ಇಬ್ರಿಯರಿಗೆ ಗ್ರಂಥಕರ್ತೃತ್ವ ಇಬ್ರಿಯರಿಗೆ ಬರೆದ ಪತ್ರಿಕೆಯ ಗ್ರಂಥಕರ್ತನು ರಹಸ್ಯವಾಗಿಯೇ ಉಳಿದಿದ್ದಾನೆ. ಕೆಲವು ಪಂಡಿತರು ಪೌಲನನ್ನು ಗ್ರಂಥಕರ್ತನೆಂದು ಸೂಚಿಸಿದ್ದಾರೆ, ಆದರೆ ನಿಜವಾದ ಗ್ರಂಥಕರ್ತನು ಅನಾಮಧೇಯನಾಗಿ ಉಳಿದಿದ್ದಾನೆ. ಕ್ರಿಸ್ತನನ್ನು ಕ್ರೈಸ್ತತ್ವದ ಮಹಾಯಾಜಕನು, ಅರೋನನ ಯಾಜಕತ್ವಕ್ಕಿಂತಲೂ ಶ್ರೇಷ್ಠನು ಮತ್ತು ಧರ್ಮಶಾಸ್ತ್ರವನ್ನು ಹಾಗೂ ಪ್ರವಾದನೆಗಳನ್ನು ನೆರವೇರಿಸಿದವನು ಎಂದು ನಿರರ್ಗಳವಾಗಿ ವಿವರಿಸುವಂಥ ಮತ್ತೊಂದು ಪುಸ್ತಕವಿಲ್ಲ. ಈ ಪುಸ್ತಕವು ಕ್ರಿಸ್ತನನ್ನು ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಎಂದು ಸಾದರಪಡಿಸುತ್ತದೆ (ಇಬ್ರಿ. 12:2). ಬರೆದ ದಿನಾಂಕ ಮತ್ತು ಸ್ಥಳ ಸರಿಸುಮಾರು ಕ್ರಿ.ಶ. 64-70 ರ ನಡುವೆ ಬರೆಯಲ್ಪಟ್ಟಿದೆ. ಇಬ್ರಿಯರಿಗೆ ಬರೆದ ಪತ್ರಿಕೆಯನ್ನು ಯೆರೂಸಲೇಮಿನಿಂದ ಬರೆಯಲಾಗಿದೆ, ಕ್ರಿಸ್ತನ ಸ್ವರ್ಗಾರೋಹಣವಾಗಿ ಸ್ವಲ್ಪ ಕಾಲವಾದ ನಂತರ ಮತ್ತು ಯೆರೂಸಲೇಮಿನ ನಾಶಕ್ಕಿಂತ ಸ್ವಲ್ಪ ಕಾಲ ಮುಂಚೆ ಬರೆಯಲಾಗಿದೆ. ಸ್ವೀಕೃತದಾರರು ಈ ಪತ್ರಿಕೆಯನ್ನು ಪ್ರಾಥಮಿಕವಾಗಿ ಹಳೆಯ ಒಡಂಬಡಿಕೆಯನ್ನು ಚೆನ್ನಾಗಿ ತಿಳಿದವರಾಗಿರುವ ಮತಾಂತರಿತ ಯೆಹೂದ್ಯರಿಗೆ ಮತ್ತು ಯೆಹೂದ್ಯ ಧರ್ಮಕ್ಕೆ ಹಿಂದಿರುಗಲು ಅಥವಾ ಸುವಾರ್ತೆಯನ್ನು ಯೆಹೂದ್ಯೀಕರಣಗೊಳಿಸಲು ಯತ್ನಿಸುತ್ತಿದ್ದವರಿಗೆ ಬರೆಯಲಾಗಿದೆ. “ಕ್ರಿಸ್ತ ನಂಬಿಕೆಗೆ ಬಂದ ಬಹುಮಂದಿ ಯಾಜಕರು (ಅ.ಪೊ. 6:7) ಸಹ ಇದರ ಸ್ವೀಕೃತದಾರರಾಗಿದ್ದಾರೆ ಎಂದು ಸೂಚಿಸಲಾಗಿದೆ. ಉದ್ದೇಶ ಸ್ಥಳೀಯ ಯೆಹೂದ್ಯ ಬೋಧನೆಗಳನ್ನು ತಿರಸ್ಕರಿಸುವಂತೆ ಮತ್ತು ಯೇಸುವಿಗೆ ನಂಬಿಗಸ್ತರಾಗಿರುವಂತೆ ತನ್ನ ವಾಚಕರನ್ನು ಉತ್ತೇಜಿಸಲು ಮತ್ತು ಯೇಸು ಕ್ರಿಸ್ತನು ಶ್ರೇಷ್ಠನು, ದೇವಕುಮಾರನು ದೇವದೂತರಿಗಿಂತ, ಯಾಜಕರಿಗಿಂತ, ಹಳೆಯ ಒಡಂಬಡಿಕೆಯ ನಾಯಕರಿಗಿಂತ, ಅಥವಾ ಯಾವುದೇ ಧರ್ಮಕ್ಕಿಂತಲೂ ಶ್ರೇಷ್ಠನು ಎಂದು ತೋರಿಸಲು ಇಬ್ರಿಯರ ಗ್ರಂಥಕರ್ತನು ಇದನ್ನು ಬರೆದನು. ಶಿಲುಬೆಯಲ್ಲಿ ಸಾಯುವ ಮೂಲಕ ಮತ್ತು ಸತ್ತವರೊಳಗಿಂದ ಎದ್ದುಬರುವ ಮೂಲಕ ಯೇಸು ವಿಶ್ವಾಸಿಗಳಿಗೆ ರಕ್ಷಣೆಯು ಮತ್ತು ನಿತ್ಯಜೀವವು ಉಂಟೆಂದು ಭರವಸೆಕೊಟ್ಟನು, ನಮ್ಮ ಪಾಪಗಳ ನಿವಾರಣೆಗಾಗಿರುವ ಕ್ರಿಸ್ತನ ಯಜ್ಞವು ಪರಿಪೂರ್ಣವಾದ್ದದು ಮತ್ತು ಸಂಪೂರ್ಣವಾದ್ದದು ಆಗಿದೆ, ನಂಬಿಕೆಯು ದೇವರಿಗೆ ಮೆಚ್ಚಿಕೆಯಾಗಿದೆ, ದೇವರಿಗೆ ವಿಧೇಯರಾಗುವ ಮೂಲಕ ನಾವು ನಮ್ಮ ನಂಬಿಕೆಯನ್ನು ವ್ಯಕ್ತಪಡಿಸುತ್ತೇವೆ ಎಂದು ತಿಳಿಸಲು ಇದನ್ನು ಬರೆದನು. ಮುಖ್ಯಾಂಶ ಕ್ರಿಸ್ತನ ಶ್ರೇಷ್ಠತೆ ಪರಿವಿಡಿ 1. ಯೇಸು ಕ್ರಿಸ್ತನು ದೇವದೂತರಿಗಿಂತಲೂ ಶ್ರೇಷ್ಠನು — 1:1-2:18 2. ಯೇಸು ಧರ್ಮಶಾಸ್ತ್ರಕ್ಕಿಂತಲೂ ಮತ್ತು ಹಳೆಯ ಒಡಂಬಡಿಕೆಗಿಂತಲೂ ಶ್ರೇಷ್ಠನು — 3:1-10:18 3. ನಂಬಿಗಸ್ತರಾಗಿರಲು ಮತ್ತು ಸಂಕಷ್ಟಗಳಲ್ಲಿ ಸೈರಣೆಯುಳ್ಳವರಾಗಿರಲು ಕರೆ — 10:19-12:29 4. ಅಂತಿಮ ಪ್ರಬೋಧನೆಗಳು ಮತ್ತು ವಂದನೆಗಳು — 13:1-25
1ದೇವರು ತನ್ನ ಮಗನ ಮೂಲಕ ಮಾತನಾಡಿದ್ದು 1 ದೇವರು ಪುರಾತನ ಕಾಲದಲ್ಲಿ ನಮ್ಮ ಪೂರ್ವಿಕರ ಸಂಗಡ ಪ್ರವಾದಿಗಳ ಮುಖಾಂತರ ಹಲವಾರು ವಿಧದಲ್ಲಿ, ಅನೇಕಸಾರಿ ಮಾತನಾಡಿದ್ದಾನೆ. 2 ಆದರೆ [a]ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ [b]ಮಗನ ಮುಖಾಂತರ ಮಾತನಾಡಿದ್ದಾನೆ. [c]ಆತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಆತನ ಮೂಲಕವೇ [d]ಇಡೀ ವಿಶ್ವವನ್ನು ಉಂಟುಮಾಡಿದನು. 3 ಈತನು ದೇವರ ಮಹಿಮೆಯ ಪ್ರಕಾಶವೂ, [e]ಆತನ ವ್ಯಕ್ತಿತ್ವದ ಪ್ರತಿರೂಪವೂ, [f]ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ [g]ಪಾಪಗಳನ್ನು ಶುದ್ಧಿಮಾಡಿ, [h]ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು. ಯೇಸು ದೇವರ ಮಗನಾಗಿದ್ದು ದೇವದೂತರಿಗಿಂತಲೂ ಶ್ರೇಷ್ಠನು 4 ಈತನು ದೇವದೂತರಿಗಿಂತಲೂ ಉನ್ನತನಾಗಿದ್ದು. [i]ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನು. 5 ಹೇಗೆಂದರೆ, ದೇವರು ತನ್ನ ದೇವದೂತರೊಳಗೆ ಯಾರಿಗಾದರೂ ಎಂದಾದರೂ ಈ ರೀತಿಯಾಗಿ ಹೇಳಿದ್ದುಂಟೋ?, “ನೀನು [j]ನನ್ನ ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.” [k]“ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು.” 6 [l]ಇದಲ್ಲದೆ ದೇವರು ತನ್ನ ಚೊಚ್ಚಲು ಮಗನನ್ನು ಭೂಲೋಕಕ್ಕೆ ತಿರುಗಿ ಬರಮಾಡುವಾಗ [m]“ದೇವದೂತರೆಲ್ಲರೂ ಆತನನ್ನು ಆರಾಧಿಸಬೇಕು” ಎಂದು ಆಜ್ಞಾಪಿಸಿದ್ದಾನೆ.7 ದೇವದೂತರ ವಿಷಯದಲ್ಲಿ,
[n]“ದೇವರು ತನ್ನ ದೂತರನ್ನು ಗಾಳಿಯನ್ನಾಗಿಯೂ, ತನ್ನ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾನೆ” ಎಂದು ಹೇಳಿದ್ದಾನೆ. 8 ಆದರೆ ಮಗನ ವಿಷಯದಲ್ಲಿಯಾದರೋ, “ದೇವರೇ [o]ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು. ನೀತಿದಂಡವೇ ನಿನ್ನ ರಾಜದಂಡವಾಗಿದೆ. 9 ನೀನು ನೀತಿಯನ್ನು ಪ್ರೀತಿಸಿದ್ದೀ ಮತ್ತು ಅನ್ಯಾಯವನ್ನು ದ್ವೇಷಿಸಿದ್ದೀ. ಆದುದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ [p]ಅಧಿಕವಾಗಿ ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾನೆ” ಎಂದು ಹೇಳಿದ್ದಾನೆ. 10 [q]“ಕರ್ತನೇ ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ. ಆಕಾಶವು ನಿನ್ನ ಕೈಕೆಲಸವಾಗಿದೆ, 11 ಅವು ನಾಶವಾಗುವವು. ಆದರೆ ನೀನು ಶಾಶ್ವತವಾಗಿರುತ್ತೀ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು. 12 ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ ಮತ್ತು ಅವು ವಸ್ತ್ರದಂತೆ ಬದಲಾಗುವವು. [r]ನೀನಾದರೂ ಅನನ್ಯನು. ನಿನ್ನ ವರ್ಷಗಳಿಗೆ ಅಂತ್ಯವೇ ಇಲ್ಲ” ಎಂತಲೂ ಹೇಳುತ್ತಾನೆ. 13 ಆದರೆ ಯಾವ ದೇವದೂತನಿಗಾದರೂ ದೇವರು, [s]“ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂಬುದಾಗಿ ಎಂದಾದರೂ ಹೇಳಿದ್ದಾನೋ?14 ಈ ಎಲ್ಲಾ ದೇವದೂತರು ರಕ್ಷಣೆಯನ್ನು [t]ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಟ್ಟ [u]ಸೇವಕಾತ್ಮಗಳಲ್ಲವೋ?
ಇಬ್ರಿಯರಿಗೆ 2 ->
- a 1 ಪೇತ್ರ. 1:20; ಇಬ್ರಿ. 9:26; ಅ. ಕೃ. 2:17:
- b ಇಬ್ರಿ. 3:6; 4:14; 5:8:
- c ಕೀರ್ತ 2:8; ಮತ್ತಾ 21:38; 28:18:
- d ಮೂಲ: ಯುಗಗಳನ್ನು. ಯೋಹಾ 1:3:
- e 2 ಕೊರಿ 4:4:
- f ಇಬ್ರಿ. 11:3; ಕೊಲೊ 1:17:
- g ಇಬ್ರಿ. 9:14:
- h ಮಾರ್ಕ 16:19; ಲೂಕ 22:69:
- i ಎಫೆ 1:21; ಫಿಲಿ. 2:9:
- j ಕೀರ್ತ 2:7; ಇಬ್ರಿ. 5:5; ಅ. ಕೃ. 13:33:
- k 2 ಸಮು 7:14; ಕೀರ್ತ 89:26,27:
- l ಅಥವಾ, ಹಾಗೆ ಹೇಳದೆ ಆತನು ತನ್ನ ಚೊಚ್ಚಲ ಮಗನನ್ನು ಭೂಲೋಕದೊಳಗೆ ಬರಮಾಡುವಾಗ.
- m ಧರ್ಮೋ 32:43; ಕೀರ್ತ 97:7:
- n ಕೀರ್ತ 104:4:
- o ಕೀರ್ತ 45:6,7:
- p ಯೆಶಾ 61:1,3:
- q ಕೀರ್ತ 102:25-27:
- r ಇಬ್ರಿ. 13:8:
- s ಕೀರ್ತ 110:1; ಇಬ್ರಿ. 10:13:
- t ಮತ್ತಾ 19:29; 25:34; ರೋಮಾ. 8:17; ಯಾಕೋಬ 2:5; ಪ್ರಕ 21:7:
- u ಆದಿ 19:16; ನ್ಯಾಯ 6:11; ದಾನಿ. 3:28; ಅ. ಕೃ. 12:7:
7 ದೇವದೂತರ ವಿಷಯದಲ್ಲಿ,
14 ಈ ಎಲ್ಲಾ ದೇವದೂತರು ರಕ್ಷಣೆಯನ್ನು [t]ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಟ್ಟ [u]ಸೇವಕಾತ್ಮಗಳಲ್ಲವೋ?
ಇಬ್ರಿಯರಿಗೆ 2 ->- a 1 ಪೇತ್ರ. 1:20; ಇಬ್ರಿ. 9:26; ಅ. ಕೃ. 2:17:
- b ಇಬ್ರಿ. 3:6; 4:14; 5:8:
- c ಕೀರ್ತ 2:8; ಮತ್ತಾ 21:38; 28:18:
- d ಮೂಲ: ಯುಗಗಳನ್ನು. ಯೋಹಾ 1:3:
- e 2 ಕೊರಿ 4:4:
- f ಇಬ್ರಿ. 11:3; ಕೊಲೊ 1:17:
- g ಇಬ್ರಿ. 9:14:
- h ಮಾರ್ಕ 16:19; ಲೂಕ 22:69:
- i ಎಫೆ 1:21; ಫಿಲಿ. 2:9:
- j ಕೀರ್ತ 2:7; ಇಬ್ರಿ. 5:5; ಅ. ಕೃ. 13:33:
- k 2 ಸಮು 7:14; ಕೀರ್ತ 89:26,27:
- l ಅಥವಾ, ಹಾಗೆ ಹೇಳದೆ ಆತನು ತನ್ನ ಚೊಚ್ಚಲ ಮಗನನ್ನು ಭೂಲೋಕದೊಳಗೆ ಬರಮಾಡುವಾಗ.
- m ಧರ್ಮೋ 32:43; ಕೀರ್ತ 97:7:
- n ಕೀರ್ತ 104:4:
- o ಕೀರ್ತ 45:6,7:
- p ಯೆಶಾ 61:1,3:
- q ಕೀರ್ತ 102:25-27:
- r ಇಬ್ರಿ. 13:8:
- s ಕೀರ್ತ 110:1; ಇಬ್ರಿ. 10:13:
- t ಮತ್ತಾ 19:29; 25:34; ರೋಮಾ. 8:17; ಯಾಕೋಬ 2:5; ಪ್ರಕ 21:7:
- u ಆದಿ 19:16; ನ್ಯಾಯ 6:11; ದಾನಿ. 3:28; ಅ. ಕೃ. 12:7: