18-19 ನೀವು [cc]ಮುಟ್ಟಬಹುದಾದ ಮತ್ತು ಬೆಂಕಿ ಹೊತ್ತಿದಂಥ ಬೆಟ್ಟಕ್ಕೂ, ಕಾರ್ಮೋಡ, ಕಗ್ಗತ್ತಲೆ, ಬಿರುಗಾಳಿ, [dd]ತುತ್ತೂರಿಯ ಶಬ್ದ, ಮಾತುಗಳ ಧ್ವನಿ ಎಂಬಿವುಗಳ ಬಳಿಗಲ್ಲ ನೀವು ಬಂದಿರುವುದು. ಆ ಧ್ವನಿಯನ್ನು ಕೇಳಿದವರು ಇನ್ನೆಂದಿಗೂ ಆ ಧ್ವನಿ [ee] ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು. 20 ಏಕೆಂದರೆ, [ff]“ಒಂದು ಮೃಗವಾದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕಲ್ಲೆಸೆದು ಕೊಲ್ಲಬೇಕೆಂಬ” ವಿಧಿಯನ್ನು ಅವರಿಂದ ತಾಳಲಾಗಲಿಲ್ಲ. 21 ಇದಲ್ಲದೆ ಆ ದೃಶ್ಯವು ಅತಿ ಭಯಾನಕವಾಗಿದ್ದದರಿಂದ ಮೋಶೆಯು, [gg]“ನಾನು ಹೆದರಿ, ನಡುಗುತ್ತಿದ್ದೇನೆ” ಎಂದು ಹೇಳಿದನು.
22 ಆದರೆ ನೀವು [hh]ಚೀಯೋನ್ ಪರ್ವತಕ್ಕೂ, ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ [ii]ಪರಲೋಕದ ಯೆರೂಸಲೇಮಿಗೂ, ಉತ್ಸವ ಸಂಘದಲ್ಲಿ ಕೂಡಿರುವ [jj]ಕೋಟ್ಯಾನುಕೋಟಿ ದೇವದೂತರ ಬಳಿಗೂ, 23 ಪರಲೋಕದಲ್ಲಿ [kk]ಹೆಸರು ಬರೆಸಿಕೊಂಡಿರುವ [ll]ಚೊಚ್ಚಲ ಮಕ್ಕಳ ಸಭೆಗೂ, [mm]ಎಲ್ಲರಿಗೆ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ, ಪರಿಪೂರ್ಣರಾಗಿರುವ ನೀತಿವಂತರ ಆತ್ಮಗಳ ಬಳಿಗೂ, 24 [nn]ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ, [oo]ಹೇಬೆಲನ ರಕ್ತಕ್ಕಿಂತ ಉತ್ತಮವಾಗಿ ಮಾತನಾಡುವ [pp]ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ. 25 ಮಾತನಾಡುತ್ತಿರುವಾತನನ್ನು ನೀವು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ [qq]ಭೂಮಿಯ ಮೇಲೆ ದೈವೋಕ್ತಿಗಳನ್ನಾಡಿದವನನ್ನು ಅಸಡ್ಡೆಮಾಡಿದವರು ದಂಡನೆಗೆ ತಪ್ಪಿಸಿಕೊಳ್ಳಲಾಗದಿದ್ದರೆ, ಪರಲೋಕದಿಂದ ಮಾತನಾಡುವಾತನನ್ನು ಬಿಟ್ಟು ದೂರವಾಗಿ ನಾವು ಹೋದರೆ ದಂಡನೆಯಿಂದ ಹೇಗೆ ತಪ್ಪಿಸಿಕೊಂಡೆವು? 26 [rr]ಆತನ ಧ್ವನಿಯು ಆಗ ಭೂಮಿಯನ್ನು ಕದಲಿಸಿತು. ಈಗಲಾದರೋ ಆತನು, [ss]“ಇನ್ನೊಂದೇ ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆ” ಎಂದು ವಾಗ್ದಾನಮಾಡಿ ಹೇಳಿದ್ದಾನೆ. 27 “ಇನ್ನೊಂದೇ ಸಾರಿ,” ಎಂಬ ಈ ಮಾತನ್ನು ಯೋಚಿಸಿದರೆ, ಕದಲಿಸಿರುವ ವಸ್ತುಗಳು ನಿರ್ಮಿತವಾದವುಗಳಾದ್ದರಿಂದ ತೆಗೆದುಹಾಕಲ್ಪಡುತ್ತವೆಂಬುದು ಸ್ಪಷ್ಟವಾಗುತ್ತದೆ. [tt]ಆಗ, ಕದಲಿಸದೇ ಇರುವ ವಸ್ತುಗಳು ಸ್ಥಿರವಾಗಿ ನಿಲ್ಲುವವು. 28 ಆದ್ದರಿಂದ [uu]ಯಾರೂ ಕದಲಿಸಲಾರದ ರಾಜ್ಯವನ್ನು ಪಡೆದುಕೊಳ್ಳುವವರಾದ ನಾವು [vv]ಕೃತಜ್ಞತೆಯುಳ್ಳವರಾಗಿ, ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಮತ್ತು ಭಯದಿಂದಲೂ ಮಾಡೋಣ. 29 ಏಕೆಂದರೆ [ww]ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.
<- ಇಬ್ರಿಯರಿಗೆ 11ಇಬ್ರಿಯರಿಗೆ 13 ->- a ಎಫೆ 4:22:
- b ಇಬ್ರಿ. 2:10:
- c 1 ಕೊರಿ 9:24:
- d ಲೂಕ 24:26; ಫಿಲಿ. 2:8; ಯೆಶಾ 53:11:
- e ಕೀರ್ತ 22:6,7; 69:19; ಯೆಶಾ 53:3:
- f ಇಬ್ರಿ. 1:3:
- g ಗಲಾ. 6:9:
- h ಮತ್ತಾ 10:24:
- i ಕೆಲವು ಪ್ರತಿಗಳಲ್ಲಿ, ಪಾಪಿಗಳು ತಮ್ಮ ಸ್ವಂತ ಹಾನಿಗೆ ಮಾಡಿದ ವಿರೋಧವನ್ನು ಎಷ್ಟಾಗಿ ಸಹಿಸಿಕೊಂಡನು ಎಂದು ಬರೆದದೆ.
- j ಜ್ಞಾ. 3:11,12; ಯೋಬ 5:17:
- k ಕೀರ್ತ 94:12; 119:67,75; ಪ್ರಕ 3:19:
- l ಧರ್ಮೋ 8:5; 2 ಸಮು 7:14; ಜ್ಞಾ. 13:24:
- m 1 ಪೇತ್ರ. 5:9:
- n ಅರಣ್ಯ 16:22:
- o ಯೆಶಾ 38:16:
- p ಅಥವಾ, ಕೆಲವು ದಿನಗಳ ತನಕ.
- q 2 ಪೇತ್ರ. 1:4; ಯಾಜ 11:44:
- r 1 ಪೇತ್ರ. 1:6:
- s ಯಾಕೋಬ. 3:17,18:
- t ಯೆಶಾ 35:3; ಯೋಬ. 4:3,4:
- u ಜ್ಞಾ. 4:26,27:
- v ರೋಮಾ. 14:19:
- w 1 ಥೆಸ. 4:7:
- x ಇಬ್ರಿ. 4:1; 2 ಕೊರಿ 6:1; ಗಲಾ. 5:4:
- y ಧರ್ಮೋ 29:18; ಅ. ಕೃ. 8:23:
- z ಆದಿ 25:33:
- aa ಆದಿ 27:34,36,38.
- bb ಅಥವಾ. ಮಾನಸಾಂತರಕ್ಕೆ.
- cc ವಿಮೋ 19:18; 20:18; ಧರ್ಮೋ 4:11; 5:22:
- dd ವಿಮೋ 19:16,19:
- ee ವಿಮೋ 20:19; ಧರ್ಮೋ 5:5,23,25; 18:16:
- ff ವಿಮೋ 19:12,13:
- gg ವಿಮೋ 19:16; ಧರ್ಮೋ 9:19:
- hh ಪ್ರಕ 14:1:
- ii ಗಲಾ. 4:26:
- jj ಯೂದ. 14:
- kk ಲೂಕ 10:20:
- ll ಇಬ್ರಿ. 2:12:
- mm ಆದಿ 18:25; ಕೀರ್ತ 58:11:
- nn ಇಬ್ರಿ. 8:6; 9:15
- oo ಇಬ್ರಿ. 11:4; ಆದಿ 4:10:
- pp ಇಬ್ರಿ. 10:22:
- qq ಅರಣ್ಯ 16:24-35; ಇಬ್ರಿ. 2:3:
- rr ವಿಮೋ 19:18:
- ss ಹಗ್ಗಾ. 2:6:
- tt ಕೀರ್ತ 102:26:
- uu ದಾನಿ. 2:44:
- vv ಅಥವಾ, ದೇವರ ಕೃಪೆಯನ್ನು ಹಿಡಿದುಕೊಂಡು.
- ww ಧರ್ಮೋ 4:24; 2 ಥೆಸ. 1:8: