8 ಅದೇ ರೀತಿಯಾಗಿ [k]ಸಭಾಸೇವಕರು ಗೌರವವುಳ್ಳವರಾಗಿರಬೇಕು. ಅವರು ಎರಡು ಮಾತಿನವರೂ, [l]ಮದ್ಯಾಸಕ್ತರೂ, [m]ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ, 9 ನಂಬಿಕೆಯಿಂದ ಪ್ರಕಟವಾಗಿರುವ [n]ಸತ್ಯಾರ್ಥವನ್ನು ಶುದ್ಧ ಮನಸ್ಸಾಕ್ಷಿಯಿಂದ ಕೈಕೊಳ್ಳುವವರಾಗಿರಬೇಕು. 10 ಇದಲ್ಲದೆ [o]ಅವರು ಮೊದಲು ಪರೀಕ್ಷಿಸಲ್ಪಡಬೇಕು, ತರುವಾಯ ಅವರ ಮೇಲೆ ಯಾರೂ ತಪ್ಪುಹೊರಿಸದಿದ್ದರೆ ಸಭಾಸೇವಕರ ಉದ್ಯೋಗವನ್ನು ನೆರವೇರಿಸಲಿ. 11 ಹಾಗೆಯೇ [p]ಸಭಾಸೇವಕಿಯರಾದ ಸ್ತ್ರೀಯರೂ [q]ಗೌರವವುಳ್ಳವರಾಗಿರಬೇಕು, ಚಾಡಿಹೇಳುವವರಾಗಿರದೆ, ಸ್ವಸ್ಥಬುದ್ಧಿಯುಳ್ಳವರೂ, ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು. 12 ಸಭಾಸೇವಕರು ಏಕಪತ್ನಿಯುಳ್ಳವರೂ, [r]ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ನಡಿಸುವವರೂ ಆಗಿರಬೇಕು. 13 [s]ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡಿರುವವರು ತಮಗೆ ಒಳ್ಳೆಯ ಪದವಿಯನ್ನೂ, ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹುಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ.
16 ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥದ ರಹಸ್ಯವು ಗಂಭೀರವಾದದ್ದೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ, ಅದೇನಂದರೆ,
- a ಅ. ಕೃ 20:28
- b ತೀತ 1:6-9
- c ವ. 11
- d 1 ಪೇತ್ರ 4:9
- e 2 ತಿಮೊ 2:24
- f ತೀತ 3:2
- g 1 ತಿಮೊ 6:10; ಇಬ್ರಿ. 13:5
- h ವ 12
- i ಮಾರ್ಕ 4:11; ಕೊಲೊ 4:5
- j 2 ತಿಮೊ 2:26; 1 ತಿಮೊ 6:9
- k 1 ತಿಮೊ 6:9
- l ತೀತ 2:3; 1 ತಿಮೊ 5:23
- m ತೀತ 1:7; 1 ಪೇತ್ರ 5:2
- n 1 ತಿಮೊ 1:19
- o 1 ತಿಮೊ 5:22
- p ಅವರ ಹೆಂಡತಿಯರಾದ
- q ತೀತ 2:3
- r 1 ತಿಮೊ 3:2,4
- s ಮತ್ತಾ 25:21
- t ಎಫೆ 2:21; 2 ತಿಮೊ 2:20; ಇಬ್ರಿ 3:6
- u ಯೋಹ 1:14; 1 ಪೇತ್ರ 1:20; 1 ಯೋಹಾ 1:2,3,4,5,8
- v ಗಲಾ 2:2
- w 2 ಥೆಸ 1:10
- x ಅ. ಕೃ 1:2