1 ಬೆಳಗಾಗಲು ಎಲ್ಲಾ ಮುಖ್ಯಯಾಜಕರೂ, ಜನರ ಹಿರಿಯರೂ ಯೇಸುವನ್ನು ಕೊಲ್ಲಿಸಬೇಕೆಂದು ಸಂಚುಮಾಡಿಕೊಂಡು, 2 ಆತನನ್ನು ಕಟ್ಟಿಸಿ ಕರೆದುಕೊಂಡು ಹೋಗಿ ದೇಶಾಧಿಪತಿಯಾದ ಪಿಲಾತನಿಗೆ ಒಪ್ಪಿಸಿದರು.
11 ಯೇಸು ದೇಶಾಧಿಪತಿಯ ಮುಂದೆ ನಿಂತಿರುವಾಗ ದೇಶಾಧಿಪತಿಯು ಆತನನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಯೇಸು, “ನೀನೇ ಹೇಳಿದ್ದೀ” ಅಂದನು. 12 ಮತ್ತು ಮುಖ್ಯಯಾಜಕರೂ ಹಿರಿಯರೂ ಆತನ ಮೇಲೆ ದೂರುಹೇಳುತ್ತಿರುವಾಗ ಆತನು ಏನೂ ಉತ್ತರ ಕೊಡಲಿಲ್ಲ, 13 ನಂತರ ಪಿಲಾತನು ಆತನನ್ನು, “ನಿನ್ನ ವಿರುದ್ಧ ಇಷ್ಟು ಸಾಕ್ಷಿ ಹೇಳುತ್ತಿದ್ದಾರೆ, ನಿನಗೆ ಕೇಳಿಸುತ್ತಿಲ್ಲವೋ?” ಎಂದು ಕೇಳಿದನು. 14 ಆತನು ಅವನ ಯಾವ ಮಾತುಗಳಿಗೂ ಉತ್ತರಕೊಡಲಿಲ್ಲ. ಅದನ್ನು ನೋಡಿ ದೇಶಾಧಿಪತಿಯು ತುಂಬಾ ಆಶ್ಚರ್ಯಪಟ್ಟನು. 15 ಆದರೆ ಆ ಹಬ್ಬದಲ್ಲಿ ಜನರು ಅಪೇಕ್ಷಿಸುವ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವುದು ದೇಶಾಧಿಪತಿಯ ಪದ್ಧತಿಯಾಗಿತ್ತು. 16 ಆ ಕಾಲದಲ್ಲಿ ಬರಬ್ಬನೆಂಬ ಕುಖ್ಯಾತನಾದ ಒಬ್ಬ ಸೆರೆಯವನಿದ್ದನು. 17 ಹೀಗಿರಲಾಗಿ ಅವರು ಸೇರಿಬಂದಿದ್ದ ಸಮಯದಲ್ಲಿ ಪಿಲಾತನು, “ನಿಮಗೆ ಯಾರನ್ನು ಬಿಟ್ಟುಕೊಡಬೇಕೆನ್ನುತ್ತೀರಿ? ಬರಬ್ಬನನ್ನೋ ಅಥವಾ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನೋ?” ಎಂದು ಅವರನ್ನು ಕೇಳಿದನು. 18 ಏಕೆಂದರೆ ಅವರು ಹೊಟ್ಟೆಕಿಚ್ಚಿನಿಂದಲೇ ಈ ರೀತಿಯಾಗಿ ಮಾಡಿದ್ದಾರೆಂದು ಅವನಿಗೆ ತಿಳಿದಿತ್ತು. 19 ಇದಲ್ಲದೆ ಅವನು ನ್ಯಾಯಾಸನದಲ್ಲಿ ಕುಳಿತಿರುವಾಗ ಅವನ ಹೆಂಡತಿಯು, “ನೀನು ಆ ನೀತಿವಂತನ ಗೊಡವೆಗೆ ಹೋಗಬೇಡ; ಅವನ ದೆಸೆಯಿಂದ ಈ ಹೊತ್ತು ಕನಸಿನಲ್ಲಿ ಬಹಳ ತೊಂದರೆ ಪಟ್ಟೆನು” ಎಂದು ಅವನ ಬಳಿಗೆ ಸಂದೇಶ ಹೇಳಿಕಳುಹಿಸಿದಳು. 20 ಆದರೆ ಮುಖ್ಯಯಾಜಕರೂ ಹಿರಿಯರೂ ಬರಬ್ಬನನ್ನು ಬಿಟ್ಟುಕೊಡಬೇಕೆಂದು ಬೇಡಿಕೊಳ್ಳುವಂತೆಯೂ ಯೇಸುವನ್ನು ಸಾಯಿಸಬೇಕೆಂದು ಕೇಳುವ ಹಾಗೆಯೂ ಜನರನ್ನು ಒಡಂಬಡಿಸಿದ್ದರು. 21 ಅದಕ್ಕೆ ದೇಶಾಧಿಪತಿಯು ಅವರನ್ನು, “ಈ ಇಬ್ಬರಲ್ಲಿ ಯಾರನ್ನು ನಿಮಗೆ ಬಿಟ್ಟುಕೊಡಬೇಕನ್ನುತ್ತೀರಿ?” ಎಂದು ಕೇಳಲು ಅವರು “ಬರಬ್ಬನನ್ನು” ಅಂದರು. 22 ಪಿಲಾತನು ಅವರನ್ನು, “ಹಾಗಾದರೆ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಎಂದು ಕೇಳಲು ಎಲ್ಲರೂ, “ಅವನನ್ನು ಶಿಲುಬೆಗೆ ಹಾಕಿಸು” ಅಂದರು. 23 ಅದಕ್ಕವನು “ಏಕೆ? ಈತನು ಮಾಡಿದ ಅಪರಾಧವೇನು?” ಅಂದನು. ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಬಹಳವಾಗಿ ಆರ್ಭಟಿಸಿದರು. 24 ಆಗ ಪಿಲಾತನು ತನ್ನ ಯತ್ನ ನಡೆಯುವುದಿಲ್ಲ [e]ಗದ್ದಲ ಮಾತ್ರ ಹೆಚ್ಚಾಗುತ್ತದೆ ಎಂದು ತಿಳಿದು [f]ನೀರನ್ನು ತೆಗೆದುಕೊಂಡು ಜನರ ಮುಂದೆ ಕೈ ತೊಳೆದುಕೊಂಡು, “ಈ ನೀತಿವಂತನನ್ನು [g]ಕೊಲ್ಲಿಸುವುದರಲ್ಲಿ ನಾನು ನಿರಪರಾಧಿ, ನೀವೇ ನೋಡಿಕೊಳ್ಳಿರಿ” ಎನ್ನಲು 25 ಜನರೆಲ್ಲಾ, “[h]ಆತನ ರಕ್ತವು ನಮ್ಮ ಮತ್ತು ನಮ್ಮ ಮಕ್ಕಳ ಮೇಲೆ ಬರಲಿ” ಅಂದರು. 26 ಆಗ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.
27 ಆ ಮೇಲೆ ದೇಶಾಧಿಪತಿಯ ಸಿಪಾಯಿಗಳು ಯೇಸುವನ್ನು ಅರಮನೆಯೊಳಗೆ ಕರೆದುಕೊಂಡು ಹೋಗಿ ಪಟಾಲವನ್ನೆಲ್ಲಾ ಆತನ ಸುತ್ತಲೂ ಸೇರಿಸಿಕೊಂಡು, 28 ಆತನ ಬಟ್ಟೆಗಳನ್ನು ತೆಗೆದುಹಾಕಿ ಕೆಂಪು ನಿಲುವಂಗಿಯನ್ನು ಹೊದಿಸಿ, 29 ಮುಳ್ಳುಬಳ್ಳಿಯಿಂದ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು ಬಲಗೈಯಲ್ಲಿ ಬೆತ್ತವನ್ನು ಕೊಟ್ಟು, ಆತನ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಆತನನ್ನು ಪರಿಹಾಸ್ಯಮಾಡಿ 30 ಮತ್ತು ಆತನ ಮೇಲೆ ಉಗುಳಿ ಆ ಬೆತ್ತವನ್ನು ತೆಗೆದುಕೊಂಡು ಆತನ ತಲೆಯ ಮೇಲೆ ಹೊಡೆದರು. 31 ಹೀಗೆ ಆತನನ್ನು ಪರಿಹಾಸ್ಯಮಾಡಿದ ಮೇಲೆ ಆ ನಿಲುವಂಗಿಯನ್ನು ತೆಗೆದು ಆತನ ಬಟ್ಟೆಗಳನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವುದಕ್ಕೆ ತೆಗೆದುಕೊಂಡು ಹೋದರು.
57 ಸಂಜೆಯಾದಾಗ ಅರಿಮಥಾಯ ಊರಿನ ಯೋಸೇಫನೆಂಬ ಒಬ್ಬ ಧನವಂತನು ಅಲ್ಲಿಗೆ ಬಂದನು. ಇವನು ಸಹ ಯೇಸುವಿನ ಶಿಷ್ಯನಾಗಿದ್ದನು. 58 ಇವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಳ್ಳಲು ಪಿಲಾತನು ಅದನ್ನು ಆತನಿಗೆ ಕೊಡಬೇಕೆಂದು ಅಪ್ಪಣೆಮಾಡಿದನು. 59 ಯೋಸೇಫನು ದೇಹವನ್ನು ತೆಗೆದುಕೊಂಡು ಅದನ್ನು ಶುದ್ಧವಾದ ನಾರುಮಡಿಯಲ್ಲಿ ಸುತ್ತಿ 60 ಬಂಡೆಯಲ್ಲಿ ತೋಡಿದ್ದ ಹೊಸ ಸಮಾಧಿಯಲ್ಲಿ ಇಟ್ಟು ಸಮಾಧಿಯ ಬಾಗಿಲಿಗೆ ದೊಡ್ಡ ಕಲ್ಲನ್ನು ಉರುಳಿಸಿ ಹೊರಟುಹೋದನು. 61 ಮಗ್ದಲದ ಮರಿಯಳೂ ಮತ್ತು ಆ ಇನ್ನೊಬ್ಬ ಮರಿಯಳೂ ಅಲ್ಲಿ ಸಮಾಧಿಗೆ ಎದುರಾಗಿ ಕುಳಿತಿದ್ದರು.
62 ಮರುದಿನ ಅಂದರೆ ಸಿದ್ಧತೆಯ ದಿನ ಕಳೆದ ಮೇಲೆ ಮುಖ್ಯಯಾಜಕರೂ ಫರಿಸಾಯರೂ ಪಿಲಾತನ ಬಳಿಗೆ ಸೇರಿಬಂದು, 63 “ಯಜಮಾನನೇ, ಆ ಮೋಸಗಾರನು ಬದುಕಿದ್ದಾಗ ‘ತಾನು ಮೂರು ದಿನದ ಮೇಲೆ ಜೀವದಿಂದ ಏಳುತ್ತೇನೆ’ ಎಂದು ಹೇಳಿದ್ದು ನಮ್ಮ ನೆನಪಿಗೆ ಬಂದಿತು; 64 ಆದಕಾರಣ ಮೂರನೆಯ ದಿನದ ತನಕ ಸಮಾಧಿಯನ್ನು ಭದ್ರಮಾಡಿ ಕಾಯುವುದಕ್ಕೆ ಅಪ್ಪಣೆಕೊಡಬೇಕು; ಇಲ್ಲದಿದ್ದರೆ ಅವನ ಶಿಷ್ಯರು ಬಂದು ಅವನನ್ನು ಕದ್ದುಕೊಂಡು ಹೋಗಿ ಸತ್ತವನು ಬದುಕಿ ಬಂದಿದ್ದಾನೆ” ಎಂದು ಹೇಳಾರು; ಆಗ ಮೊದಲನೆಯ ವಂಚನೆಗಿಂತ ಕಡೆಯ ವಂಚನೆಯು ಕೆಡುಕಾದೀತು ಅಂದರು. 65 ಪಿಲಾತನು ಅವರಿಗೆ, “ಕಾವಲುಗಾರರನ್ನು ಕರೆದುಕೊಂಡು ಹೋಗಿ ನಿಮಗೆ ತಿಳಿದ ಹಾಗೆ ಭದ್ರಮಾಡಿ ಕಾಯಿರಿ” ಎಂದು ಹೇಳಲು 66 ಅವರು ಹೊರಟು ಕಾವಲುಗಾರರನ್ನು ಇರಿಸಿ ಆ ಕಲ್ಲಿಗೆ ಮುದ್ರೆಹಾಕಿ ಸಮಾಧಿಯನ್ನು ಸುಭದ್ರಮಾಡಿದರು.
<- ಮತ್ತಾಯನು 26ಮತ್ತಾಯನು 28 ->- a ಮತ್ತಾ 26:14-15
- b ಅ. ಕೃ. 1:18,19
- c ರಕ್ತದ ಹೊಲವೆಂದು
- d ಜೆಕ. 11:12,13
- e ಮತ್ತಾ 26:5
- f ಧರ್ಮೋ 21:6-8
- g ರಕ್ತದಲ್ಲಿ
- h ಆತನನ್ನು ಕೊಲ್ಲಿಸಿದ್ದ ಅಪರಾಧವು
- i ಕೀರ್ತ 69:21
- j ಕೀರ್ತ 22:8
- k 6 ತಾಸಿನಿಂದ 9 ತಾಸಿನ ತನಕ
- l ಕೀರ್ತ 22:1
- m ಕೆಲವು ಪತ್ರಿಕೆಯಲ್ಲಿ, ಮತ್ತೊಬ್ಬನು ಈಟಿಯನ್ನು ತೆಗೆದುಕೊಂಡು ಆತನ ಪಕ್ಕೆಯನ್ನು ತಿವಿದನು; ತಿವಿಯಲೂ ನೀರು ರಕ್ತವು ಹರಿಯಿತು ಎಂದು ಬರೆದಿದೆ; ಯೋಹಾ 19:34
- n ಸತ್ತುಹೋಗಿದ್ದ
- o ದಾನಿ. 3:25