5 ನನ್ನ ಪ್ರಿಯ ಸಹೋದರರೇ, ಕೇಳಿರಿ ದೇವರು *1 ಕೊರಿ 1:27,28; ಯೋಬ. 34:19:ಈ ಲೋಕದಲ್ಲಿನ ಬಡವರನ್ನು †2 ಕೊರಿ 8:9; ಪ್ರಕ 2:9; ಲೂಕ 12:21:ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ, ‡ಯಾಕೋಬ. 1:12:ತನ್ನನ್ನು ಪ್ರೀತಿಸುವವರಿಗೆ §ಮತ್ತಾ 5:3; ಲೂಕ 6:20; 12:32:ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ? 6 ನೀವಾದರೋ *1 ಕೊರಿ 11:22:ಬಡವರನ್ನು ಅವಮಾನಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ †ಅ. ಕೃ. 8:3; 16:19; 18:12:ನ್ಯಾಯಸ್ಥಾನದ ಮುಂದೆ ಎಳೆದುಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ? 7 ನೀವು ಕರೆಯಲ್ಪಟ್ಟ ಆ ‡ಯೆಶಾ 63:19; ಆಮೋ. 9:12; ಅ. ಕೃ. 15:17:ಶ್ರೇಷ್ಠವಾದ ನಾಮವನ್ನು ದೂಷಿಸುವವರು ಅವರಲ್ಲವೋ?
8 ಆದರೂ ಧರ್ಮಶಾಸ್ತ್ರಕ್ಕೆ ಸರಿಯಾಗಿ §ಯಾಜ 19:18:“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ರಾಜಾಜ್ಞೆಯನ್ನು ನೆರವೇರಿಸುವವರಾದರೆ, ನೀವು ಒಳ್ಳೆಯದನ್ನೇ ಮಾಡುವವರಾಗಿರುವಿರಿ. 9 ಒಂದು ವೇಳೆ ಅದನ್ನು ಬಿಟ್ಟು ನೀವು *ವ. 1:ಪಕ್ಷಪಾತಿಗಳಾಗಿದ್ದರೆ ಪಾಪಮಾಡುವವರಾಗಿದ್ದು ಅಪರಾಧಿಗಳೆಂದು ಧರ್ಮಶಾಸ್ತ್ರದ ಪ್ರಕಾರ ತೀರ್ಮಾನಿಸಲ್ಪಡುತ್ತೀರಿ. 10 ಏಕೆಂದರೆ ಯಾರಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಕೊಂಡು ನಡೆದು ಅದರಲ್ಲಿ ಒಂದೇ ಒಂದು ವಿಷಯದಲ್ಲಿ ತಪ್ಪಿದರೆ †ಮತ್ತಾ 5:19; ಗಲಾ. 3:10:ಅಂಥವರು ಎಲ್ಲಾ ವಿಷಯಗಳಲ್ಲಿಯೂ ಅಪರಾಧಿಯಾಗಿರುತ್ತಾರೆ. 11 ಏಕೆಂದರೆ ‡ವಿಮೋ 20:13,14:ವ್ಯಭಿಚಾರ ಮಾಡಬಾರದೆಂದು ಹೇಳಿದವನೇ ನರಹತ್ಯ ಮಾಡಬಾರದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರಮಾಡದೆ ಇದ್ದರೂ ನರಹತ್ಯ ಮಾಡಿದರೆ ಧರ್ಮಶಾಸ್ತ್ರವನ್ನು ಮೀರಿದವನಾಗಿರುತ್ತಿ. 12 ನೀವು §ಅಥವಾ, ಬಿಡುಗಡೆಯಾದವರಿಗೆ ಇರುವ. ಯಾಕೋಬ. 1:25:ಬಿಡುಗಡೆಯನ್ನುಂಟು ಮಾಡುವ ಧರ್ಮಶಾಸ್ತ್ರದ ಪ್ರಕಾರ ತೀರ್ಪುಹೊಂದುವವರಿಗೆ ತಕ್ಕಂತೆ ಮಾತನಾಡಿರಿ ಮತ್ತು ವಿಧೇಯರಾಗಿರಿ. 13 ಏಕೆಂದರೆ *ಯೋಬ. 22:6-11; ಕೀರ್ತ 18:25; ಜ್ಞಾ. 21:13; ಲೂಕ 6:38:ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ. ಕರುಣೆಯು ನ್ಯಾಯತೀರ್ಪಿನ ಮೇಲೆ ಜಯ ಹೊಂದುತ್ತದೆ.
- a 1 ಕೊರಿ 2:8,
- b ವ. 9; ಯಾಜ 19:15; ಧರ್ಮೋ 1:17; 10:17; ಜ್ಞಾ. 24:23; ರೋಮಾ. 2:11; ಎಫೆ 6:9:
- c ಜ್ಞಾ. 18:23:
- d ಯೋಹಾ 7:24:
- e 1 ಕೊರಿ 1:27,28; ಯೋಬ. 34:19:
- f 2 ಕೊರಿ 8:9; ಪ್ರಕ 2:9; ಲೂಕ 12:21:
- g ಯಾಕೋಬ. 1:12:
- h ಮತ್ತಾ 5:3; ಲೂಕ 6:20; 12:32:
- i 1 ಕೊರಿ 11:22:
- j ಅ. ಕೃ. 8:3; 16:19; 18:12:
- k ಯೆಶಾ 63:19; ಆಮೋ. 9:12; ಅ. ಕೃ. 15:17:
- l ಯಾಜ 19:18:
- m ವ. 1:
- n ಮತ್ತಾ 5:19; ಗಲಾ. 3:10:
- o ವಿಮೋ 20:13,14:
- p ಅಥವಾ, ಬಿಡುಗಡೆಯಾದವರಿಗೆ ಇರುವ. ಯಾಕೋಬ. 1:25:
- q ಯೋಬ. 22:6-11; ಕೀರ್ತ 18:25; ಜ್ಞಾ. 21:13; ಲೂಕ 6:38:
- r ಯಾಕೋಬ. 1:22:
- s ಯೋಬ. 31:19,20:
- t 1 ಯೋಹಾ 3:17,18:
- u ರೋಮಾ. 3:28; ಇಬ್ರಿ. 11:33:
- v ಮತ್ತಾ 7:16,17; ಗಲಾ. 5:6:
- w ಧರ್ಮೋ 6:4; 1 ಕೊರಿ 8:6:
- x ಮತ್ತಾ 8:29; ಲೂಕ 4:33,34; ಅ. ಕೃ. 16:17; 19:15:
- y ಆದಿ 22:9,12,16-18
- z ಇಬ್ರಿ. 11:17:
- aa 1 ಥೆಸ. 1:3:
- bb ಆದಿ 15:6; ರೋಮಾ. 4:3; ಗಲಾ. 3:6:
- cc 2 ಪೂರ್ವ 20:7; ಯೆಶಾ 41:8:
- dd ಇಬ್ರಿ. 11:31:
- ee ಯೆಹೋ. 2:1-22; 6:23: