿ. 2 ಪೇತ್ರ. 1:12ಮೊದಲು ತಿಳಿಸಿದ ಅದೇ ಮಾತುಗಳನ್ನು ಪುನಃ ನಿಮಗೆ ಬರೆಯುವುದಕ್ಕೆ ನನಗೇನೂ ಬೇಸರವಿಲ್ಲ, ಅವುಗಳು ನಿಮ್ಮನ್ನು ಭದ್ರಪಡಿಸುವವು. 2 ಕೀರ್ತ 22:16,20, ಯೆಶಾ 56:10-11, ಪ್ರಕ 22:15, ಗಲಾ. 5:15ಆ ನಾಯಿಗಳಿಗೆ ಎಚ್ಚರವಾಗಿರಿ, §2 ಕೊರಿ 11:13ದುಷ್ಕರ್ಮಿಗಳಿಗೆ ಎಚ್ಚರಿಕೆಯಾಗಿರಿ. ಸುನ್ನತಿಯೆಂದು ಹೇಳಿಕೊಂಡು ಅಂಗಚ್ಛೇದನ ಮಾಡುವವರಿಂದ ಎಚ್ಚರಿಕೆಯಾಗಿರಿ. 3 ನಿಜವಾದ ಸುನ್ನತಿಯವರು ಯಾರೆಂದರೆ, *ಯೋಹಾ 4:23, ಯೂದ. 20, ಗಲಾ. 5:25ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ, ರೋಮಾ. 15:17, ಗಲಾ. 6:14ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ, ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ ರೋಮಾ. 2:29ನಾವುಗಳೇ. 4 §2 ಕೊರಿ 11:18ನಾನಾದರೋ ಶರೀರಸಂಬಂಧವಾದವುಗಳಲ್ಲಿ ಭರವಸವಿಡುವುದಕ್ಕೂ ಆಸ್ಪದವಿದೆ. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವುದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು. 5 *ಆದಿ 17:12ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು, 2 ಕೊರಿ 11:22ನಾನು ಇಸ್ರಾಯೇಲ್ ವಂಶದವನು, ರೋಮಾ. 11:1ಬೆನ್ಯಾಮೀನನ ಕುಲದವನು, §2 ಕೊರಿ 11:22ಇಬ್ರಿಯರಿಂದ ಹುಟ್ಟಿದ ಇಬ್ರಿಯನು, ಧರ್ಮಶಾಸ್ತ್ರಗಳ ದೃಷ್ಟಿಯಿಂದ ನೋಡಿದರೆ *ಅ. ಕೃ. 23:6, 26:5ನಾನು ಫರಿಸಾಯನು, 6 ಅ. ಕೃ. 8:3, 22:3-4, ಗಲಾ. 1:13-14ಮತಾಸಕ್ತಿಯನ್ನು ನೋಡಿದರೆ ನಾನು ಕ್ರೈಸ್ತ ಸಭೆಯ ಹಿಂಸಕನು, ವ. 9 ನೋಡಿರಿಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಷಿ. 7 ಆದರೆ, §ಲೂಕ 14:33ನನಗೆ ಲಾಭವಾಗಿದ್ದಂಥವುಗಳನ್ನು *ಇಬ್ರಿ. 11:26ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. 8 ಇಷ್ಟೇ ಅಲ್ಲದೆ, ಯೋಹಾ 17:3, 2 ಪೇತ್ರ. 1:3, ಯೆಶಾ 53:11, ಯೆರೆ 9:23-24ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು 2 ಕೊರಿ 5:15ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ. 9 ಇದರಲ್ಲಿ ನನ್ನ ಉದ್ದೇಶವೇನೆಂದರೆ, ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು, §ರೋಮಾ. 10:5, ವ. 6 ನೋಡಿರಿಧರ್ಮಶಾಸ್ತ್ರದ ಫಲವಾಗಿರುವ ಸ್ವನೀತಿಯನ್ನಲ್ಲ, *ರೋಮಾ. 1:17, 3:22, 1 ಕೊರಿ 1:30ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿರಬೇಕೆಂಬುದೇ. 10 ಎಫೆ 4:13ಆತನನ್ನೂ ರೋಮಾ. 1:4, 6:4, ಎಫೆ 1:19-20ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ, §1 ಪೇತ್ರ. 4:13, 2 ಕೊರಿ 1:5ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳಿದುಕೊಂಡು ಆತನ ಮರಣದ ವಿಷಯದಲ್ಲಿ ಆತನಂತೆ ರೂಪಾಂತರಗೊಳ್ಳಬೇಕೆಂಬುದೇ ನನ್ನ ಬಯಕೆಯಾಗಿದೆ. 11 ಹೀಗಾದರೆ *ಲೂಕ 20:35, 1 ಕೊರಿ 15:23, ಪ್ರಕ 20:5-6, ಇಬ್ರಿ. 11:35ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನದ ಅನುಭವ ನನಗೂ ಆದೀತು.
ಬಿರುದಿಗಾಗಿ ಓಟ
12 ಇಷ್ಟರೊಳಗೆ ನಾನಿದೆಲ್ಲವನ್ನೂ ಪಡಕೊಂಡು ಇಬ್ರಿ. 5:9, 11:40, 12:23ಪರಿಪೂರ್ಣತೆಗೆ ಬಂದವನೆಂದು ಹೇಳುವುದಿಲ್ಲ. ಆದರೆ ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸುವು ನನ್ನನ್ನು ಹಿಡಿದುಕೊಂಡನೋ ಅದನ್ನು ಹೊಂದುವುದಕ್ಕೋಸ್ಕರ ಪ್ರಯತ್ನಿಸುತ್ತಾ ಇದ್ದೇನೆ. 13 ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು ಲೂಕ 9:62, ಇಬ್ರಿ. 6:1ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ, 14 ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ §ಇಬ್ರಿ. 3:1, 1 ಪೇತ್ರ. 5:10, ರೋಮಾ. 8:28ಕರೆದು ನಮ್ಮ ಮುಂದೆ ಇಟ್ಟಿರುವ *1 ಕೊರಿ 9:24, ಕೊಲೊ 2:18ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ. 15 ನಮ್ಮಲ್ಲಿ 1 ಕೊರಿ 2:6ಪ್ರವೀಣರಾದವರೆಲ್ಲರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವುಳ್ಳವರಾಗಿರಿ. ಮತ್ತು ಯಾವುದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನು ದೇವರು ನಿಮಗೆ ತೋರಿಸಿಕೊಡುವನು. 16 ಅಂತೂ, ಗಲಾ. 6:16ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.

17 ಸಹೋದರರೇ, ನೀವೆಲ್ಲರು ನನ್ನೊಂದಿಗೆ ಸೇರಿ §ಫಿಲಿ. 4:9, 1 ಕೊರಿ 4:16ನನ್ನನ್ನು ಅನುಸರಿಸುವವರಾಗಿರಿ ಮತ್ತು ನಾವು ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ. 18 ಯಾಕೆಂದರೆ *2 ಕೊರಿ 11:13ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ. ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅ. ಕೃ. 20:31ಅಳುತ್ತಾ ಹೇಳುತ್ತೇನೆ. 19 2 ಕೊರಿ 11:15, 2 ಥೆಸ. 1:9ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, §2 ಕೊರಿ 11:12, ಗಲಾ. 6:13ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ, *ರೋಮಾ. 8:5, ಕೊಲೊ 3:2ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು. 20 ಎಫೆ 2:19ನಾವಾದರೋ ಪರಲೋಕದ ಪ್ರಜೆಗಳು, ಅ. ಕೃ. 1:11, 1 ಕೊರಿ 1:7, ಇಬ್ರಿ. 9:28ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರುನೋಡುತ್ತಾ ಇದ್ದೇವೆ. 21 ಆತನು §1 ಕೊರಿ 15:28ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ *ಎಫೆ 1:19ಪರಾಕ್ರಮವನ್ನು ಹೊಂದಿದವನಾಗಿ 1 ಕೊರಿ 15:43-53ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ಫಿಲಿ. 3:10, ಕೊಲೊ 3:4, ರೋಮಾ. 8:29ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು.

<- ಫಿಲಿಪ್ಪಿಯವರಿಗೆ 2ಫಿಲಿಪ್ಪಿಯವರಿಗೆ 4 ->