3 ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ, ಯಾಕೆಂದರೆ [e]ಮೊದಲು ನಂಬಿಕೆಯ ಭ್ರಷ್ಟತೆಯುಂಟಾಗಿ [f]ನಾಶನದ ಮಗನಾದ ಅಧರ್ಮ ಪುರುಷನು ಬಯಲಿಗೆ ಬಾರದ ಹೊರತು ಆ ದಿನವು ಬರುವುದಿಲ್ಲ. 4 ಯಾವುದು ದೇವರೆನಿಸಿಕೊಳ್ಳುತ್ತದೋ ಯಾವುದು ಆರಾಧಿಸಲ್ಪಡುತ್ತದೋ ಅದನ್ನೆಲ್ಲಾ [g]ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು [h]ತಾನು ದೇವರೆಂದು ಘೋಷಿಸಿಕೊಂಡು ದೇವರ ಗರ್ಭಗುಡಿಯಲ್ಲೇ ಕುಳಿತುಕೊಳ್ಳುತ್ತಾನೆ.
5 ನಾನು ನಿಮ್ಮ ಸಂಗಡ ಇದ್ದಾಗ ಈ ಸಂಗತಿಗಳನ್ನು ಹೇಳಿದ್ದು ಜ್ಞಾಪಕವಿಲ್ಲವೋ? 6 ಇದಲ್ಲದೆ ಅವನು ನೇಮಕವಾದ ಸಮಯದಲ್ಲೇ ಹೊರತು ಬಯಲಿಗೆ ಬರುವುದಕ್ಕೆ ಏನು ಅಡ್ಡಿ ಮಾಡುತ್ತದೋ ಅದು ನಿಮಗೆ ತಿಳಿದೇ ಇದೆ. 7 [i]ಅಧರ್ಮವು ಈಗಲೂ ಗುಪ್ತವಾಗಿ ತನ್ನ ಕಾರ್ಯವನ್ನು ಸಾಧಿಸುತ್ತದೆ, ಆದರೆ ತಡೆಗಟ್ಟುವವನು ದಾರಿಬಿಡುವ ತನಕ ಅದು ಗುಪ್ತವಾಗಿಯೇ ಇರುವುದು. 8 ಆಗ [j]ಅಧರ್ಮಸ್ವರೂಪನು ಕಾಣಿಸಿಕೊಳ್ಳುವನು, ಅವನನ್ನು ಯೇಸು ಕರ್ತನು [k]ತನ್ನ ಬಾಯಿಯ ಉಸಿರಿನಿಂದ [l]ಕೊಲ್ಲುವನು, [m]ತನ್ನ ಬರುವಿಕೆಯ ಪ್ರತ್ಯಕ್ಷತೆಯಿಂದ ಸಂಹರಿಸುವನು. 9 ಆ ಅಧರ್ಮಸ್ವರೂಪನು, ಸೈತಾನನ ಕಾರ್ಯಕ್ಕೆ ಅನುಸಾರವಾಗಿ, ಅದು ಸುಳ್ಳಾದ [n]ಸಕಲವಿಧವಾದ ಮಹತ್ಕಾರ್ಯ, ಸೂಚಕಕಾರ್ಯ, ಅದ್ಭುತಕಾರ್ಯ ಇವುಗಳಿಂದಲೂ, 10 ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ [o]ನಾಶದ ಮಾರ್ಗದಲ್ಲಿರುವವರಿಗೋಸ್ಕರವಾಗಿ ಬರುವನು. ಯಾಕೆಂದರೆ ಅವರು ಸತ್ಯವನ್ನು ಪ್ರೀತಿಸದೆ ನಿರಾಕರಿಸಿದ್ದರಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ. 11 ಇದೇ ಕಾರಣದಿಂದ [p]ದೇವರು ಗಾಢಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು [q]ಆ ಸುಳ್ಳನ್ನು ನಂಬುವಂತೆ ಒಳಪಡಿಸುತ್ತಾನೆ. 12 [r]ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ನ್ಯಾಯತೀರ್ಪಿಗೆ [s]ಗುರಿಯಾಗುವರು.
- a 1 ಥೆಸ. 2:19:
- b ಮತ್ತಾ 24:31; 1 ಥೆಸ. 4:15-17:
- c 1 ಯೋಹಾ 4:1:
- d ವ. 15:
- e 1 ತಿಮೊ. 4:1:
- f ವ. 8; ದಾನಿ. 7:25; 8:25; 11:36; ಪ್ರಕ 13:5, 6. ವಿಧ್ವಂಸಕನು
- g ಯೋಹಾ 17:12:
- h ಯೆಶಾ 14:14; ಯೆಜೆ. 28:2:
- i 1 ಯೋಹಾ 2:18; 4:3:
- j ವ. 3:
- k ಯೆಶಾ 11:4:
- l ದಾನಿ. 7:10, 11:
- m 1 ತಿಮೊ. 6:14; 2 ತಿಮೊ. 1:10; 4:1, 8; ತೀತ. 2:13:
- n ಮತ್ತಾ 24:24; ಪ್ರಕ 13:14:
- o 1 ಕೊರಿ 1:18:
- p 1 ಅರಸು 22:22; ಯೆಹೆ. 14:9:
- q ರೋಮಾ. 1:25:
- r ರೋಮಾ. 1:32; 2:8:
- s ಅಥವಾ, ಒಳಗಾಗಬೇಕೆಂಬುದೇ ದೇವರ ಉದ್ದೇಶ.
- t 1 ಥೆಸ. 1:4:
- u 1 ಥೆಸ. 4:3:
- v 1 ಥೆಸ. 5:9; 2 ತಿಮೊ. 1:9:
- w ಕೆಲವು ಪ್ರತಿಗಳಲ್ಲಿ, ಪ್ರಥಮಫಲವಾಗಿ ಎಂದು ಬರೆದದೆ.
- x 1 ಥೆಸ. 1:3:
- y 1 ಥೆಸ. 5:9; 2 ತಿಮೊ. 1:9:
- z 1 ಕೊರಿ 16:13:
- aa ವ. 2:
- bb ಯೋಹಾ 3:16; 1 ಯೋಹಾ 4:10; ಪ್ರಕ 1:5
- cc 1 ಪೇತ್ರ. 1:3:
- dd 1 ಥೆಸ. 3:13; 2 ಥೆಸ. 3:3: