9 ಸಹೋದರರೇ, ನಾವು ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು [r]ಹಗಲಿರುಳು ದುಡಿಯುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು. [s]ಆ ನಮ್ಮ ಕಷ್ಟವೂ ಪ್ರಯಾಸಗಳು ನಿಮ್ಮ ನೆನಪಿನಲ್ಲಿರಲಿ. 10 ನಂಬುವವರಾದ ನಿಮ್ಮ ವಿಷಯದಲ್ಲಿ [t]ನಾವು ಎಷ್ಟೋ ನಿರ್ಮಲರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬುದಕ್ಕೆ ನೀವು ಮತ್ತು [u]ದೇವರೂ ಸಾಕ್ಷಿಗಳಾಗಿದ್ದೀರಿ. 11 [v]ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಬುದ್ಧಿ ಹೇಳುತ್ತಾ, 12 ಧೈರ್ಯಪಡಿಸುತ್ತಾ ತನ್ನ ರಾಜ್ಯದಲ್ಲಿ ಮತ್ತು ಆತನ ಮಹಿಮೆಯಲ್ಲಿ ಪಾಲುಗಾರರಾಗುವುದಕ್ಕಾಗಿ [w]ಕರೆಯುವ ದೇವರಿಗೆ ತಕ್ಕಹಾಗೆ [x]ಯೋಗ್ಯರಾಗಿ ನೀವು ಜೀವಿಸಬೇಕೆಂದು ವಿಧಿಸಿದೆವೆಂಬುದು ನಿಮಗೇ ತಿಳಿದಿದೆ.
13 ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು [y]ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ [z]ಎಡೆಬಿಡದೆ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ಅದು ಸತ್ಯವಾಗಿ ದೇವರ ವಾಕ್ಯವೇ. [aa]ಆ ವಾಕ್ಯವು, ನಂಬುವವರಾದ ನಿಮ್ಮೊಳಗೆ ಕೆಲಸ ಮಾಡುತ್ತದೆ. 14 ಹೌದು, ಸಹೋದರರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಸಭೆಗಳನ್ನು[bb] ಅನುಸರಿಸುವವರಾಗಿದ್ದಿರಿ. [cc]ಅವರು ಯೆಹೂದ್ಯರಿಂದ ಅನುಭವಿಸಿದಂಥ ಕಷ್ಟಗಳನ್ನು [dd]ನೀವೂ ನಿಮ್ಮ ಸ್ವದೇಶದವರಿಂದ ಅನುಭವಿಸಿದಿರಿ. 15 [ee]ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು [ff]ಪ್ರವಾದಿಗಳನ್ನೂ ಕೊಂದರು ಹಾಗು ನಮ್ಮನ್ನೂ ಅಟ್ಟಿಬಿಟ್ಟರು. ಅವರು ದೇವರನ್ನು ಮೆಚ್ಚಿಸುವವರಲ್ಲ ಮತ್ತು ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ. 16 [gg]ಅನ್ಯಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೂ ಅಡ್ಡಿಮಾಡುತ್ತಾರೆ. ಹೀಗೆ ತಮ್ಮ ಪಾಪಕೃತ್ಯಗಳನ್ನು ಎಲ್ಲಾ ಕಾಲಗಳಲ್ಲಿಯೂ ಸಂಪೂರ್ಣಮಾಡುತ್ತಾರೆ. ಕಡೆಗೆ [hh]ದೇವರ ಕೋಪವು ಅವರ ಮೇಲೆ ಬರುತ್ತದೆ.
- a ಅಥವಾ, ನಾವು ನಿಮ್ಮಲ್ಲಿಗೆ ಬಂದದ್ದು ವ್ಯರ್ಥವಾಗಲಿಲ್ಲವೆಂತಲೂ.
- b ಅ. ಕೃ. 16:22-24:
- c ಅ. ಕೃ. 17:2-9:
- d 2 ಕೊರಿ 2:17:
- e 2 ಥೆಸ. 2:11:
- f 1 ಥೆಸ 4:7:
- g 2 ಕೊರಿ 4:2:
- h ಗಲಾ. 2:7:
- i ಗಲಾ. 1:10:
- j ಕೀರ್ತ 17:3; ರೋಮಾ. 8:27:
- k ಅ. ಕೃ. 20:33:
- l 1 ಥೆಸ. 2:10; ರೋಮಾ. 1:9:
- m 1 ಕೊರಿ 9:1:
- n ಅಥವಾ, ನಮ್ಮನ್ನು ಸಂರಕ್ಷಿಸಬೇಕಾದ ಹೊರೆಯನ್ನು ನಿಮ್ಮ ಮೇಲೆ ಹಾಕಬಹುದಾಗಿದ್ದರೂ. 1 ಕೊರಿ 9:4; 2 ಥೆಸ. 3:9; 1 ಥೆಸ. 2:9; 2 ಕೊರಿ 11:9:
- o 2 ಕೊರಿ 4:5; ಯೋಹಾ 5:41:
- p ವ. 11:
- q 2 ಕೊರಿ 12:15:
- r ಅ. ಕೃ. 18:3:
- s 2 ಥೆಸ. 3:8:
- t 1 ಥೆಸ. 1:5
- u ವ. 5 ನೋಡಿರಿ.
- v ವ. 7:
- w 1 ಥೆಸ. 5:24; 2 ಥೆಸ. 2:14; 1 ಪೇತ್ರ. 5:10:
- x ಎಫೆ 4:1:
- y ಗಲಾ. 4:14:
- z 1 ಥೆಸ. 1:2, 3
- aa ಇಬ್ರಿ. 4:12:
- bb 1 ಥೆಸ. 1:6:
- cc ಇಬ್ರಿ. 10:33,34:
- dd 1 ಥೆಸ. 3:4; ಅ. ಕೃ. 17:5; 2 ಥೆಸ. 1:4,5:
- ee ಲೂಕ 24:20:
- ff ಯೆರೆ 2:30; ಮತ್ತಾ 23:29-34; 5:12:
- gg ಅ. ಕೃ 13:45, 50; 14:2, 19; 17:5, 13; 18:12; 22:21 22:
- hh 1 ಥೆಸ. 1:10:
- ii 1 ಕೊರಿ 5:3; ಕೊಲೊ 2:5:
- jj 1 ಥೆಸ. 3:10:
- kk ರೋಮಾ. 1:13; 15:22:
- ll 1 ಥೆಸ. 3:13; 4:15; 5:23; ಮತ್ತಾ 24:3; 1 ಕೊರಿ 15:23; 2 ಥೆಸ. 2:1,8; ಯಾಕೋಬ 5:7,8; 2 ಪೇತ್ರ 1:16; 3:4, 12; 1 ಯೋಹಾ 2:28:
- mm ಫಿಲಿ. 4:1:
- nn 1 ಕೊರಿ 15:31; 2 ಥೆಸ. 1:4: