10 [l]ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ, 11 [m]ಅಂತಿಯೋಕ್ಯ, [n]ಇಕೋನ್ಯ, [o]ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ, ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು, [p]ಅವೆಲ್ಲವುಗಳೊಳಗಿನಿಂದ [q]ಕರ್ತನು ನನ್ನನ್ನು ಬಿಡಿಸಿದನು. 12 [r]ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು. 13 ಆದರೆ ದುಷ್ಟರೂ, ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ [s]ಹೆಚ್ಚಾದ ಕೆಟ್ಟತನಕ್ಕೆ ಹೋಗುವರು. 14 [t]ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬುದನ್ನು ಆಲೋಚಿಸು. 15 [u]ಚಿಕ್ಕಂದಿನಿಂದಲೂ ನಿನಗೆ [v]ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ [w]ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ. 16 ದೈವ ಪ್ರೇರಿತವಾದ [x]ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ. 17 ಆದ್ದರಿಂದ [y]ದೇವರ ಮನುಷ್ಯನು ಎಲ್ಲವನ್ನೂ ಬಲ್ಲವನಾಗಿದ್ದು ಸಕಲಸತ್ಕಾರ್ಯಗಳಿಗೆ ಸನ್ನದ್ಧನಾಗುವನು.
<- 2 ತಿಮೊಥೆಯನಿಗೆ 22 ತಿಮೊಥೆಯನಿಗೆ 4 ->- a 1 ತಿಮೊ 4:1
- b ಫಿಲಿ 2:21
- c ಲೂಕ 16:14; 1 ತಿಮೊ 6:10
- d ರೋಮಾ. 1:31
- e ತೀತ 1:8
- f 1 ತಿಮೊ 3:6; 6:4
- g ಫಿಲಿ 3:19
- h ತೀತ 1:11
- i 1 ತಿಮೊ 2:4
- j ವಿಮೋ 7:11
- k ವಿಮೋ 7:12; 8:18; 9:11
- l ಫಿಲಿ 2:22
- m ಅ. ಕೃ 13:14; 45, 50
- n ಅ. ಕೃ 14:1,2,5
- o ಅ. ಕೃ 14:6,19
- p ಕೀರ್ತ 34:19
- q 2 ತಿಮೊ 4:17
- r ಅ. ಕೃ 14:22
- s ಪ್ರಕ 22:11
- t 2 ತಿಮೊ 1:13
- u 2 ತಿಮೊ 1:5
- v ಯೋಹಾ 5:39
- w ಕೀರ್ತ 119:99
- x ರೋಮ 15:4; 2 ಪೇತ್ರ 1:20,21
- y 1 ತಿಮೊ 6:11