Link to home pageLanguagesLink to all Bible versions on this site

ಯೂದನು
ಗ್ರಂಥಕರ್ತೃತ್ವ
ಗ್ರಂಥಕರ್ತನು ತನ್ನನ್ನು “ಯೇಸು ಕ್ರಿಸ್ತನ ಸೇವಕನೂ, ಯಾಕೋಬನ ತಮ್ಮನೂ ಆಗಿರುವ ಯೂದನು” ಎಂದು ಗುರುತಿಸಿಕೊಂಡಿದ್ದಾನೆ (1:1). ಈ ಯೂದನು ಬಹುಶಃ ಯೋಹಾ 14:22 ರಲ್ಲಿರುವ ಆತನ ಅಪೊಸ್ತಲರಲ್ಲಿ ಒಬ್ಬನು, “ಯೂದನು” ಎಂದು ಕರೆಯಲ್ಪಟ್ಟಂಥವನು ಆಗಿದ್ದಾನೆ. ಸಾಮಾನ್ಯವಾಗಿ ಅವನನ್ನು ಯೇಸುವಿನ ತಮ್ಮನು ಎಂದು ಭಾವಿಸಲಾಗಿದೆ. ಅವನು ಮೊದಲು ಅವಿಶ್ವಾಸಿಯಾಗಿದ್ದನು (ಯೋಹಾ 7:5), ಆದರೆ ಅವನು ಯೇಸುವಿನ ಸ್ವರ್ಗಾರೋಹಣದ ನಂತರ ತನ್ನ ತಾಯಿಯೊಂದಿಗೆ ಮತ್ತು ಇತರ ಶಿಷ್ಯರೊಂದಿಗೆ ಮೇಲಂತಸ್ತಿನ ಕೋಣೆಯಲ್ಲಿ ಕಾಣಿಸಿಕೊಂಡನು (ಅ.ಕೃ. 1:14).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 60-80 ರ ನಡುವೆ ಬರೆಯಲ್ಪಟ್ಟಿದೆ.
ಅಲೆಕ್ಸಾಂಡ್ರಿಯದಿಂದ ರೋಮಾಪುರದವರೆಗಿನ ವ್ಯಾಪ್ತಿಯಲ್ಲಿರುವ ಒಂದು ಸ್ಥಳದಲ್ಲಿ ಯೂದನು ಇದನ್ನು ಬರೆದಿದ್ದಾನೆ ಎಂದು ಊಹಿಸಲಾಗಿದೆ.
ಸ್ವೀಕೃತದಾರರು
“ಕರೆಯಲ್ಪಟ್ಟವರಿಗೆ, ತಂದೆಯಾದ ದೇವರಲ್ಲಿ ಪ್ರಿಯರಾದವರಿಗೆ, ಯೇಸು ಕ್ರಿಸ್ತನಿಗಾಗಿ ಕಾಪಾಡಲ್ಪಟ್ಟವರಿಗೆ” ಎಂಬ ಸಾಮಾನ್ಯ ನುಡಿಗಟ್ಟು ಎಲ್ಲಾ ಕ್ರೈಸ್ತರನ್ನು ಸೂಚಿಸುತ್ತದೆ ಎಂದು ತೋರುತ್ತದೆ; ಆದರೂ, ಸುಳ್ಳು ಬೋಧಕರಿಗಿರುವ ಅವನ ಸಂದೇಶವನ್ನು ಪರೀಕ್ಷಿಸುವಾಗ ಅವನು ಒಂದು ನಿರ್ದಿಷ್ಟ ಗುಂಪಿಗೆ ಅಲ್ಲ ಆದರೆ ಎಲ್ಲಾ ಸುಳ್ಳು ಬೋಧಕರಿಗೆ ಸಂಬೋಧಿಸಿ ಹೇಳುತ್ತಿದ್ದಾನೆ.
ಉದ್ದೇಶ
ನಂಬಿಕೆಯಲ್ಲಿ ದೃಢವಾಗಿರಲು ಮತ್ತು ಪಾಷಂಡಮತವನ್ನು ವಿರೋಧಿಸಲು ಸ್ಥಿರ ಜಾಗರೂಕತೆಯ ಅಗತ್ಯತೆಯಿದೆ ಎಂದು ಸಭೆಯನ್ನು ನೆನಪಿಸುವುದಕ್ಕಾಗಿ ಯೂದನು ಈ ಪತ್ರಿಕೆಯನ್ನು ಬರೆದಿದ್ದಾನೆ. ಎಲ್ಲೆಡೆಯಿರುವ ಕ್ರೈಸ್ತರನ್ನು ಕಾರ್ಯಗತರಾಗುವಂತೆ ಪ್ರೇರೇಪಿಸಲು ಬರೆದಿದ್ದಾನೆ. ಅವರು ಸುಳ್ಳು ಬೋಧನೆಯ ಅಪಾಯಗಳನ್ನು ಗುರುತಿಸಬೇಕೆಂದು, ತಮ್ಮನ್ನು ಮತ್ತು ಇತರ ಭಕ್ತರನ್ನು ರಕ್ಷಿಸಿಕೊಳ್ಳಬೇಕೆಂದು ಮತ್ತು ಈಗಾಗಲೇ ವಂಚಿತರಾದವರನ್ನು ಪುನಃ ಗೆದ್ದುಕೊಳ್ಳಬೇಕೆಂದು ಅವನು ಬಯಸಿದ್ದನು. ದೇವರ ಶಿಕ್ಷೆಗೆ ಭಯಪಡದೆ ಕ್ರೈಸ್ತರು ತಮಗೆ ಇಷ್ಟವಾದ್ದದನ್ನು ಮಾಡಬಹುದು ಎಂದು ಹೇಳುತ್ತಿದ್ದ ದುಷ್ಟ ಬೋಧಕರ ವಿರುದ್ಧವಾಗಿ ಯೂದನು ಬರೆಯುತ್ತಿದ್ದಾನೆ.
ಮುಖ್ಯಾಂಶ
ನಂಬಿಕೆಗಾಗಿ ಹೋರಾಟ
ಪರಿವಿಡಿ
1. ಪೀಠಿಕೆ — 1:1-2
2. ಸುಳ್ಳು ಬೋಧಕರ ಲಕ್ಷಣ ಮತ್ತು ಗತಿ — 1:3-16
3. ಕ್ರಿಸ್ತನಲ್ಲಿರುವ ವಿಶ್ವಾಸಿಗಳಿಗೆ ಪ್ರೋತ್ಸಾಹ — 1:17-25

1
ಪೀಠಿಕೆ
1 ಯೇಸು ಕ್ರಿಸ್ತನ ಸೇವಕನೂ, ಯಾಕೋಬನ ತಮ್ಮನೂ ಆಗಿರುವ ಯೂದನು ಕರೆಯಲ್ಪಟ್ಟವರಿಗೆ, ತಂದೆಯಾದ *1 ಥೆಸ. 1:4; 2 ಥೆಸ. 2:13:ದೇವರಲ್ಲಿ ಪ್ರಿಯರಾದವರಿಗೆ, ಯೋಹಾ 17:11, 15; 1 ಥೆಸ. 5:23:ಯೇಸು ಕ್ರಿಸ್ತನಿಗಾಗಿ ಕಾಪಾಡಲ್ಪಟ್ಟವರಿಗೆ ಬರೆಯುವುದೇನೆಂದರೆ, 2 ನಿಮಗೆ 2 ಯೋಹಾ 3:ಕರುಣೆಯೂ, ಶಾಂತಿಯೂ, ಪ್ರೀತಿಯೂ ಹೆಚ್ಚಾಗಿ ದೊರೆಯಲಿ.
ದುರ್ಬೋಧಕರು
3 ಪ್ರಿಯರೇ, §ತೀತ. 1:4:ನಮಗೆ *ಅಥವಾ, ಹಂಚಿಕೊಳ್ಳುವ. ಹುದುವಾಗಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಾಸಕ್ತಿಯಿಂದ ಪ್ರಯತ್ನ ಮಾಡುತ್ತಿದ್ದಾಗ, ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ, ನೀವು 1 ತಿಮೊ. 6:12; 2 ತಿಮೊ. 4:7; ಲೂಕ 13:24; 1 ಕೊರಿ 9:25; ಫಿಲಿ. 1:27:ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು. 4 ಏಕೆಂದರೆ ಭಕ್ತಿಹೀನರೂ, ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ಕಾಮಾಭಿಲಾಷೆಯ ಕೃತ್ಯಗಳನ್ನು ನಡಿಸುವವರೂ, ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು ತೀತ. 1:16; 2 ಪೇತ್ರ. 2:1; 1 ಯೋಹಾ 2:22:ಅಲ್ಲಗಳೆಯುವ ಕೆಲವು ಜನರು ರಹಸ್ಯವಾಗಿ ಸಭೆಯ ಒಳಗೆ ಹೊಕ್ಕಿದ್ದಾರೆ. §1 ಪೇತ್ರ. 2:8:ಇವರು ದಂಡನೆಗಾಗಿ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ ಎಂದು ಬರೆದದೆ.

5 ನೀವು ಸಮಸ್ತವನ್ನು ಮೊದಲೇ ತಿಳಿದವರಾಗಿದ್ದರೂ, ನಾನು ಮುಂದಣ ಕೆಲವು ಸಂಗತಿಗಳನ್ನು *2 ಪೇತ್ರ. 1:12:ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅವು ಯಾವುದೆಂದರೆ, ಕರ್ತನು ತನ್ನ ಪ್ರಜೆಗಳನ್ನು ಐಗುಪ್ತ ದೇಶದೊಳಗಿಂದ ರಕ್ಷಿಸಿದರೂ, ತರುವಾಯ ಅರಣ್ಯ 14:29, 37; 26:64, 65; ಕೀರ್ತ 106:26; ಇಬ್ರಿ. 3:17-19:ಅವರೊಳಗೆ ನಂಬದೇ ಹೋದವರನ್ನು ನಾಶಮಾಡಿದನು. 6 ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡಿಕೊಳ್ಳದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ 2 ಪೇತ್ರ. 2:4. ಪ್ರಕ 20:2:ದೇವದೂತರಿಗೆ ದೇವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದಲ್ಲಿ ಆಗುವ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿರಿಸಿದ್ದಾನೆ. 7 §ಆದಿ 19:24:ಸೊದೋಮ್ ಗೊಮೋರ ಪಟ್ಟಣಗಳವರೂ, *ಆದಿ 10:19; 14:2, 8; ಧರ್ಮೋ 29:23; ಹೋಶೇ. 11:8:ಅವುಗಳ ಸುತ್ತಮುತ್ತಲಿನ ಪಟ್ಟಣಗಳವರೂ ಆ ದೂತರಂತೆ ನಡೆದುಕೊಂಡು ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು, 2 ಪೇತ್ರ. 2:10. ಸಲಿಂಗಕಾಮಿಗಳಾಗಿದ್ದರು. ಅಸ್ವಾಭಾವಿಕವಾದ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ, ದುರ್ಮಾರ್ಗಿಗಳಿಗೆ ಆಗುವ ದುರ್ಗತಿಗೆ ಉದಾಹರಣೆಯಾಗಿ ಇಡಲ್ಪಟ್ಟಿದ್ದಾರೆ. 8 ಹೀಗಿದ್ದರೂ ಈ ಜನರು ಅದೇ ರೀತಿಯಾಗಿ ಸ್ವಪ್ನಾವಸ್ಥೆಯಲ್ಲಿರುವವರಂತೆ ತಮ್ಮ ಶರೀರವನ್ನು ಮಲಿನಮಾಡಿಕೊಳ್ಳುತ್ತಾರೆ. ಪ್ರಭುತ್ವವನ್ನು ಅಸಡ್ಡೆಮಾಡುತ್ತಾರೆ. ಮಹಾ ಪದವಿಯವರನ್ನು ದೂಷಿಸುತ್ತಾರೆ. 9 ಆದರೂ 1 ಥೆಸ. 4:16:ಪ್ರಧಾನ ದೇವದೂತನಾದ §ದಾನಿ. 10:13; 12:1; ಪ್ರಕ 12:7:ಮೀಕಾಯೇಲನು *ಧರ್ಮೋ 34:6:ಮೋಶೆಯ ದೇಹದ ವಿಷಯದಲ್ಲಿ ಸೈತಾನನೊಂದಿಗೆ ವಾಗ್ವಾದ ಮಾಡಿದಾಗ, 2 ಪೇತ್ರ. 2:11:ಅವನು ಸೈತಾನನಿಗೆ ವಿರೋಧವಾಗಿ ಒಂದೂ ನಿಂದೆಯ ಮಾತನಾಡದೆ, ಜೆಕ. 3:2:“ಕರ್ತನು ನಿನ್ನನ್ನು ಗದರಿಸಲಿ” ಎಂದನು. 10 ಆದರೆ ಈ ಜನರು §2 ಪೇತ್ರ. 2:12:ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ದೂಷಿಸುತ್ತಾರೆ ಮತ್ತು ತಾವು ವಿವೇಕಶೂನ್ಯ ಪಶುಗಳಂತೆ ಸ್ವಾಭಾವಿಕವಾಗಿ ಏನೇನನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ. 11 ಅವರ ಗತಿಯನ್ನು ಏನೆಂದು ಹೇಳಲಿ? ಇವರು *ಆದಿ 4:5-8:ಕಾಯಿನನ ಮಾರ್ಗವನ್ನು ಹಿಡಿದವರೂ, ದ್ರವ್ಯಸಂಪಾದನೆಗೋಸ್ಕರ ಅರಣ್ಯ 31:15, 16; 2 ಪೇತ್ರ. 2:15:ಬಿಳಾಮನ ಭ್ರಾಂತಿಯಲ್ಲಿ ಪೂರ್ಣವಾಗಿ ಮುಳುಗಿದವರೂ, ಅರಣ್ಯ 16:1-35:ಕೋರಹನಂತೆ ಎದುರು ಮಾತನಾಡಿ ನಾಶವಾಗಿ ಹೋಗುವವರು ಆಗಿದ್ದಾರೆ. 12 ಇವರು ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು, §ಅಥವಾ, ಕಳಂಕಕ್ಕೆ ಕಾರಣರಾಗಿದ್ದು. ನಿಮ್ಮ *2 ಪೇತ್ರ. 2:13:ಸ್ನೇಹಭೋಜನಗಳಲ್ಲಿ ಸೇರಿ ತಿಂದು ಕುಡಿಯುತ್ತಾರೆ. ಯೆಹೆ. 34:2, 8, 10:ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ಪೋಷಿಸಿಕೊಳ್ಳುತ್ತಾರೆ. ಇವರು ಎಫೆ 4:14; ಇಬ್ರಿ. 13:9:ಗಾಳಿಯಿಂದ ಬಡಿಸಿಕೊಂಡು ಹೋಗುವ §2 ಪೇತ್ರ. 2:17:ನೀರಿಲ್ಲದ ಮೋಡಗಳೂ, ಫಲಗಳನ್ನು ಬಿಡದ, *ಎರಡು ಸಾರಿ ಸತ್ತ. ಸಂಪೂರ್ಣವಾಗಿ ಸತ್ತ, ಮತ್ತಾ 15:13:ಬೇರು ಸಹಿತ ಕಿತ್ತು ಬಿದ್ದ ಶರತ್ಕಾಲದ ಮರಗಳು. 13 ಫಿಲಿ. 3:19:ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ §ಯೆಶಾ 57:20:ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ *2 ಪೇತ್ರ. 2:17:ಕಗ್ಗತ್ತಲೆಯು ಸದಾಕಾಲಕ್ಕೆ ಇಡಲ್ಪಟ್ಟಿದೆ.

14 ಇಂಥವರ ವಿಷಯದಲ್ಲೇ ಆದಿ 5:18:ಆದಾಮನಿಂದ ಏಳನೆಯ ತಲೆಮಾರಿನವನಾದ ಹನೋಕನು ಸಹ, ಧರ್ಮೋ 33:2; ದಾನಿ. 7:10; ಜೆಕ. 14:5; ಮಾರ್ಕ 8:38; 1 ಥೆಸ. 3:13; 2 ಥೆಸ. 1:7:“ಇಗೋ, ಕರ್ತನು ತನ್ನ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು, 15 §2 ಪೇತ್ರ. 2:5:ಎಲ್ಲರಿಗೂ ನ್ಯಾಯತೀರಿಸುವುದಕ್ಕೂ, ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಅವರ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನಗೆ ವಿರೋಧವಾಗಿ ಹೇಳಿದ ಎಲ್ಲಾ ಕಠಿಣವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೆ ಬಂದಿರುವನು” ಎಂಬುದಾಗಿ ಪ್ರವಾದಿಸಿದನು.

16 ಇವರು ಗೊಣಗುಟ್ಟುವವರೂ, ದೂರು ಹೇಳುವವರೂ, *2 ಪೇತ್ರ. 2:10:ತಮ್ಮ ದುರಾಶೆಗಳನ್ನನುಸರಿಸಿ ನಡೆಯುವವರೂ, 2 ಪೇತ್ರ. 2:18:ಬಂಡಾಯಿಕೊಚ್ಚಿಕೊಳ್ಳುವವರು, ಯಾಜ 19:5; ಧರ್ಮೋ 10:17:ಸ್ವಪ್ರಯೋಜನಕ್ಕಾಗಿ ಹೊಗಳಿಕೆಯ ಮಾತುಗಳನ್ನಾಡುವವರು ಆಗಿದ್ದಾರೆ.

ಎಚ್ಚರಿಕೆಗಳೂ ಪ್ರಬೋಧನೆಗಳೂ
17 ಪ್ರಿಯರೇ, §2 ಪೇತ್ರ. 3:2:ನೀವಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ. 18 *2 ಪೇತ್ರ. 3:3:“ಭಕ್ತಿಗೆ ವಿರುದ್ಧವಾದ ತಮ್ಮ ಆಸೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರೆಂದು” ಅವರು ನಿಮಗೆ ಹೇಳಿದರು. 19 ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ, 1 ಕೊರಿ 2:14:ಪ್ರಾಕೃತ ಮನುಷ್ಯರೂ, ರೋಮಾ. 8:9; ಫಿಲಿ. 3:3:ದೇವರಾತ್ಮ ಇಲ್ಲದವರೂ ಆಗಿದ್ದಾರೆ. 20 ಪ್ರಿಯರೇ, ನೀವಾದರೋ ನಿಮಗಿರುವ ಅತಿ ಪರಿಶುದ್ಧವಾದ §ಕೊಲೊ 2:7:ಕ್ರಿಸ್ತ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಹೊಂದುತ್ತಾ, *ಎಫೆ 6:18; ರೋಮಾ. 8:26:ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ ಮಾಡಿರಿ. 21 ತೀತ. 2:13; 2 ಪೇತ್ರ. 3:12:ನಿತ್ಯ ಜೀವಕ್ಕಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ, 2 ಕೊರಿ 13:14; ಅ. ಕೃ. 13:43ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. 22 ಸಂಶಯಪಡುವವರಿಗೆ ಕರುಣೆಯನ್ನು ತೋರಿಸಿರಿ, 23 §ಆಮೋ. 4:1; ಜೆಕ. 3:2:ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ, ಕೆಲವರನ್ನು *2 ಕೊರಿ 5:11:ಭಯಪಡುತ್ತಾ ಕರುಣಿಸಿರಿ. ಪ್ರಕ 3:4; ಜೆಕ. 3:4:ಶಾರೀರಿಕ ನಡತೆಯಿಂದ ಹೊಲಸಾದ ಅವರ ಉಡುಪನ್ನೂ ಸಹ ಹಗೆಮಾಡಿರಿ.
ಅಂತ್ಯಾಶೀರ್ವಾದ
24 ಮುಗ್ಗರಿಸದಂತೆ ಯೋಹಾ 17:12:ನಿಮ್ಮನ್ನು ಕಾಪಾಡಿಕೊಳ್ಳುತ್ತಾ, §ಕೊಲೊ 1:22; 1 ಪೇತ್ರ. 4:13:ತನ್ನ ಮಹಿಮೆಯ ಸಮಕ್ಷಮದಲ್ಲಿ ನಿಮ್ಮನ್ನು *ಎಫೆ 1:4; 5:27; ಫಿಲಿ. 2, 15; ಪ್ರಕ 14:5:ನಿರ್ದೋಷಿಗಳನ್ನಾಗಿ, ಅತ್ಯಂತ ಹರ್ಷದೊಡನೆ ನಿಲ್ಲಿಸುವುದಕ್ಕೂ ರೋಮಾ. 16:25; ಎಫೆ 3:20:ಶಕ್ತನಾಗಿರುವ, 25 ನಮ್ಮ ರಕ್ಷಕನಾದ ಯೋಹಾ 5:44; 1 ತಿಮೊ. 1:17:ಒಬ್ಬನೇ ದೇವರಿಗೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಮಹಿಮೆ, §ರೋಮಾ. 11:36:ಮಹತ್ವ, ಅಧಿಪತ್ಯ ಮತ್ತು ಅಧಿಕಾರಗಳು ಎಲ್ಲಾ ಕಾಲಗಳಲ್ಲಿ ಮೊದಲು ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲ್ಲಿ. ಆಮೆನ್.