3
ಪ್ರಾರ್ಥನೆಗಾಗಿ ವಿನಂತಿ
1 ಕಡೆಯದಾಗಿ, *1 ಥೆಸ. 5:25:ಸಹೋದರರೇ, ನಮಗೋಸ್ಕರ ಪ್ರಾರ್ಥನೆಮಾಡಿರಿ. ಕರ್ತನ ವಾಕ್ಯವು ನಿಮ್ಮಲ್ಲಿ ಹಬ್ಬಿಹರಡಿದ ಪ್ರಕಾರವೇ †ಕೀರ್ತ 147:15; 1 ಥೆಸ. 1:8:ಅದು ಬೇಗನೆ ಪಸರಿಸಿ ಮಹಿಮೆ ಹೊಂದಲಿ, 2 ‡ರೋಮಾ. 15:31:ದೇವರು ನಮ್ಮನ್ನು ಮೂರ್ಖರಾದ ದುಷ್ಟಜನರ ಕೈಯಿಂದ ತಪ್ಪಿಸುವ ಹಾಗೆಯೂ ಪ್ರಾರ್ಥಿಸಿರಿ, ಕ್ರಿಸ್ತ ನಂಬಿಕೆಯು ಎಲ್ಲರಲ್ಲಿ ಇರುವುದಿಲ್ಲವಲ್ಲಾ. 3 ಆದರೆ §1 ಕೊರಿ 1:9:ಕರ್ತನು ನಂಬಿಗಸ್ತನು, ಆತನು ನಿಮ್ಮನ್ನು ದೃಢಪಡಿಸಿ ನೀವು *1 ಯೋಹಾ 2:14:ಕೆಡುಕನ ಕೈಗೆ †ಮತ್ತಾ 6:13; ಯೋಹಾ 17:15:ಸಿಕ್ಕದಂತೆ ಕಾಪಾಡುವನು. 4 ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ, ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು. 5 ನೀವು ದೇವರ ಪ್ರೀತಿಯಲ್ಲಿಯೂ ‡ಅಥವಾ, ಕ್ರಿಸ್ತನನ್ನು ಎದುರುನೋಡುವ. ಕ್ರಿಸ್ತನ ತಾಳ್ಮೆಯಲ್ಲಿಯೂ ಸೇರುವಂತೆ ಕರ್ತನೇ ನಿಮ್ಮನ್ನು ನಡೆಸಲಿ.
ಮೈಗಳ್ಳರಿಗೆ ಎಚ್ಚರಿಕೆ
6 ಸಹೋದರರೇ, ನಾವು ಬೋಧಿಸಿದ ಸಂಪ್ರದಾಯವನ್ನು ಅನುಸರಿಸದೆ §ವ. 11; 1 ಥೆಸ. 5:14:ಸೋಮಾರಿಯಾಗಿ ಜೀವಿಸುವ ಪ್ರತಿಯೊಬ್ಬ *1 ಕೊರಿ 5:11:ಸಹೋದರನಿಂದ ನೀವು †ವ. 14; ಮತ್ತಾ 18:17; 2 ತಿಮೊ. 3:5; 1 ಕೊರಿ 5:9; 2 ಯೋಹಾ 10:ದೂರವಾಗಿರಬೇಕೆಂದು ‡1 ಕೊರಿ 5:4:ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಆಜ್ಞಾಪಿಸುತ್ತೇವೆ. 7 §ಅ. ಕೃ. 20:35; 1 ಥೆಸ. 1:6:ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂಬುದನ್ನು ನೀವೇ ಬಲ್ಲಿರಿ, *1 ಥೆಸ. 1:5 ನಾವು ನಿಮ್ಮಲ್ಲಿ ಸೋಮಾರಿಯಾಗಿ ನಡೆಯಲಿಲ್ಲ. 8 ನಾವು ಹಣಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ, †1 ಥೆಸ. 2:9:ನಿಮ್ಮಲ್ಲಿ ಯಾರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನ ಮಾಡಿದೆವು. 9 ‡1 ಕೊರಿ 9:4; 1 ಥೆಸ. 2:6:ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ, §ವ. 7; 1 ಪೇತ್ರ. 5:3:ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಮಾದರಿಯಾಗಿರಬೇಕೆಂದೇ ಹಾಗೆ ಮಾಡಿದೆವು. 10 ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ, *ಆದಿ 3:19; 1 ಥೆಸ. 4:11:“ಕೆಲಸ ಮಾಡಲೊಲ್ಲದವನು ಊಟಮಾಡಬಾರದು” ಎಂದು ನಿಮಗೆ ಆಜ್ಞಾಪಿಸಿದೆವಷ್ಟೆ. 11 ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ, †1 ತಿಮೊ. 5:13; 1 ಪೇತ್ರ. 4:15:ಇತರರ ವಿಷಯದಲ್ಲಿ ಮಾತ್ರ ತಲೆ ಹಾಕಿ ಸೋಮಾರಿಯಾಗಿ ನಡೆಯುತ್ತಾರೆಂಬ ಸುದ್ದಿಯನ್ನು ಕೇಳಿದ್ದೇವೆ. 12 ಇಂಥವರು ತಮ್ಮ ಕೆಲಸಕಾರ್ಯಗಳನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡಬೇಕೆಂದು ಕರ್ತನಾದ ಯೇಸು ಕ್ರಿಸ್ತನಲ್ಲಿ ನಾವು ಆಜ್ಞಾಪಿಸಿ ಬುದ್ಧಿ ಹೇಳುತ್ತೇವೆ. 13 ಸಹೋದರರೇ, ‡ಗಲಾ. 6:9; 1 ಕೊರಿ 15:58:ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ. 14 ಈ ಪತ್ರಿಕೆಯ ಮೂಲಕವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ಒಳಗಾಗದಿದ್ದರೆ ಅವನನ್ನು ಗುರುತಿಸಿ ಅವನಿಗೆ ನಾಚಿಕೆಯಾಗುವಂತೆ §ವ. 6:ಅವನ ಸಹವಾಸದಲ್ಲಿ ಸೇರಬೇಡಿರಿ. 15 ಆದರೂ *ಯಾಜಕ. 19:17; ಮತ್ತಾ 18:15:ಅವನನ್ನು ವೈರಿಯೆಂದು ಭಾವಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿಹೇಳಿರಿ.
ಸಮಾಪ್ತಿ ವಾಕ್ಯಗಳು
16 †ರೋಮಾ. 15:33:ಶಾಂತಿದಾಯಕನಾದ ಕರ್ತನು ತಾನೇ ಸದಾಕಾಲದಲ್ಲಿಯೂ ಸಕಲವಿಧದಲ್ಲಿಯೂ ‡ಅರಣ್ಯ 6:26:ನಿಮಗೆ ಶಾಂತಿಯನ್ನು ದಯಪಾಲಿಸಲಿ. ಕರ್ತನು ನಿಮ್ಮೆಲ್ಲರೊಂದಿಗಿರಲಿ.
17 §1 ಕೊರಿ 16:21:ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ. ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ನನ್ನ ಗುರುತು, ಹೀಗೆಯೇ ನನ್ನ ಕೈ ಬರಹ.
18 *ರೋಮಾ. 16:20:ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರ ಸಂಗಡವಿರಲಿ.
<- 2 ಥೆಸಲೋನಿಕದವರಿಗೆ 2- a 1 ಥೆಸ. 5:25:
- b ಕೀರ್ತ 147:15; 1 ಥೆಸ. 1:8:
- c ರೋಮಾ. 15:31:
- d 1 ಕೊರಿ 1:9:
- e 1 ಯೋಹಾ 2:14:
- f ಮತ್ತಾ 6:13; ಯೋಹಾ 17:15:
- g ಅಥವಾ, ಕ್ರಿಸ್ತನನ್ನು ಎದುರುನೋಡುವ.
- h ವ. 11; 1 ಥೆಸ. 5:14:
- i 1 ಕೊರಿ 5:11:
- j ವ. 14; ಮತ್ತಾ 18:17; 2 ತಿಮೊ. 3:5; 1 ಕೊರಿ 5:9; 2 ಯೋಹಾ 10:
- k 1 ಕೊರಿ 5:4:
- l ಅ. ಕೃ. 20:35; 1 ಥೆಸ. 1:6:
- m 1 ಥೆಸ. 1:5
- n 1 ಥೆಸ. 2:9:
- o 1 ಕೊರಿ 9:4; 1 ಥೆಸ. 2:6:
- p ವ. 7; 1 ಪೇತ್ರ. 5:3:
- q ಆದಿ 3:19; 1 ಥೆಸ. 4:11:
- r 1 ತಿಮೊ. 5:13; 1 ಪೇತ್ರ. 4:15:
- s ಗಲಾ. 6:9; 1 ಕೊರಿ 15:58:
- t ವ. 6:
- u ಯಾಜಕ. 19:17; ಮತ್ತಾ 18:15:
- v ರೋಮಾ. 15:33:
- w ಅರಣ್ಯ 6:26:
- x 1 ಕೊರಿ 16:21:
- y ರೋಮಾ. 16:20: