6 “ ‘ಅಶುದ್ಧವಾದುದನ್ನು ಮುಟ್ಟುವ ಯಾಜಕನು ಆ ದಿನದ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಆದುದರಿಂದ ಸ್ನಾನಮಾಡುವ ತನಕ ಅವನು ನೈವೇದ್ಯದ್ರವ್ಯವನ್ನು ತಿನ್ನಬಾರದು. 7 ಹೊತ್ತುಮುಣುಗಿದ ನಂತರ ಅವನು ಶುದ್ಧನಾಗಿ ನೈವೇದ್ಯದ್ರವ್ಯವನ್ನು ಊಟಮಾಡಬಹುದು. ಅದು ಅವನ ಆಹಾರವೇ. 8 ಅವನು ತಾನಾಗಿ ಸತ್ತುಬಿದ್ದದ್ದನ್ನಾಗಲಿ, ಕಾಡುಮೃಗದಿಂದ ಕೊಲ್ಲಲ್ಪಟ್ಟ ಪ್ರಾಣಿಗಳನ್ನು ತಿಂದು ತನ್ನನ್ನು ಅಪವಿತ್ರಮಾಡಿಕೊಳ್ಳಬಾರದು; ನಾನು ಯೆಹೋವನು. 9 ಯಾಜಕರು ಈ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯಬೇಕು. ಇವುಗಳನ್ನು ಮೀರಿ ನನ್ನ ನೈವೇದ್ಯವನ್ನು ಅಪವಿತ್ರಪಡಿಸಿದರೆ ಆ ದೋಷದ ಫಲವನ್ನು ಅನುಭವಿಸಿ ಸತ್ತಾರು. ಅವರನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು ನಾನು.
10 “ ‘ಯಾಜಕನಲ್ಲದೆ ಇತರರು ನೈವೇದ್ಯದ ಪದಾರ್ಥವನ್ನು ಊಟಮಾಡಬಾರದು. ಯಾಜಕನ ಬಳಿಯಲ್ಲಿರುವ ಅತಿಥಿಯಾಗಲಿ ಅಥವಾ ಕೂಲಿಯಾಳಾಗಲಿ ಅದನ್ನು ಊಟಮಾಡಬಾರದು. 11 ಆದರೆ ಯಾಜಕನು ಕ್ರಯಕ್ಕೆ ತೆಗೆದುಕೊಂಡ ಗುಲಾಮರೂ ಮತ್ತು ಅವನ ಮನೆಯಲ್ಲಿ ಹುಟ್ಟಿದ ಗುಲಾಮರು ಅದನ್ನು ಊಟಮಾಡಬಹುದು. 12 ಯಾಜಕನ ಮಗಳು ಯಾಜಕನಲ್ಲದ ಇತರರಿಗೆ ಮದುವೆಯಾಗಿದ್ದರೆ ಅವಳು ನೈವೇದ್ಯದ ಪದಾರ್ಥಗಳನ್ನು ಊಟಮಾಡಬಾರದು. 13 ಯಾಜಕನ ಮಗಳು ವಿಧವೆಯಾಗಲಿ ಅಥವಾ ಗಂಡನಿಂದ ಬಿಡಲ್ಪಟ್ಟವಳಾಗಲಿ, ಮಕ್ಕಳಿಲ್ಲದೆ ಇದ್ದರೆ ಬಾಲ್ಯದಲ್ಲಿ ತಂದೆಯ ಬಳಿಯಲ್ಲಿ ಇದ್ದಂತೆಯೇ ಕನ್ಯೆಯಾಗಿಯೇ ತಂದೆಯ ಮನೆಯನ್ನು ಸೇರಿ ತಂದೆಯ ಆಹಾರದಲ್ಲಿ ಭಾಗಿಯಾಗಬಹುದು. ಯಾಜಕರಲ್ಲದ ಇತರರು ಅದನ್ನು ಊಟಮಾಡಲೇಬಾರದು. 14 ಯಾವನಾದರೂ ತಿಳಿಯದೆ ನೈವೇದ್ಯವಾದದ್ದನ್ನು ಊಟಮಾಡಿದರೆ ಅದನ್ನು ಮತ್ತು ಅದರ ಐದನೆಯ ಭಾಗವನ್ನು ಯಾಜಕನಿಗೆ ತಂದುಕೊಡಬೇಕು. 15 ಇಸ್ರಾಯೇಲರು ಯೆಹೋವನಿಗೆ ಮೀಸಲೆಂದು ಇಟ್ಟ ನೈವೇದ್ಯದ ಪದಾರ್ಥಗಳನ್ನು ಯಾಜಕರು ಸಾಧಾರಣವೆಂದು ಎಣಿಸಬಾರದು. 16 ಹಾಗೆ ಎಣಿಸಿದರೆ ತಾವು ಆ ನೈವೇದ್ಯಪದಾರ್ಥಗಳನ್ನು ಊಟಮಾಡುವುದರಿಂದ ಪಾಪಕ್ಕೆ ಒಳಗಾಗಿ ಶಿಕ್ಷೆಹೊಂದುವರು. ನನ್ನ ಸೇವೆಗೆ *ಅಥವಾ ಆ ನೈವೇದ್ಯಪದಾರ್ಥಗಳನ್ನು.ಅವರನ್ನು ಪ್ರತಿಷ್ಠಿಸಿಕೊಂಡ ಯೆಹೋವನು ನಾನು’ ” ಎಂದು ಹೇಳಿದನು.
26 ಯೆಹೋವನು ಮೋಶೆಯೊಂದಿಗೆ ಮಾತನಾಡಿ, 27 “ಕರುವಾಗಲಿ, ಕುರಿಮರಿಯಾಗಲಿ ಅಥವಾ ಆಡುಮರಿಯಾಗಲಿ ಹುಟ್ಟಿದಾಗ ಅದು ಏಳು ದಿನಗಳ ವರೆಗೆ ತಾಯಿಯ ಬಳಿಯಲ್ಲಿ ಇರಬೇಕು. ಎಂಟನೆಯ ದಿನದಿಂದ ಅದನ್ನು ಯೆಹೋವನಿಗೆ ಹೋಮವಾಗಿ ಸಮರ್ಪಿಸಿದರೆ ಅದು ಅಂಗೀಕಾರವಾಗುವುದು. 28 ಹೆತ್ತ ಆಕಳನ್ನು, ಅದರ ಕರುವನ್ನು ಇಲ್ಲವೆ ಈದ ಆಡು, ಕುರಿಗಳನ್ನು, ಅವುಗಳ ಮರಿಗಳನ್ನು ಒಂದೇ ದಿನದಲ್ಲಿ ವಧಿಸಬಾರದು.
29 “ನೀವು ಕೃತಜ್ಞತೆಯನ್ನು ತೋರಿಸುವುದಕ್ಕಾಗಿ ಯೆಹೋವನಿಗೆ ಮಾಡುವ ಯಜ್ಞವನ್ನು ಮೆಚ್ಚಿಗೆಯಾದ ರೀತಿಯಲ್ಲೇ ಸಮರ್ಪಿಸಬೇಕು. 30 ಅದೇ ದಿನದಲ್ಲಿ ಅದನ್ನು ಊಟಮಾಡಬೇಕು; ಮರುದಿನದ ವರೆಗೆ ಸ್ವಲ್ಪವನ್ನಾದರೂ ಉಳಿಸಬಾರದು. ನಾನು ಯೆಹೋವನು.
31 “ಈ ನನ್ನ ಆಜ್ಞೆಗಳನ್ನು ನೀವು ಅನುಸರಿಸಿ ನಡೆಯಬೇಕು; ನಾನು ಯೆಹೋವನು. 32 ನನ್ನ ಪರಿಶುದ್ಧ ನಾಮದ ಘನತೆಗೆ ಕುಂದು ತರಬಾರದು; ಇಸ್ರಾಯೇಲರಲ್ಲಿ ನಾನು ಪರಿಶುದ್ಧನೆಂದು ಎಣಿಸಲ್ಪಡಬೇಕು; ನಾನು ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು. 33 ನಿಮ್ಮ ದೇವರಾಗುವುದಕ್ಕೆ ನಿಮ್ಮನ್ನು ಐಗುಪ್ತದೇಶದಿಂದ ಬರಮಾಡಿದೆನಲ್ಲಾ; ನಾನು ಯೆಹೋವನು” ಎಂದು ಹೇಳಿದನು.
<- ಯಾಜಕಕಾಂಡ 21ಯಾಜಕಕಾಂಡ 23 ->