1 ತಿಮೊಥೆಯನಿಗೆ ಗ್ರಂಥಕರ್ತೃತ್ವ ಈ ಪತ್ರಿಕೆಯ ಗ್ರಂಥಕರ್ತನು ಪೌಲನು, ಇದು ಅಪೊಸ್ತಲನಾದ ಪೌಲನಿಂದ ಬರೆಯಲ್ಪಟ್ಟಿದೆ ಎಂದು 1 ತಿಮೊಥೆಯನ ಗ್ರಂಥವು ಸ್ಪಷ್ಟವಾಗಿ ತಿಳಿಸುತ್ತದೆ, “ನಮ್ಮ ರಕ್ಷಕನಾದ ದೇವರ ನಮ್ಮ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತ ಯೇಸುವಿನ ಆಜ್ಞೆಯ ಮೇರೆಗೆ ನೇಮಿಸಲ್ಪಟ್ಟ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು” (1 ತಿಮೊ. 1:1). ಆದಿ ಸಭೆಯು ಇದನ್ನು ಪೌಲನ ಯಥಾರ್ಥವಾದ ಪತ್ರಿಕೆ ಎಂದು ಸ್ಪಷ್ಟವಾಗಿ ಅಂಗೀಕರಿಸಿದೆ. ಬರೆದ ದಿನಾಂಕ ಮತ್ತು ಸ್ಥಳ ಸರಿಸುಮಾರು ಕ್ರಿ.ಶ. 62-64 ರ ನಡುವೆ ಬರೆಯಲ್ಪಟ್ಟಿದೆ. ಪೌಲನು ಎಫೆಸದಲ್ಲಿ ತಿಮೊಥೆಯನನ್ನು ಬಿಟ್ಟು, ಮಕೆದೋನ್ಯಕ್ಕೆ ಹೋದನು, ಅಲ್ಲಿಂದ ಆತನು ಅವನಿಗೆ ಈ ಪತ್ರಿಕೆಯನ್ನು ಬರೆದನು. (1 ತಿಮೊ. 1:3; 3:14,15). ಸ್ವೀಕೃತದಾರರು ಪೌಲನ ಪ್ರಯಾಣದ ಸಂಗಡಿಗನು ಮತ್ತು ಅವನ ಮಿಷನರಿ ಪ್ರಯಾಣದಲ್ಲಿ ಸಹಾಯಕನು ಆಗಿದ್ದ ತಿಮೊಥೆಯನಿಗೆ ಸಂಬೋಧಿಸಿ ಬರೆಯಲಾಗಿರುವುದ್ದರಿಂದ ಮೊದಲ ತಿಮೊಥೆಯನ ಪುಸ್ತಕಕ್ಕೆ ಅವನ ಹೆಸರನ್ನು ಇಡಲಾಗಿದೆ. ತಿಮೊಥೆಯನು ಮತ್ತು ಇಡೀ ಸಭೆಯು 1 ತಿಮೊಥೆಯನಿಗೆ ಬರೆದ ಪತ್ರಿಕೆಯ ಓದುಗರಾಗಿದ್ದಾರೆ. ಉದ್ದೇಶ ದೇವರ ಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ತಿಮೊಥೆಗೆ ಆದೇಶ ನೀಡಲು (3:14-15) ಮತ್ತು ತಿಮೊಥೆಯನು ಈ ಆದೇಶಗಳಿಗೆ ಸರಿಯಾಗಿ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸಲು. ಈ ವಚನಗಳು 1 ತಿಮೊಥೆಯನ ಪುಸ್ತಕದ ಪೌಲನ ಉದ್ದೇಶದ ಹೇಳಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ದೇವರ ಮನೆಯಲ್ಲಿ ಅಂದರೆ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ ಜೀವಸ್ವರೂಪನಾದ ದೇವರ ಸಭೆಯಲ್ಲಿ ಜನರು ಹೇಗೆ ನಡೆದುಕೊಳ್ಳಬೇಕು ಅವರಿಗೆ ತಿಳಿಯುವಂತೆ ಇದನ್ನು ಬರೆಯುತ್ತಿದ್ದಾನೆಂದು ಅವನು ಹೇಳಿದ್ದಾನೆ. ಈ ವಾಕ್ಯಭಾಗವು ಪೌಲನು ಪತ್ರಿಕೆಗಳನ್ನು ಕಳುಹಿಸಿ, ಸಭೆಗಳನ್ನು ಹೇಗೆ ಬಲಪಡಿಸಬೇಕು ಮತ್ತು ಕಟ್ಟಬೇಕು ಎಂದು ತನ್ನ ಜನರಿಗೆ ಆದೇಶಿಸುತ್ತಿರುವುದನ್ನು ಗೋಚರಪಡಿಸುತ್ತದೆ. ಮುಖ್ಯಾಂಶ ಯುವ ಶಿಷ್ಯನಿಗೆ ಆದೇಶಗಳು ಪರಿವಿಡಿ 1. ಸೇವೆಗಾಗಿರುವ ಅಭ್ಯಾಸಗಳು — 1:1-20 2. ಸೇವೆಗಾಗಿರುವ ತತ್ವಗಳು — 2:1-3:16 3. ಸೇವೆಯಲ್ಲಿರುವ ಜವಾಬ್ದಾರಿಗಳು — 4:1-6:21
1 ನಮ್ಮ ರಕ್ಷಕನಾದ ದೇವರ *ಕೊಲೊ 1:27ನಮ್ಮ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತ ಯೇಸುವಿನ ಆಜ್ಞೆಯ ಮೇರೆಗೆ ನೇಮಿಸಲ್ಪಟ್ಟ ಕ್ರಿಸ್ತ ಯೇಸುವಿನ †2 ಕೊರಿ 1:1ಅಪೊಸ್ತಲನಾದ ಪೌಲನು 2 ‡ತೀತ 1:4ನಂಬಿಕೆಯ ವಿಷಯದಲ್ಲಿ ನಿಜಕುಮಾರನಾಗಿರುವ ತಿಮೊಥೆಯನಿಗೆ ಬರೆಯುವುದೇನೆಂದರೆ, §2 ತಿಮೊ 1:2; 2 ಯೊಹಾ 3; ಯೂದ 2ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಉಂಟಾಗಲಿ.
ಸುಳ್ಳುಬೋಧನೆಯ ಬಗ್ಗೆ ಎಚ್ಚರಿಕೆ 3 ನಾನು ಮಕೆದೋನ್ಯಕ್ಕೆ ಹೋಗುತ್ತಿದ್ದಾಗ ನೀನು ಎಫೆಸದಲ್ಲೇ ಇದ್ದುಕೊಂಡು ಅಲ್ಲಿರುವ ಕೆಲವರಿಗೆ, *1 ತಿಮೊ 6:3 ಗಲಾ 1:6,7ನೀವು ಬೇರೆ ಉಪದೇಶವನ್ನು ಮಾಡಬಾರದೆಂತಲೂ, 4 †1 ತಿಮೊ 4:7; 2 ತಿಮೊ 4:4; ತೀತ 1:14; 2 ಪೇತ್ರ 1:16ಕಲ್ಪಿತಕಥೆಗಳಿಗೂ, ಕೊನೆಮೊದಲಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ, ಆಜ್ಞಾಪಿಸಬೇಕೆಂಬುದಾಗಿ ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತಿದೇನೆ. ಅಂತಹ ಕಥೆಗಳೂ, ‡ತೀತ 3:9ವಂಶಾವಳಿಗಳೂ §1 ತಿಮೊ. 6:4 ವಿವಾದಕ್ಕೆ ಎಡೆಮಾಡಿಕೊಡುತ್ತದೆಯೇ ಹೊರತು ದೇವರ ಯೋಜನೆಗಳಿಗೆ ಅನುಕೂಲವಾಗಿರುವುದಿಲ್ಲ. ನಂಬಿಕೆಯಿಂದ ಮಾತ್ರ ಅದು ಸಾಧ್ಯವಾಗುತ್ತದೆ. 5 *2 ತಿಮೊ. 2:22ಶುದ್ಧಹೃದಯ, †1 ಪೇತ್ರ. 3:16, 21ಒಳ್ಳೆಯ ಮನಸ್ಸಾಕ್ಷಿ, ‡2 ತಿಮೊ 1:5ಪ್ರಾಮಾಣಿಕವಾದ ನಂಬಿಕೆ ಎಂಬಿವುಗಳಿಂದ ಹುಟ್ಟಿದ ಪ್ರೀತಿಯೇ ದೇವಾಜ್ಞೆಯ ಗುರಿಯಾಗಿದೆ. 6 ಕೆಲವರು ಈ ಗುರಿಯನ್ನು ಬಿಟ್ಟು §ತೀತ 1:10ವ್ಯರ್ಥವಾದ ವಿಚಾರಗಳ ಕಡೆಗೆ ತಿರುಗಿಕೊಂಡಿದ್ದಾರೆ. 7 ಅವರು ಧರ್ಮೋಪದೇಶಕರಾಗಬೇಕೆಂದು ಬಯಸುತ್ತಿದ್ದರೂ ತಾವು ಹೇಳುವುದಾಗಲಿ, *1 ತಿಮೊ 6:4; ಕೊಲೊ 2:18ತಾವು ದೃಢವಾಗಿ ಮಾತನಾಡುವ ವಿಷಯವಾಗಲಿ ಇಂಥದೆಂದು ತಿಳಿಯದವರಾಗಿದ್ದಾರೆ. 8 †ರೋಮ 7:16ಧರ್ಮಶಾಸ್ತ್ರವು ಒಳ್ಳೆಯದೆಂದು ಬಲ್ಲೆವು. ಆದರೆ ಅದನ್ನು ಅದರ ಉದ್ದೇಶಕ್ಕೆ ತಕ್ಕ ಹಾಗೆ ಉಪಯೋಗಿಸಬೇಕು. 9 ಧರ್ಮಶಾಸ್ತ್ರವು ‡ಗಲಾ 5:23ನೀತಿವಂತರಿಗೋಸ್ಕರ ಅಲ್ಲ, ಆದರೆ ಅಕ್ರಮಗಾರರು, ಅವಿಧೇಯರು, ಭಕ್ತಿಹೀನರು, ಪಾಪಿಷ್ಠರು, ಅಪವಿತ್ರರು, ಪ್ರಾಪಂಚಿಕರು, ತಂದೆತಾಯಿಗಳನ್ನು ಕೊಲ್ಲುವವರು, ನರಹತ್ಯಮಾಡುವವರು, 10 ಜಾರರು, ಸಲಿಂಗಕಾಮಿಗಳು, ನರಚೋರರು, ಸುಳ್ಳುಗಾರರು, ಅಸತ್ಯವಾದಿಗಳು, §2 ತಿಮೊ 4:3; ತೀತ 1:9; 2:1; 1 ತಿಮೊ 6:3; 2 ತಿಮೊ 1:13; ತೀತ 1:13, 2:2ಸ್ವಸ್ಥಬೋಧನೆಗೆ ವಿರುದ್ಧವಾಗಿರುವಂಥವುಗಳನ್ನು ಮಾಡುವವರು, ಈ ಮೊದಲಾದ ಅನೀತಿವಂತರಿಗಾಗಿ ನೇಮಕವಾಗಿದೆ ಎಂದು ನಮಗೆ ತಿಳಿದಿದೆ. 11 ಈ ಬೋಧನೆಯು *1 ತಿಮೊ 6:15ಭಾಗ್ಯವಂತನಾದ †2 ಕೊರಿ 4:4ದೇವರ ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆಗೆ ಅನುಸಾರವಾಗಿದೆ. ‡ತೀತ 1:3,4; ಗಲಾ 2:7ಈ ಸುವಾರ್ತೆಯ ಸೇವೆಯು ನನಗೆ ಕೊಡಲ್ಪಟ್ಟಿತು.12-13 §ಆ. ಕೃ 9:22; ಫಿಲಿ 4:13; 2 ತಿಮೊ 4:17ನನಗೆ ಬಲವನ್ನು ದಯಪಾಲಿಸಿದವನು ನಮ್ಮ ಕರ್ತನಾದ ಯೇಸು ಕ್ರಿಸ್ತನೇ. ಅದಕ್ಕಾಗಿ ನಾನು ಕೃತಜ್ಞತೆಯುಳ್ಳವನಾಗಿದ್ದೇನೆ. ಮೊದಲು ದೂಷಕನೂ, *ಆ. ಕೃ 8:3ಹಿಂಸಕನೂ, ಕೇಡುಮಾಡುವವನೂ ಆಗಿದ್ದ ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ, †2 ಕೊರಿ 3:6ತನ್ನ ಸೇವೆಗೆ ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರಮಾಡುತ್ತೇನೆ. ನಾನು ಅಜ್ಞಾನಿಯಾಗಿ ‡ಆ. ಕೃ. 3:17ತಿಳಿಯದೆ ಅಪನಂಬಿಕೆಯಲ್ಲಿ ಆ ರೀತಿ ನಡೆದುಕೊಂಡದ್ದರಿಂದ §1 ಕೊರಿ 7:25; 2 ಕೊರಿ 4:1ನನ್ನ ಮೇಲೆ ಆತನಿಗೆ ಕರುಣೆ ಉಂಟಾಯಿತು; 14 ಆದರೆ *ರೋಮ 5:20ನಮ್ಮ ಕರ್ತನ ಕೃಪೆಯು ಅತ್ಯಧಿಕವಾಗಿದ್ದು ಕ್ರಿಸ್ತಯೇಸುವಿನಲ್ಲಿರುವ †ಲೂಕ 7:47, 50; 1 ಥೆಸ. 1:3ನಂಬಿಕೆಯನ್ನೂ ಪ್ರೀತಿಯನ್ನೂ ನನ್ನಲ್ಲಿ ಉಕ್ಕಿಸಿತ್ತು. 15 ‡ಮತ್ತಾ 9:13; ಯೋಹಾ 3:17; ರೋಮ 4:25ಕ್ರಿಸ್ತಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು §1 ತಿಮೊ 3:1; 4:9; 2 ತಿಮೊ. 2:11; ತೀತ 3:8ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ, ಯಾಕೆಂದರೆ *1 ಕೊರಿ 15:9 ಆ ಎಲ್ಲಾ ಪಾಪಿಗಳಲ್ಲಿ ನಾನೇ ಪ್ರಮುಖನು. 16 ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ, ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸುವು ಪಾಪಿಗಳಲ್ಲಿ ಪ್ರಮುಖನಾಗಿದ್ದ ನನ್ನನ್ನು ಕರುಣಿಸಿ, ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು. 17 †ಪ್ರಕ 15:3; 4:9,10ಸರ್ವಯುಗಗಳ ಅರಸನೂ, ‡1 ತಿಮೊ 6:15,16; ರೋಮ 1:23ಅಮರನೂ, §ಯೋಹಾ 1:18; ಕೊಲೊ 1:15; ಇಬ್ರಿ 11:27; 1 ಯೋಹಾ 4:12ಅದೃಶ್ಯನೂ ಆಗಿರುವ *ಯೂದ 25ಏಕ ದೇವರಿಗೆ ಘನವೂ ಮಹಿಮೆಯೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.
18 ಮಗನಾದ ತಿಮೊಥೆಯನೇ, †1 ತಿಮೊ 4:14ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, ‡1 ಕೊರಿ 9:7; 2 ಕೊರಿ 10:4; 2 ತಿಮೊ 2:3,4ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ. 19 §1 ತಿಮೊ 3:9 ನಂಬಿಕೆಯನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಗಟ್ಟಿಯಾಗಿ ಹಿಡಿದುಕೊಂಡಿರು. ಕೆಲವರು ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ವಿಷಯದಲ್ಲಿ ಹಡಗು ಒಡೆದು, ನಷ್ಟಪಟ್ಟವರಂತೆ ಇದ್ದಾರೆ. 20 *2 ತಿಮೊ 2:7; ಹುಮೆನಾಯನೂ †1 ತಿಮೊ 4:14ಅಲೆಕ್ಸಾಂದರನೂ ಇಂಥವರೇ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ‡ಕೊರಿ 5:5ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.
1 ತಿಮೊಥೆಯನಿಗೆ 2 ->
- a ಕೊಲೊ 1:27
- b 2 ಕೊರಿ 1:1
- c ತೀತ 1:4
- d 2 ತಿಮೊ 1:2; 2 ಯೊಹಾ 3; ಯೂದ 2
- e 1 ತಿಮೊ 6:3 ಗಲಾ 1:6,7
- f 1 ತಿಮೊ 4:7; 2 ತಿಮೊ 4:4; ತೀತ 1:14; 2 ಪೇತ್ರ 1:16
- g ತೀತ 3:9
- h 1 ತಿಮೊ. 6:4
- i 2 ತಿಮೊ. 2:22
- j 1 ಪೇತ್ರ. 3:16, 21
- k 2 ತಿಮೊ 1:5
- l ತೀತ 1:10
- m 1 ತಿಮೊ 6:4; ಕೊಲೊ 2:18
- n ರೋಮ 7:16
- o ಗಲಾ 5:23
- p 2 ತಿಮೊ 4:3; ತೀತ 1:9; 2:1; 1 ತಿಮೊ 6:3; 2 ತಿಮೊ 1:13; ತೀತ 1:13, 2:2
- q 1 ತಿಮೊ 6:15
- r 2 ಕೊರಿ 4:4
- s ತೀತ 1:3,4; ಗಲಾ 2:7
§1:12-13
ಆ. ಕೃ 9:22; ಫಿಲಿ 4:13; 2 ತಿಮೊ 4:17
*1:12-13
ಆ. ಕೃ 8:3
†1:12-13
2 ಕೊರಿ 3:6
‡1:12-13
ಆ. ಕೃ. 3:17
§1:12-13
1 ಕೊರಿ 7:25; 2 ಕೊರಿ 4:1
- y ರೋಮ 5:20
- z ಲೂಕ 7:47, 50; 1 ಥೆಸ. 1:3
- aa ಮತ್ತಾ 9:13; ಯೋಹಾ 3:17; ರೋಮ 4:25
- bb 1 ತಿಮೊ 3:1; 4:9; 2 ತಿಮೊ. 2:11; ತೀತ 3:8
- cc 1 ಕೊರಿ 15:9
- dd ಪ್ರಕ 15:3; 4:9,10
- ee 1 ತಿಮೊ 6:15,16; ರೋಮ 1:23
- ff ಯೋಹಾ 1:18; ಕೊಲೊ 1:15; ಇಬ್ರಿ 11:27; 1 ಯೋಹಾ 4:12
- gg ಯೂದ 25
- hh 1 ತಿಮೊ 4:14
- ~35~ 1 ಕೊರಿ 9:7; 2 ಕೊರಿ 10:4; 2 ತಿಮೊ 2:3,4
- ~36~ 1 ತಿಮೊ 3:9
- ~37~ 2 ತಿಮೊ 2:7;
- ~38~ 1 ತಿಮೊ 4:14
- ~39~ ಕೊರಿ 5:5
1 ನಮ್ಮ ರಕ್ಷಕನಾದ ದೇವರ *ಕೊಲೊ 1:27ನಮ್ಮ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತ ಯೇಸುವಿನ ಆಜ್ಞೆಯ ಮೇರೆಗೆ ನೇಮಿಸಲ್ಪಟ್ಟ ಕ್ರಿಸ್ತ ಯೇಸುವಿನ †2 ಕೊರಿ 1:1ಅಪೊಸ್ತಲನಾದ ಪೌಲನು 2 ‡ತೀತ 1:4ನಂಬಿಕೆಯ ವಿಷಯದಲ್ಲಿ ನಿಜಕುಮಾರನಾಗಿರುವ ತಿಮೊಥೆಯನಿಗೆ ಬರೆಯುವುದೇನೆಂದರೆ, §2 ತಿಮೊ 1:2; 2 ಯೊಹಾ 3; ಯೂದ 2ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಉಂಟಾಗಲಿ.
12-13 §ಆ. ಕೃ 9:22; ಫಿಲಿ 4:13; 2 ತಿಮೊ 4:17ನನಗೆ ಬಲವನ್ನು ದಯಪಾಲಿಸಿದವನು ನಮ್ಮ ಕರ್ತನಾದ ಯೇಸು ಕ್ರಿಸ್ತನೇ. ಅದಕ್ಕಾಗಿ ನಾನು ಕೃತಜ್ಞತೆಯುಳ್ಳವನಾಗಿದ್ದೇನೆ. ಮೊದಲು ದೂಷಕನೂ, *ಆ. ಕೃ 8:3ಹಿಂಸಕನೂ, ಕೇಡುಮಾಡುವವನೂ ಆಗಿದ್ದ ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ, †2 ಕೊರಿ 3:6ತನ್ನ ಸೇವೆಗೆ ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರಮಾಡುತ್ತೇನೆ. ನಾನು ಅಜ್ಞಾನಿಯಾಗಿ ‡ಆ. ಕೃ. 3:17ತಿಳಿಯದೆ ಅಪನಂಬಿಕೆಯಲ್ಲಿ ಆ ರೀತಿ ನಡೆದುಕೊಂಡದ್ದರಿಂದ §1 ಕೊರಿ 7:25; 2 ಕೊರಿ 4:1ನನ್ನ ಮೇಲೆ ಆತನಿಗೆ ಕರುಣೆ ಉಂಟಾಯಿತು; 14 ಆದರೆ *ರೋಮ 5:20ನಮ್ಮ ಕರ್ತನ ಕೃಪೆಯು ಅತ್ಯಧಿಕವಾಗಿದ್ದು ಕ್ರಿಸ್ತಯೇಸುವಿನಲ್ಲಿರುವ †ಲೂಕ 7:47, 50; 1 ಥೆಸ. 1:3ನಂಬಿಕೆಯನ್ನೂ ಪ್ರೀತಿಯನ್ನೂ ನನ್ನಲ್ಲಿ ಉಕ್ಕಿಸಿತ್ತು. 15 ‡ಮತ್ತಾ 9:13; ಯೋಹಾ 3:17; ರೋಮ 4:25ಕ್ರಿಸ್ತಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು §1 ತಿಮೊ 3:1; 4:9; 2 ತಿಮೊ. 2:11; ತೀತ 3:8ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ, ಯಾಕೆಂದರೆ *1 ಕೊರಿ 15:9 ಆ ಎಲ್ಲಾ ಪಾಪಿಗಳಲ್ಲಿ ನಾನೇ ಪ್ರಮುಖನು. 16 ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ, ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸುವು ಪಾಪಿಗಳಲ್ಲಿ ಪ್ರಮುಖನಾಗಿದ್ದ ನನ್ನನ್ನು ಕರುಣಿಸಿ, ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು. 17 †ಪ್ರಕ 15:3; 4:9,10ಸರ್ವಯುಗಗಳ ಅರಸನೂ, ‡1 ತಿಮೊ 6:15,16; ರೋಮ 1:23ಅಮರನೂ, §ಯೋಹಾ 1:18; ಕೊಲೊ 1:15; ಇಬ್ರಿ 11:27; 1 ಯೋಹಾ 4:12ಅದೃಶ್ಯನೂ ಆಗಿರುವ *ಯೂದ 25ಏಕ ದೇವರಿಗೆ ಘನವೂ ಮಹಿಮೆಯೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.
18 ಮಗನಾದ ತಿಮೊಥೆಯನೇ, †1 ತಿಮೊ 4:14ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, ‡1 ಕೊರಿ 9:7; 2 ಕೊರಿ 10:4; 2 ತಿಮೊ 2:3,4ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ. 19 §1 ತಿಮೊ 3:9 ನಂಬಿಕೆಯನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಗಟ್ಟಿಯಾಗಿ ಹಿಡಿದುಕೊಂಡಿರು. ಕೆಲವರು ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ವಿಷಯದಲ್ಲಿ ಹಡಗು ಒಡೆದು, ನಷ್ಟಪಟ್ಟವರಂತೆ ಇದ್ದಾರೆ. 20 *2 ತಿಮೊ 2:7; ಹುಮೆನಾಯನೂ †1 ತಿಮೊ 4:14ಅಲೆಕ್ಸಾಂದರನೂ ಇಂಥವರೇ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ‡ಕೊರಿ 5:5ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.
1 ತಿಮೊಥೆಯನಿಗೆ 2 ->- a ಕೊಲೊ 1:27
- b 2 ಕೊರಿ 1:1
- c ತೀತ 1:4
- d 2 ತಿಮೊ 1:2; 2 ಯೊಹಾ 3; ಯೂದ 2
- e 1 ತಿಮೊ 6:3 ಗಲಾ 1:6,7
- f 1 ತಿಮೊ 4:7; 2 ತಿಮೊ 4:4; ತೀತ 1:14; 2 ಪೇತ್ರ 1:16
- g ತೀತ 3:9
- h 1 ತಿಮೊ. 6:4
- i 2 ತಿಮೊ. 2:22
- j 1 ಪೇತ್ರ. 3:16, 21
- k 2 ತಿಮೊ 1:5
- l ತೀತ 1:10
- m 1 ತಿಮೊ 6:4; ಕೊಲೊ 2:18
- n ರೋಮ 7:16
- o ಗಲಾ 5:23
- p 2 ತಿಮೊ 4:3; ತೀತ 1:9; 2:1; 1 ತಿಮೊ 6:3; 2 ತಿಮೊ 1:13; ತೀತ 1:13, 2:2
- q 1 ತಿಮೊ 6:15
- r 2 ಕೊರಿ 4:4
- s ತೀತ 1:3,4; ಗಲಾ 2:7
§1:12-13 ಆ. ಕೃ 9:22; ಫಿಲಿ 4:13; 2 ತಿಮೊ 4:17
*1:12-13 ಆ. ಕೃ 8:3
†1:12-13 2 ಕೊರಿ 3:6
‡1:12-13 ಆ. ಕೃ. 3:17
§1:12-13 1 ಕೊರಿ 7:25; 2 ಕೊರಿ 4:1
- y ರೋಮ 5:20
- z ಲೂಕ 7:47, 50; 1 ಥೆಸ. 1:3
- aa ಮತ್ತಾ 9:13; ಯೋಹಾ 3:17; ರೋಮ 4:25
- bb 1 ತಿಮೊ 3:1; 4:9; 2 ತಿಮೊ. 2:11; ತೀತ 3:8
- cc 1 ಕೊರಿ 15:9
- dd ಪ್ರಕ 15:3; 4:9,10
- ee 1 ತಿಮೊ 6:15,16; ರೋಮ 1:23
- ff ಯೋಹಾ 1:18; ಕೊಲೊ 1:15; ಇಬ್ರಿ 11:27; 1 ಯೋಹಾ 4:12
- gg ಯೂದ 25
- hh 1 ತಿಮೊ 4:14
- ~35~ 1 ಕೊರಿ 9:7; 2 ಕೊರಿ 10:4; 2 ತಿಮೊ 2:3,4
- ~36~ 1 ತಿಮೊ 3:9
- ~37~ 2 ತಿಮೊ 2:7;
- ~38~ 1 ತಿಮೊ 4:14
- ~39~ ಕೊರಿ 5:5